ವಿಭಿನ್ನ ಪ್ರೇಮಕಥೆಯ ಚಿತ್ರ : “ಲವ್”
ಚಿತ್ರ: ಲವ್
ನಿರ್ದೇಶಕ: ಮಹೇಶ್ ಸಿ. ಅಮ್ಮಳ್ಳಿದೊಡ್ಡಿ
ತಾರಾಗಣ: ಪ್ರಜಯ್ ಜಯರಾಮ್, ವೃಷಾ ಪಾಟೀಲ್, ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ,ರಾಧಿಕಾ ಭಟ್, ರಜತ್ ಶೆಟ್ಟಿ ಮತ್ತಿತರರು
ರೇಟಿಂಗ್ : * 3/5
- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /
ಹಿಂದು –ಮಸ್ಲಿಂ ಸಮಾಜದ ಸಾಮರಸ್ಯ ಕಾಪಾಡುವ ವಿಭಿನ್ನ ಪ್ರೇಮಕಥೆಯ ಚಿತ್ರ ್ರ “ಲವ್’ ತೆರೆಗೆ ಬಂದಿದೆ. ನಿರ್ದೇಶಕ ಮಹೇಶ್ ಸಿ ಅಮ್ಮಳ್ಳಿದೊಡ್ಡಿ, ಸೂಕ್ಷ್ಮ ವಿಷಯವನ್ನು ಮುಂದಿಟ್ಟುಕೊಂಡು ಮುದ್ದಾದ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಯುವ ಪ್ರತಿಭಾವಂತರ ತಂಡ ಸೇರಿಕೊಂಡು ಮನಸ್ಸಿಗೆ ಮುಟ್ಟುವ ಚಿತ್ರವನ್ನ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
ಸ್ವಸ್ವಿಕ್ (ಪ್ರಜಯ್ ಜಯರಾಮ್) ಹಿಂದು ಹುಡುಗ, ಜೋಯಾ (ವೃಷಾ ಪಾಟೀಲ್) ಮುಸ್ಲಿಂ ಸಮುದಾಯದ ಹುಡುಗಿ, ಮೊದಲ ನೋಟದಲ್ಲಿ ಸೆಳೆತ, ಅದೇನೋ ಆಕರ್ಷಣೆ, ಧರ್ಮ ಬೇರೆ ಬೇರೆಯಾದರೂ ಯಾವುದೂ ಅರಿವಿಲ್ಲ.ಈ ಜೋಡಿಯ ಪ್ರೀತಿ, ಪ್ರೇಮ ಅದರ ಜೊತೆ ಬರುವ ಕುತೂಹಲ ಚಿತ್ರವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ಹಿಂದು ಮುಸ್ಲಿಂ ಹುಡುಗ ಹುಡುಗಿಯ ಮದುವೆಗೆ ಸಹಜವಾಗಿಯೇ ಕುಟುಂಬದಿಂದ ವಿರೋಧ ಎದುರಾಗುತ್ತದೆ. ಇಂತಹ ಸಮಯದಲ್ಲಿ ಊರು ಬಿಡುವ ಜೋಡಿ ನಗರದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ. ಎಲ್ಲವೂ ಸಲೀಲು ಎನ್ನುವಾಗಲೇ ಜೋಯಾ ಅಪಹರಣಕ್ಕೆ ಒಳಗಾಗುತ್ತಾಳೆ.
ಜೋಯಾ ತಂದೆ ತಾಯಿ ಅಪರಹಣ ಮಾಡಿದ್ದಾರಾ, ಅಥವಾ ಸ್ವಸ್ವಿಕ್ ಸ್ನೇಹಿತ ಇಬ್ರಾಹಿಂ ಹುಡುಗಿಯನ್ನು ಓಡಿಸಿಕೊಂಡು ಹೋದನಾ ಎನ್ನುವ ಕುತೂಹಲ ಚಿತ್ರದಲ್ಲಿ ಪ್ರೇಕ್ಷಕನ್ನ ಕಾಡುವಂತೆ ಮಾಡಿದೆ. ಕೊನೆಯಲ್ಲಿ ಯಾರೂ ಊಹಿಸಲಾಗದ ತಿರುಳು ನೀಡಿ ಗಮನ ಸೆಳೆದಿದ್ಧಾರೆ ನಿರ್ದೇಶಕ ಮಹೇಶ್ ಅಮ್ಮಳ್ಳಿದೊಡ್ಡಿ,
ಮಂಗಳೂರು ಭಾಗದಲ್ಲಿ ಕಂಡುಬರುವ ಲವ್ ಜಿಹಾದ್‍ನಂತಹ ಸೂಕ್ಷ್ಮ ವಿಷಯ ಮುಂದಿಟ್ಟುಕೊಂಡು ಕುತೂಹಲ ಹೆಚ್ಚಿಸಿರುವ ಚಿತ್ರ. ಹಾಗಂತ ಇಲ್ಲಿ ಯಾವುದೇ ಧರ್ಮಕ್ಕೆ ಪರ ವಿರೋಧವಿಲ್ಲ, ಸಧಬಿರುಚಿಯ ನೆಲೆಗಟ್ಟಿನಲ್ಲಿ ಈ ರೀತಿಯೂ ನಡೆಯುತ್ತದಾ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಯುವ ಕಲಾವಿದರಾದ ಪ್ರಜಯ್ ಜಯರಾಮ್, ಮತ್ತು ವೃಷಾ ಪಾಟೀಲ್ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರಿಗೂ ಮೊದಲ ಚಿತ್ರವಾಗಿರುವುದರಿಂದ ಅಲ್ಲಲ್ಲಿ ಸಣ್ಣಪುಟ್ಟ ಲೋಪದೋಷ ಕಂಡುಬರುತ್ತದೆ,ಅದನ್ನು ಸರಿ ಮಾಡಿಕೊಂಡರೆ ಉತ್ತಮ ಕಲಾವಿದರಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಪುನರಾವರ್ತಿ ಸನ್ನಿವೇಶಗಳಿಗೆ ಕಡಿವಾಣ ಹಾಕಿ ಮೊದಲ ಭಾಗಕ್ಕೆ ಕತ್ತರಿ ಹಾಕಿದ್ದರೆ ಒಳ್ಳೆಯ ಚಿತ್ರ ಕಟ್ಟಿಕೊಡಬಹುದಾಗಿತ್ತು.