ದೊಡ್ಮನೆಯಿಂದ ಮತ್ತೊಂದು “ಯುವ” ತಾರೆ ಉದಯಕ್ಕೆ ಮುಹೂರ್ತ ನಿಗಧಿ
ದೊಡ್ಮನೆ ಕುಟುಂಬದ ಕುಡಿ “ಯುವ ರಾಜ್‍ಕುಮಾರ್” ಅಭಿನಯದ ಚೊಚ್ಚಲ ಚಿತ್ರ “ಯುವ” ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದೆ. ಇದೇ ತಿಂಗಳ 29 ರಂದು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ಯುವ” ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಕನ್ನಡ ಚಿತ್ರರಂಗ ಮತ್ತೊಬ್ಬ ಭರವಸೆಯ “ಯುವ ತಾರೆ” ಯನ್ನು ಸ್ವಾಗತಿಸಲು ಸಜ್ಜಾಗಿದೆ.
ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಸಮಯದಲ್ಲಿ ಚಿತ್ರದ ಪ್ರಚಾರ ಕಾರ್ಯವೂ ಬಿರುಸುಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆಗೆ ಮುನ್ನ ಜನರಿಗೆ ತಲುಪುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ನಟ ಯುವ ರಾಜ್ ಕುಮಾರ್ ಚಿತ್ರಕ್ಕಾಗಿ ಪಟ್ಟ ಕಷ್ಟ ಮತ್ತು ಚಿತ್ರ ಬಿಡುಗಡೆಯ ಖುಷಿ ಸಂತಸ ಹಂಚಿಕೊಂಡರು.
ಭಯದ ಜೊತೆಗೆ ಭರವಸೆ
“ಯುವ” ಚಿತ್ರ ಮಾರ್ಚ್ 29ಕ್ಕೆ ಕನ್ನಡದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಮೂಡಿ ಬಂದಿರುವ ಪರಿ ಖುಷಿ ಹೆಚ್ಚಿಸಿದೆ, ಈ ಹೊತ್ತಿನಲ್ಲಿ ಚಿತ್ರದ ಬಗ್ಗೆ ಭರವಸೆ ಹೆಚ್ಚಿದೆ, ನಾವು ಸರಿಯಾಗಿ ಮಾಡಿದ್ದೇವೆ. ಆದರೂ ಜನ ಯಾವ ರೀತಿ ಚಿತ್ರವನ್ನು ತೆಗೆದುಕೊಳ್ಳುತ್ತಾರೋ ಎನ್ನುವ ಅಂಜಿಕೆ ಅಳುಕೂ ಇದೆ.
‘ಯುವ ರತ್ನ” ಚಿತ್ರದ ಚಿತ್ರೀಕರಣದ ಸಮಯದಲ್ಲಿ ಯಾವುದಾದರೂ ಕತೆ ಇದ್ದರೆ ಹೇಳಿ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನು ಕೇಳಿದ್ದೆ, ಒಳ್ಳೆಯ ಕಥೆ ಸಿಕ್ಕರೆ ಹೇಳುತ್ತೇನೆ ಎಂದಿದ್ದರು. ಅದಕ್ಕೆ ತಕ್ಕಂತೆ ಈಗ ಕಥೆ ಸಿಕ್ಕಿ ಚಿತ್ರೀಕರಣ ಆರಂಭವಾಗಿದೆ. ಬಿಡುಗಡೆಗೂ ಸಜ್ಜಾಗಿದೆ. ಚಿತ್ರಕ್ಕೆ ಸರ್ವ ರೀತಿಯಲ್ಲಿಯೂ ಸಜ್ಜಾಗಿದ್ದು ಎಲ್ಲಾ ಎಫರ್ಟ್ ಹಾಕಿದ್ದೇನೆ ಇನ್ನು ಜನರು ಸಿನಿಮಾ ನೋಡಿ ನಮ್ಮ ಪ್ರಯತ್ನದ ಬಗ್ಗೆ ಹೇಳಬೇಕು. “ಹೊಂಬಾಳೆ” ಸಂಸ್ಥೆಯೊಂದಿಗೆ ಇನ್ನೂ ಹಲವು ಚಿತ್ರ ಮಾಡುವ ಆಸೆ ಇದೆ.
ತಂದೆ –ಮಗನ ಬಾಂಧವ್ಯಕ್ಕೆ ಒತ್ತು
ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತದೆ. ಕಥೆಯೂ ಕೂಡ ನನಗೆ ತುಂಬಾ ಆಪ್ತವಾಯಿತು.
ಚಿತ್ರದ ಕೆಲವೊಂದು ಭಾಗ ಸನ್ನಿವೇಶಗಳನ್ನು ಅಪ್ಪ, ಅಮ್ಮ, ದೊಡ್ಡಪ್ಪ, ಅಶ್ವಿನಿ ಆಂಟಿ ಸೇರಿದಂತೆ ಕುಟುಂಬದ ಹಲವು ಮಂದಿ ನೋಡಿ ಖುಷಿಪಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಅವರೆಲ್ಲಾ ಎದುರು ನೋಡುತ್ತಿದ್ದಾರೆ.ಹೀಗಾಗಿ ಮೊದಲ ಚಿತ್ರ ಬಿಡುಗಡೆಗೆ ನಾನೂ ಖುಷಿ ಇಂದ ಎದುರು ನೋಡುತ್ತಿದ್ದೇನೆ.
ಅಣ್ಣನಿಂದ ಕಲಿತಿದ್ದು ಏನು
ಅಣ್ಣ ವಿನಯ್ ರಾಜ್ ಕುಮಾರ್ ಅವರಿಂದ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಆತ ಚಿತ್ರರಂಗದಲ್ಲಿ ಮಾಡಿದ ತಪ್ಪುಗಳು ಸರಿಪಡಿಸಿಕೊಂಡ ಬಗೆ ತಿಳಿದು ನಾನೂ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇನೆ. ಯಾವುದೇ ಚಿತ್ರ ಅಥವಾ ಕತೆ ಇರಲಿ ಅಣ್ಣನ ಜೊತೆ ಚರ್ಚೆ ಮಾಡುತ್ತೇನೆ.
‘ಯುವ” ಸಂಪೂರ್ಣ ಮನರಂಜನೆಯ ಅಂಶಗಳು ಚಿತ್ರದಲ್ಲಿವೆ ಎಲ್ಲರಿಗೂ ಇಷ್ಟವಾಗಲಿದೆ, ಚಿತ್ರ ಎರಡೂವರೆ ಅಥವಾ ಮೂರು ಗಂಟೆ ಇರಲಿ ಮನರಂಜನೆಗಾಗಿ ಚಿತ್ರಮಂದಿರಕ್ಕೆ ಜನ ಬರುತ್ತಾರೆ. ಚಿತ್ರ ನೋಡುವಾಗ ಅವರು ಎಂಜಾಯ್ ಮಾಡುವ ರೀತಿ ಚಿತ್ರ ಇರಬೇಕು.
ಮೊದಲ ಸಿನಿಮಾ ತಯಾರಿ ಹೇಗಿತ್ತು:
ಮೊದಲಿನಿಂದಲೂ ನಟನಾಗುವ ಆಸೆ ಇತ್ತು ಆದರೆ ಮನೆಯಲ್ಲಿ ಹೇಳಿರಲಿಲ್ಲ.ಇಂಡಸ್ಟ್ರಿಗೆ ಬರುವ ಮುನ್ನ ಡಿಗ್ರಿ ಪಡಿಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಆರ್ಕಿಟೆಕ್ ಮುಗಿಸಿದೆ. ಆನಂತರ ಮುಂಬೈ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದೆ. ನನ್ನ ಮೇಲೆ ನನಗೆ ಭರವಸೆ ಬಂದ ಮೇಲೆ ಸಿನಿಮಾಕ್ಕೆ ಬರಲು ಒಪ್ಪಿಕೊಂಡೆ.
ನಿಮ್ಮ ರೋಲ್ ಮಾಡೆಲ್ ಯಾರು”
ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ನನ್ನ ರೊಲ್ ಮಾಡಲ್, ಡೊಡ್ಡಪ್ಪ ಶಿವರಾಜ್ ಕುಮಾರ್ ಅನ್ನು ಹೆಚ್ಚು ಅಬ್‍ಸರ್ವ್ ಮಾಡುತ್ತೇನೆ. ಜೊತೆಗೆ ತಾತ ಡಾ, ರಾಜ್‍ಕುಮಾರ್ ಅವರ ಚಿತ್ರಗಳನ್ನು ನೋಡುತ್ತೇನೆ, ಚಿತ್ರದ ಕತೆಗೆ ಪಾತ್ರಕ್ಕೆ ಯಾವುದು ಸೂಕ್ತ ಅದನ್ನು ಅಳವಡಿಸಿಕೊಳ್ಳುತ್ತೇನೆ, ಜೊತೆ ಜೊತೆಗೆ ಸ್ವಂತಿಕೆ ಸೃಷ್ಠಿಗೆ ಒತ್ತು ನೀಡಿದ್ದೇನೆ, ಅವರನ್ನು ಕಾಪಿ ಮಾಡುವ ಆಸೆ ಇಲ್ಲ,
ಮೊದಲ ಚಿತ್ರ ನಿಮ್ಮ ತಪ್ಪುಗಳು ಕಂಡಿದೆಯಾ
ಮೊದಲ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ನಟಿಸಿದ್ದೇನೆ. ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ. ನನ್ನ ಪರಿಪೂರ್ಣ ಶ್ರಮ ಹಾಕಿದ್ದೇನೆ. ಏನಾದರೂ ತಪ್ಪು ಕಂಡು ಬಿಟ್ಟಾಯಿತೋ ಎನ್ನುವ ಕಾರಣಕ್ಕೆ ಸಿನಿಮಾ ನೋಡಿಲ್ಲ. ಒಂದು ವೇಳೆ ನೋಡಿದರೆ ತಪ್ಪು ಕಾಣಬಹುದು. ಹೀಗಾಗಿ ಪೂರ್ಣ ಸಿನಿಮಾ ನೋಡಲು ಹೋಗಿಲ್ಲ.
ಹಾಗಂತ ನಮ್ಮ ಪ್ರಯತ್ನದಲ್ಲಿ ಎಳ್ಳಷ್ಟು ಲೋಪವಿಲ್ಲದಂತೆ ಸಿನಿಮಾ ಮಾಡಿದ್ದೇನೆ. ಅದಕ್ಕಾಗಿ ಇಡೀ ತಂಡೆ ನನ್ನ ಜೊತೆಯಾಗಿ ನಿಂತಿದೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ
ಸಿನಿಮಾ ಎಂದರೆ ನಿಮ್ಮ ದೃಷ್ಠಿಯಲ್ಲಿ .
ಸಿನಿಮಾ ಸಂಪೂರ್ಣ ಮನರಂಜನೆ. ಎರಡೂ ಮೂರು ಗಂಟೆ ಇರಲಿ ಎಲ್ಲವನ್ನೂ ಮರೆತು ಬಿಟ್ಟು ಸಿನಿಮಾ ನೋಡಬೇಕು. ಆ ರೀತಿಯ ಸಿನಿಮಾ ಯುವ. ಕಂಟೆಂಟ್ ಜೊತೆಗೆ ಮೆಸೇಜ್, ಫ್ಯಾಮಿಲಿ ಬಾಂಡಿಂಗ್ ಇದೆ. ಜೊತೆಗೆ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ. ನನ್ನ ಪಾತ್ರಕ್ಕಾಗಿ ಮೂರು ಬಾರಿ ಡಬ್ಬಿಂಗ್ ಮಾಡಿದ್ದೇನೆ ಅಂತಿಮವಾಗಿ ಮೂರು ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದೇನೆ.
ಚಿಕ್ಕಪ್ಪನ ಸ್ಟೈಲ್ ಕಾಪಿ ಮಾಡಲು ಬರುವುದಿಲ್ಲ, ಜೊತೆಗೆ ಅವರ ರೀತಿ ಡ್ಯಾನ್ಸ್ ಕೂಡ ಮಾಡಲು ಬರುವುದಿಲ್ಲ. ಚಿತ್ರ ನೋಡಿದ ಮಂದಿ ಎಲ್ಲಿಯಾದರೂ ಅವರ ಛಾಯೆ ಕಂಡುಬರಬಹುದು ಅಷ್ಟೇ .
ಚಿತ್ರದಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ
ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಚುತ್ ಕುಮಾರ್, ಸುಧಾರಾಣಿಮ ಕಿಶೋರ್, ಸಪ್ತಮಿ, ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಪ್ರತಿಯೊಬ್ಬರಿಂದ ಕಲಿಯಲು ಸಹಕಾರಿಯಾಗಿದೆ.
ಚಿತ್ರತಂಡದ ಜೊತೆಗೆ 8 ತಿಂಗಳು ಬೆರೆತೆ, ಹೀಗಾಗಿ ಪಾತ್ರದಲ್ಲಿ ತೊಡಗಿಸಿಕೊಳ್ಳಲು, ತಪ್ಪು ಸರಿ ಮಾಡಿಕೊಳ್ಳಲು ಸಹಕಾರಿಯಾಯಿತು. ಇದರಿಂದ ಚಿತ್ರೀಕರಣದ ಸಮಯದಲ್ಲಿ ಯಾವುದೇ ತೊಂದರೆ ಆಗಲಿಲ್ಲ ಎಂದರು
ಸಿನಿಮಾ ಮಾಡಲು ಮುಂಚೆಯೇ ಸ್ಕ್ರೀನ್ ಏಜ್ ಮುಗಿದೆ. ಸಾರ ನಂತರ, ಜನರೇ ಈತ ಬರಬೇಕು ಬೆಂಬಲ ಕೊಡಬೇಕು ಅನ್ನಿಸಿದು ನನಗೆ ಸುಲಭ ಅನ್ನಿಸಿತ್ತು. ಕಥೆ, ಗುರು ಮುಖದಲ್ಲಿತ್ತು. ಅಬೀನಯ ಮೊದಲ ಪ್ರಭುದ್ದತೆಯಲ್ಲಿ ನಟಿಸಿದ್ಧಾರೆ.