The director who came to Sandalwood from Bollywood “Simha”: Omkali film debut

ಬಾಲಿವುಡ್‍ನಿಂದ ಸ್ಯಾಂಡಲ್ ವುಡ್ ಗೆ ಬಂದ ನಿರ್ದೇಶಕ “ಸಿಂಹ’: ಓಂಕಾಳಿ ಚಿತ್ರ ಆರಂಭ - CineNewsKannada.com

ಬಾಲಿವುಡ್‍ನಿಂದ ಸ್ಯಾಂಡಲ್ ವುಡ್ ಗೆ ಬಂದ ನಿರ್ದೇಶಕ “ಸಿಂಹ’: ಓಂಕಾಳಿ ಚಿತ್ರ ಆರಂಭ

ಮುಂಬೈನಲ್ಲಿ ಕೆಲವು ಸೀರಿಯಲ್‍ಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಬೆನ್ನಿಗಿಟ್ಟುಕೊಂಡು ಸಿಂಹ ಅವರು ಇದೀಗ ಸ್ಯಾಂಡಲ್ ವುಡ್‍ಗೆ ನಿರ್ದೇಶಕರಾಗಿ ಪ್ರವೇಶ ಮಾಡಿದ್ದಾರೆ. ಅದುವೇ “ ಓಂಕಾಳಿ” ಮೂಲಕ. ಚಿತ್ರದ ಮುಹೂರ್ತ ನೆರವೇರಿದ್ದು ರೌಡಿಸಂ ಕಥೆ ಹೇಳಲು ಸಜ್ಜಾಗಿದ್ಧಾರೆ.

ನೋ ಪಾರ್ಕಿಂಗ್ ಎನ್ನುವ ಕಿರುಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಯೂಟ್ಯೂಬ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಓಂಕಾಳಿ ಸಿನಿಮಾ ನಿರ್ದೇಶಕ ಸಿಂಹ ಅವರ ಇಡೀ ಕುಟುಂಬದ ಕನಸು ಎಂದರೆ ತಪ್ಪಾಗಲಾರದು. ಅಪ್ಪನ ಉತ್ಸಾಹ ನೋಡಿ ಮಗನೇ ನಿರ್ಮಾಪಕರಾಗಿದ್ಧಾರೆ. ಮಗಳ ಆಸೆಗೆ ಅಪ್ಪನೇ ನಿರ್ದೇಶಕರಾಗಿದ್ದಾರೆ. ಇಡೀ ಸಿನಿಮಾದ ತಂಡಕ್ಕೆ ತಾಯಿಯ ಆಶೀರ್ವಾದವಿದೆ. ಹೀಗಾಗಿ ಈ ಸಿನಿಮಾ ಸಿಂಹ ಕುಟುಂಬದ ಕನಸಿನ ಕೂಸಾಗಿದೆ. ಈ ಕೂಸು ಇಂದಿನಿಂದ ಮುಹೂರ್ತ ಪಡೆದುಕೊಂಡಿದ್ದು, ಶೂಟಿಂಗ್ ಶುರು ಮಾಡಿದೆ.

ನಿರ್ದೇಶಕ ಸಿಂಹ ಮಾತನಾಡಿ, ಇದೊಂದು ರೌಡಿಸಂ ಬೇಸ್ ಸಿನಿಮಾ. ನಾನು ಸ್ವಂತವಾಗಿ ಬರೆದ ಕಥೆ. ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದಂತ ಕಥೆಯನ್ನೇ ಈಗ ಸಿನಿಮಾದ ಕಥೆಯಾಗಿ ಎಣೆಯಲಾಗಿದೆ. ಇದೊಂದು ಆಕ್ಷನ್ ಸಿನಿಮಾ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕೂಡ ಇದರಲ್ಲಿ ಇದೆ. ಈ ಸಿನಿಮಾಗೆ ಮಗನೇ ನಿರ್ಮಾಪಕ. ನನ್ನ ಕನಸ್ಸನ್ನು ಕಂಡು ಅವನೇ ಸಿನಿಮಾ ಮಾಡೋಣಾ ಅಂತ ಮಾಡಿದ್ದಾನೆ’ ಎಂದಿದ್ದಾರೆ.

ನಿರ್ಮಾಪಕ ಪ್ರತಾಪ್ ಸಿಂಹ ಮಾತನಾಡಿ, ‘ನಮ್ಮ ತಂದೆಗೆ ಸಿನಿಮಾ ಮಾಡಬೇಕು ಎಂಬ ಆಸೆ. ಅದಕ್ಕೆ ಅಂತ ಸಾಕಷ್ಟು ಪ್ರಾಕ್ಟೀಸ್ ಮಾಡಿದ್ದಾರೆ. ಎರಡು ವರ್ಷದಿಂದ ಕೂತು ಈ ಕಥೆಯನ್ನು ಎಣೆದಿದ್ದರು. ಒಂದು ದಿನ ನನ್ನ ಬಳಿ ಬಂದು ಈ ಕಥೆಯನ್ನು ಹೇಳಿದರು. ಹತ್ತು ನಿಮಿಷ ಕೇಳುವಷ್ಟರಲ್ಲೇ ಏನೋ ಒಂಥರ ಕುತೂಹಲ ಮೂಡುವಂತ ಕಥೆ ಅದಾಗಿತ್ತು. ಹೀಗಾಗಿ ಸಿನಿಮಾವನ್ನ ನಾವೇ ಮಾಡೋಣಾ ಎಂದು ಒಪ್ಪಿಕೊಂಡು, ಸಿನಿಮಾಗೆ ಹಣ ಹಾಕಿದೆ. ಸಿನಿಮಾದ ಮೇಲೆ ತಂದೆಗೆ ಪ್ಯಾಷನ್ ಇದೆ’ ಎಂದು ತಂದೆಯನ್ನು ಮಗ ಹಾಡಿ ಹೊಗಳಿದ್ದಾರೆ.

ನಟಿ ಪ್ರವಾಲಿಕ ಮಾತನಾಡಿ, ಈ ಸಿನಿಮಾದಲ್ಲಿ ಮಧ್ಯಮವರ್ಗದ ಹುಡುಗಿಯ ಪಾತ್ರ ಮಾಡಿದ್ದೀನಿ. ಹೆಚ್ಚು ಕಥೆಯನ್ನು ರಿವಿಲ್ ಮಾಡುವುದಕ್ಕೆ ಆಗಲ್ಲ. ಇದು ನನ್ನ ಮೊದಲ ಸಿನಿಮಾ. ಇದಕ್ಕೂ ಮುನ್ನ ಅಪ್ಪನೇ ನಿರ್ದೇಶನ ಮಾಡಿರುವ ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದ ಅನುಭವವಿದೆ’ ಎಂದಿದ್ದಾರೆ.

ನಟ ವಿಜಯ್ ರಾಜ್ ಮಾತನಾಡಿ, ನನಗೆ ಇದು ಮೊದಲ ಕನ್ನಡ ಸಿನಿಮಾ. ತೆಲುಗಿನಲ್ಲಿ ಮಾರ್ನಾಲ್ಕು ಸಿನಿಮಾ ಮಾಡಿದ್ದೀನಿ. ಕನ್ನಡದಲ್ಲಿ ಶಿವಣ್ಣ ಅವರ ಅಭಿಮಾನಿಯಾಗಿದ್ದೀನಿ. ಪೆÇೀಸ್ಟರ್ ನಲ್ಲಿ ನೋಡಬಹುದು. ತುಂಬಾ ಕುತೂಹಲ ಹುಟ್ಟಿಸುವಂತ ಕಥೆ. ಇದಕ್ಕಾಗಿ ನಾನು ಕೂಡ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ ಎಂದಿದ್ದಾರೆ.

40-45 ದಿನಗಳ ಕಾಲ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಬೆಂಗಳೂರು ಸುತ್ತ ಮುತ್ತವೆ ಶೂಟಿಂಗ್ ಮಾಡಲಾಗುತ್ತದೆ. ಬೆಂದಕಾಲ್ ಫಿಲ್ಮ್ಸ್ ಬ್ಯಾನರ್ ನಡಿ ಪ್ರತಾಪ್ ಸಿಂಹ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರವಿ ರಾಮದುರ್ಗ ಹಾಗೂ ಬಾಲ ನಾಗರಾಜ್ ಛಾಯಾಗ್ರಹಣ ಮಾಡಿದ್ದು, ಕೆವಿನ್ ಮ್ಯೂಸಿಕ್ ನೀಡಿದ್ದಾರೆ. ಉಳಿದಂತೆ ಪ್ರವಲಿಕಾ ನಾಯಕಿಯಾಗಿದ್ದು, ವಿಜಯ್ ರಾಜಾ ನಾಯಕರಾಗಿದ್ದಾರೆ. ಪದ್ಮಾವಾಸಂತಿ ಸೇರಿದಂತೆ ದೊಡ್ಡ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin