ತಂದೆ-ಮಗನ ಸಂಘರ್ಷದ ಕತೆ “ಯುವ” : ನಿರ್ದೇಶಕ ಸಂತೋಷ್ ಆನಂದ್ ರಾಮ್
ವರನಟ ಡಾ. ರಾಜ್ ಕುಮಾರ್ ಮೊಮ್ಮಗ ಯುವ ರಾಜ್‍ಕುಮಾರ್ ನಟನೆಯ ಚೊಚ್ಚಲ ಚಿತ್ರ “ಯುವ” ಮಾರ್ಚ್ 29ರಂದು ತೆರೆಗೆ ಬರಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಯುವ ನಟನಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್‍ಕಟ್ ಹೇಳಿದ್ಧಾರೆ. ಈ ಮೂಲಕ ಹೊಸಬರಿಗೂ ಚಿತ್ರ ನಿರ್ದೇಶನ ಮಾಡಬಲ್ಲೆ, ಅದೇ ಸ್ಟಾರ್ ನಟರಿಗೂ ಚಿತ್ರ ಮಾಡಬಲ್ಲೆ ಎನ್ನುವುದನ್ನು ನಿರೂಪಿಸಿದ್ಧಾರೆ.
“ಯುವ” ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಅಲ್ಲಿ ಮಾತಿಗಿಳಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವ, ತಂದೆ-ಮಗನ ಸಂಘರ್ಷದ ಕಥೆ ಚಿತ್ರದ ಜೀವಾಳ ಇದರ ಜೊತೆಗೆ ಕಾಲೇಜು ಜೀವನ ಮುಗಿಸಿದ ಬಳಿಕ ಬದುಕಿನ ಪ್ರಶ್ನೆ ಎದುರಾಗ ಬದುಕು ಕಟ್ಟಿಕೊಳ್ಳಲು ನಡೆಸುವ ಹರಸಾಹಸ ಸೇರಿದಂತೆ ಹಲವು ವಿಷಯಗಳು ಚಿತ್ರದಲ್ಲಿವೆ. ಅವರ ಮಾತಿನ ವಿವರ ಇಲ್ಲಿದೆ.
ಪ್ರೀತಿಗಾಗಿ ಮಾಡಿದ ಸಿನಿಮಾ
“ಯುವ” ದುಡ್ಡಿಗಾಗಿ ಮಾಡಿದ ಸಿನಿಮಾ ಅಲ್ಲ, ಪ್ರೀತಿಗಾಗಿ ಮತ್ತು ಬದ್ದತೆಗಾಗಿ ಮಾಡಿದ ಸಿನಿಮಾ, ನಟ ಯುವ ಕೂಡ ತರಬೇತಿ ಪಡೆದು ಬಂದಿದ್ದರಿಂದ ನನಗೆ ಎಲ್ಲಿಯೂ ಕಷ್ಟ ಆಗಲಿಲ್ಲ. ಜೊತೆಗೆ ವರ್ಕ್‍ಶಾಪ್ ಮಾಡಲಾಗಿತ್ತು. ಇದರಿಂದ ನಟನೆ ತೆಗೆಸುವುದು ಸುಲಭವಾಯಿತು .
ಚಿತ್ರದ ಮೊದಲರ್ದ ನಾಯಕ ಸುತ್ತಾ ಕಥೆ ಸಾಗಲಿದೆ. ಸೆಕೆಂಡ್‍ಆಫ್‍ನಲ್ಲಿ ನಟ ಯುವ ಪಾತ್ರವನ್ನು ಕಥೆಯಲ್ಲಿ ಬ್ಲೆಂಡ್ ಮಾಡಿ ಸನ್ನಿವೇಶಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದೇವೆ. ಚಿತ್ರದಲಿ ಫೈಟು, ಡ್ಯಾನ್ಸ್ ಸೂಪರ್ ಆಗಿ ಮಾಡಿದ್ದಾರೆ. ಅಭಿನಯ ಕೂಡ ಆಶ್ಚರ್ಯ ತರಿಸಿದೆ. ಮೊದಲ ಸಿನಿಮಾದಲ್ಲಿ ಮೆಚ್ಯೂರ್ ಆಗಿ ಕಾಣೋದು ಅಪರೂಪ. ಪ್ರಭುದ್ದತೆಯಿಂದ ನಟಿಸಿದ್ಧಾರೆ.
ಅಪ್ಪು ಸರ್ ಛಾಯೆ ಕಾಣಲಿದೆ:
ಅಪ್ಪು ಸಾರ್ ನಂತರ ಗುರು ಸಿನಿಮಾ ರಂಗಕ್ಕೆ ಬರಬೇಕು ಎಂದು ಕಾಯುತ್ತಿದ್ದರು. ಅದಕ್ಕೆ ಪೂರಕವಾಗಿ ಯುವ ಚಿತ್ರ ಬರುತ್ತಿದೆ. ನಟನೆಯಲ್ಲಿ ಪ್ರಬುದ್ದತೆ ಕಾಣುತ್ತಿದೆ. ಚಿತ್ರದಲ್ಲಿ ತಂದೆ ಮಗನ ಸಂಘರ್ಷವಿದೆ. ಕಾಲೇಜು ಮುಗಿದ ನಂತರ ಬದುಕಿನ ಹೋರಾಟದ ಕಥನವೂ ಇದೆ.
ಚಿತ್ರದಲ್ಲಿ ಅಪ್ಪು ಸಾರ್ ಅವರಗಾಲಿ ಅಥವಾ ರಾಜ್‍ಕುಮಾರ್ ಸೇರಿದಂತೆ ಅವರ ಕುಟುಂಬದ ಯಾರೊಬ್ಬರು ಕಾಣಿಸಿಕೊಳ್ಳುವುದಿಲ್ಲ. ಆದರೆ ಅಪ್ಪು ಸಾರ್ ಮಾಡಿರುವ ಕೆಲಸಗಳ ರೆಫರೆನ್ಸ್ ಇದೆ.
ಚಿತ್ರದಲ್ಲಿ ಮೊದಲರ್ದ ಕಾಲೇಜು ಗ್ಯಾಂಗ್ ವಾರ್ ದ್ವಿತೀಯಾರ್ದದಲ್ಲಿ ಡೆಲಿವರಿ ಬಾಯ್ ಆಗಿ “ಯುವ” ಕಾಣಿಸಿಕೊಂಡಿದ್ದಾರೆ ಎಲ್ಲರಗೂ ಇಷ್ಟವಾಗಲಿದೆ , ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ನಟ ಯುವ ಪ್ರಬುದ್ದ ನಟ ರೀತಿ ನಟಿಸಿದ್ದಾರೆ. ಇದೂ ಕೂಡ ಚಿತ್ರೀಕರಣದ ಸಮಯದಲ್ಲಿ ನನ್ನ ಆತಂಕ ದೂರ ಮಾಡಿತು. ಕನ್ನಡ ಚಿತ್ರರಂಗಕ್ಕ ಮತ್ತೊಬ್ಬ ಭರವಸೆಯ ನಟ ಸಿಗುವುದರಲ್ಲಿ ಅನುಮಾನ ವಿಲ್ಲ
350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ
ಯುವ ಚಿತ್ರವನ್ನು ಸದ್ಯ ಕನ್ನಡ ಭಾಷೆಯಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ. 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿದ ಬಳಿಕ ಬೇರೆ ಭಾಷೆಗೆ ಡಬ್ ಮಾಡುವ ಪ್ರಯತ್ನ ನಡೆಯುತ್ತಿದೆ.
ಚಿತ್ರದಲ್ಲಿರುವ ಕಥಾ ವಸ್ತು ಈಗಿನ ಕಾಲಕ್ಕೆ ಸೂಕ್ತವಾಗಿದೆ, ನೋಡಿರುವುದು, ಕೇಳಿರುವುದು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಂದೆ ಮಗನ ಸಂಘರ್ಷ ಬೇರೆ ಬೇರೆ ಕಾರಣಕ್ಕೆ ನಡೆಯುತ್ತದೆ ಅದನ್ನು ಮನ ಮುಟ್ಟುವ ರೀತಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಜವಾಬ್ದಾರಿಯಿಂದ ಸಿನಿಮಾ:
ಅಣ್ಣಾವ್ರ ಕುಟುಂಬದ ಕುಡಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಕೆಲಸ ಮಾಡಿದ ಯಾವ ಟೆಕ್ನೀಷಿಯನ್ ನಿಂದ ಇಡಿದು ಯಾರೊಬ್ಬರೂ ಬುಸಿನೆಸ್ ರೀತಿ ನೋಡಿಲ್ಲ. ಕಮಿಟ್‍ಮೆಂಟ್ ಮತ್ತು ಗೌರವ ದಿಂದ ಕೆಲಸ ಮಾಡಿದ್ದಾರೆ.
ಕಥೆ,ಸನ್ನಿವೇಶ ತಲೆ ಇತ್ತು, ನಾಯಕನ ರೂಪ ನೀಡಿ ಸಿನಿಮಾ ಮಾಡಿದ್ದೇವೆ. ಮೊದಲರ್ದ ನಾಯಕ ಸುತ್ತಾ ಕಥೆ ಸಾಗಲಿದೆ. ಕಾಲೇಜು ಹೊಡೆದಾದಲ್ಲಿ ನಿತರನಾದ ವ್ಯಕ್ತಿ ಬದುಕಿಗೆ ಪರಿಚಯವಾದಾಗ ಹೇಗೆಲ್ಲಾ ಬದಲಾಗುತ್ತಾನೆ ಎನ್ನುವ ತಿರಳನ್ನು ಚಿತ್ರ ಒಳಗೊಂಡಿದೆ. ತಂದೆ ಮಗನ ಸಂಘರ್ಷ, ಅವರ ತಪ್ಪು ಗ್ರಹಿಕೆ ಏನೆಲ್ಲಾ ಆಗಲಿದೆ. ತಂದೆ- ಮಗ ಕೊನೆಗೆ ರಿಯಲೈಸ್ ಆಗ್ತಾರಾ ಇಲ್ಲವೆ ಎನ್ನುವುದು ತಿರುಳು
ಅಲ್ಲಲ್ಲಿ ಅಪ್ಪು ಸರ್, ಶಿವಣ್ಣ ನೆನಪಾಗುತ್ತಾರೆ:
ಚಿತ್ರ ನೋಡುತ್ತಿದ್ದರೆ ಯುವ ಅವರರಲ್ಲಿ ಅಲ್ಲಲ್ಲಿ ಅಪ್ಪು ಸರ್ ಮತ್ತು ಶಿವಣ್ಣ ನೆನಪಾಗುತ್ತಾರೆ. ಆದರೆ ಯುವ ಎಲ್ಲಿಯೂ ಸ್ವಂತಿಕೆ ಬಿಟ್ಟುಕೊಟ್ಟಿಲ್ಲ. ರಾಜ್ ಫ್ಯಾಮಿಲಿ ಗಾಡಿ ನಂಬರ್ ಅನ್ನು ಬೇಕು ಅಂತಲೇ ಹಾಕಿದ್ದೇವೆ. ಇದೇ ಮೊದಲ ಬಾರಿಗೆ ರಾಜ್‍ಕುಮಾರ್ ಕುಟುಂಬದ ನಟರೊಬ್ಬರು ಗಡ್ಡ ಮೀಸೆಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಈಗಿನ ಟ್ರೆಂಡ್ ಕೂಡ . ಹುಡುಗರಿಗೆ ಇಷ್ಟವಾಗಲಿದೆ. ರಗಡ್ ಪಾತ್ರ.
ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಯುಗಾದಿದ ರಜೆ, ಪರೀಕ್ಷೆ ಮುಗಿದಿರುವುದು , ಎಲೆಕ್ಷನ್ ಮೂರುವಾರ ದಊರು ಇರುವುದು ಸೇರಿದಂತೆ ಹಲವು ವಿಷಯಗಳು ಚಿತ್ರಕ್ಕೆ ಫ್ಲಸ್ ಆಗಲಿದೆ. ಚಿತ್ರದಲ್ಲಿ ಆಂತರಿಕೆ ಮತ್ತು ಬಾಹ್ಯಾ ಹೋರಾಟ ಇರಲಿದೆ ಎಂದರು ನಿರ್ದೇಶಕ ಸಂತೋಷ್ ಆನಂದ್ ರಾಮ್.