"Yuva" world premiere airs this Sunday: viewers stand a chance to win a bike

“ಯುವ” ವಲ್ಡ್ ಪ್ರೀಮಿಯರ್ ಇದೇ ಭಾನುವಾರ ಪ್ರಸಾರ: ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ - CineNewsKannada.com

“ಯುವ” ವಲ್ಡ್ ಪ್ರೀಮಿಯರ್ ಇದೇ ಭಾನುವಾರ ಪ್ರಸಾರ: ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ

ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ “ಯುವ” ಸಿನಿಮಾವನ್ನು ಪ್ರಸಾರಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿ ನೀಡುತ್ತಿದೆ.

ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ “ಯುವ” ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ಕಾಂತಾರ ಬೆಡಗಿ ಸಪ್ತಮಿ ಗೌಡ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಥಿಯೇಟರ್ ಅಲ್ಲಿ ಜನ ಮನ ಗೆದ್ದ ‘ಯುವ’ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಈ ವಾರಾಂತ್ಯದಲ್ಲಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗೋದಂತು ಖಚಿತ.

ಅಷ್ಟೇ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯು ನೋಡುಗರಿಗೊಂದು ಸುವರ್ಣಾವಕಾಶ ನೀಡುತ್ತಿದೆ. ‘ಯುವ’ ಸಿನಿಮಾ ನೋಡ್ತಿರುವಾಗ ಸ್ಟಾರ್ ಸುವರ್ಣ ಲೋಗೋ ಕೆಳಗಡೆ ಎಷ್ಟು ಬಾರಿ ಬೈಕ್ ಚಿತ್ರ ಬರುತ್ತದೆ ಎಂಬುದನ್ನು ನೋಡಿ, ಸರಿಯಾದ ಉತ್ತರ ಕೊಟ್ಟ ಅದೃಷ್ಟಶಾಲಿ ವಿಜೇತರಿಗೆ ‘ಯುವ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

ಯುವರಾಜ್ ಕುಮಾರ್ ಹಾಗು ಸಪ್ತಮಿ ಗೌಡ ಅಭಿನಯದ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ಮಿಸ್ ಮಾಡದೆ ನೋಡಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin