Love Reddy Film Review: ಮನಮಿಡಿಯುವ ಭಾವನಾತ್ಮಕ ಪ್ರೇಮಕಥನ ” ಲವ್ ರೆಡ್ಡಿ “
ಕರ್ನಾಟಕ- ಆಂದ್ರ ಪ್ರದೇಶದ ಗಡಿ ಭಾಗದ ಭಾಷೆ, ಸೊಗಡು ಮತ್ತು ಮುದ್ದಾದ ಪ್ರೀತಿ, ಪ್ರೇಮದ ಕಥೆಯನ್ನು ಮುಂದಿಟ್ಟುಕೊಂಡು ಮನಮಿಡಿಯುವಂತೆ ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ ” ಲವ್ ರೆಡ್ಡಿ “.
ಚಿಕ್ಕಬಳ್ಳಾಪುರದ ಗಡಿಭಾಗದ ಭಾಷೆಯನ್ನು ನೈಜತೆಗೆ ಒತ್ತು ನೀಡಿ, ಪ್ರೀತಿಯ ಕಥನಕಟ್ಟಿಕೊಟ್ಟಿದ್ದಾರೆ. ಸಾಮಾನ್ಯವಾದ ಕಥೆಗೆ ರೋಚಕ ತಿರುವು ನೀಡಿದ್ದು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದ ಸಿನಿಮಾ ಇದು.
ತೆಲುಗಿನಲ್ಲಿ ತೆರೆಗೆ ಬಂದು ಭರ್ಜರಿ ಯಶಸ್ಸು ಕಂಡಿರುವ ಚಿತ್ರ ಕನ್ನಡದಲ್ಲಿಯೂ ಮನಸ್ಸು ಮುಟ್ಟುವಂತೆ ನಿರ್ದೇಶಕ ಸ್ಮರಣ್ ರೆಡ್ಡಿ ಪ್ರೇಕ್ಷಕರಮುಂದಿಟ್ಟಿದ್ದಾರೆ. ಈಮೂಲಕ ದುರಂತ ಪ್ರೇಮಕಥೆಗೆ ಕನ್ನಡಿ ಹಿಡಿದಿದ್ದಾರೆ. ನಡುವೆ ಯುವ ಜೋಡಿಯ ಪ್ರೀತಿ ಪ್ರೇಮ, ಅದಕ್ಕೆ ಎದುರಾಗುವ ಅಡ್ಡಿ ಆತಂಕ, ಗಡಿ ಭಾಗದ ಜನರ ಬದುಕು, ಭಾಷೆ, ಸೇರಿದಂತೆ ಹಲವು ವಿಷಯಗಳು ಗಮನ ಸೆಳೆದಿವೆ.
ನಾಯಕ ನಾರಾಯಣ್ ರೆಡ್ಡಿ (ಅಂಜನ್ ರಾಮಚಂದ್ರ) 30 ವರ್ಷ ದಾಟಿದರೂ ಹುಡುಗಿ ಸಿಕ್ಕಿರಲ್ಲ. ಬಸ್‍ನಲ್ಲಿ ಅಚಾನಕ್ ಆಗಿ ಕಂಡ ಹುಡುಗಿ ದಿವ್ಯ (ಶ್ರಾವಣಿ ) ಮೊದಲ ನೋಟದಲ್ಲಿ ಮನ ಗೆಲ್ಲುತ್ತಾಳೆ. ಅವಳನ್ನು ಪರಿಚಯ ಮಾಡಿಕೊಳ್ಳಲು ನಡೆಸುವ ಹರಸಾಹಸ, ಒಂದಷ್ಟು ಒದ್ದಾಟ, ಹುಡುಗ, ಹುಡುಗಿಯ ಮಾತುಕತೆ ಪ್ರೀತಿಸುತ್ತಾರೆ ಎನ್ನುವ ನಂಬಿಕೆ ಈತ ಆಕೆಯನ್ನು ಪ್ರೀತಿಸುತ್ತಾಳಾ ಆತವಾ ಆಕೆಗೆ ಈತನ ಮೇಲೆ ಪ್ರೀತಿ ಇರುತ್ತಾ..ಈ ನಡುವೆ ಅಪ್ಪನ ವರ್ತನೆ ಏನಾಗಿರುತ್ತದೆ ಎನ್ನುವುದು ಕಥನ ಕುತೂಹಲ.
ನಿರ್ದೇಶಕ ಸ್ಮರಣ್ ರೆಡ್ಡಿ, ಪ್ರೀತಿಯ ಹೆಸರಲ್ಲಿ ಗಡಿ ಭಾಗದ ಸೊಗಡನ್ನು ಕಟ್ಟಿಕೊಡುವ ಜೊತೆಗೆ ಪ್ರೀತಿ, ಪ್ರೇಮ ಸೇರಿದಂತೆ ಮತ್ತಿತರ ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ.ಚಿತ್ರ ನೋಡುತ್ತಿದ್ದರೆ ಸುತ್ತ ಮುತ್ತಲ ಭಾಗದಲ್ಲಿ ನಡೆದಿದೆಯೋ ಎನ್ನುವಷ್ಟು ಫೀಲ್ ಕೊಡಲಿದೆ.
ತೆಲುಗಿನಲ್ಲಿ ಮೂಡಿ ಬಂದ ಸಿನಿಮಾವನ್ನು ಕನ್ನಡೀಕರಣ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಆದರೆ ಅಲ್ಲಿ ಲಿಪ್ ಸಿಂಕ್ ಮಾಡಲು ಸಾದ್ಯವಾಗಿಲ್ಲ. ಚಿತ್ರ ನೋಡುತ್ತಿದ್ದರೆ ಕನ್ನಡಕ್ಕೆ ಡಬ್ ಮಾಡಿದ ಸಿನಿಮಾ ಅನ್ನಿಸುವುದಿಲ್ಲ. ಅಷ್ಟರ ಮಟ್ಟಿಗೆ ಸಿನಿಮಾವನ್ನು ಕನ್ನಡಕ್ಕೆ ಒಗ್ಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಿನಿಮಾ ತಯಾರಾಗಿದೆ ಎನ್ನುವಂತೆ ಕಾಣುತ್ತದೆ. ಇದು ಚಿತ್ರದ ಹೈಲೈಟ್ ಕೂಡ
ಯುವ ಪ್ರತಿಭೆಗಳಾದ ನಟ ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಸಹಜ ಅಭಿನಯದ ಮೂಲಕ ಮಮಗೆದ್ದಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಕಲಾವಿದರಾಗುವ ಎಲ್ಲಾ ಲಕ್ಷಣಗಳಿವೆ.
ಮೊದಲಾರ್ದದಲ್ಲಿ ಮಾಮೂಲಿ ಪ್ರೇಮಕಥೆ ಅನ್ನಿಸಿದರೂ ದ್ವಿತೀಯಾರ್ಧದಲ್ಲಿ ಚಿತ್ರದ ಕಥೆಯ ದಿಕ್ಕನ್ನೇ ಬದಲಿಸಿದೆ. ಕೊನೆಯ ಹದಿನೈದರಿಂದ ಇಪ್ಪತ್ತು ಸಿನಿಮಾ ಕರುಳು ಹಿಂಡಿ ಆಕ್ರೋಶದ ಭಾವನೆ ಮೂಡಿದರೆ ಆಶ್ವರ್ಯವಿಲ್ಲ.
ಕಿರಿತೆರೆ ಕಲಾವಿದ ಎನ್ ಟಿ ರಾಮಸ್ವಾಮಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೇಂದ್ರ ಬಿಂಧುವಾಗಿದ್ದಾರೆ. ಅವರ ಪಾತ್ರ ಚಿತ್ರದ ಹೈಲೈಟ್. ಒಬ್ಬ ಕಲಾವಿದನಿಗೆ ಇದಕ್ಕಿಂತ ಗೌರವ ಇನ್ನೊಂದು ಇರಲಾರದು
ಕಲಾವಿದರಾದ ವಾಣಿ, ಪಲ್ಲವಿ, ಮಂಜುಳಾ ರೆಡ್ಡಿ ಸೇರಿದಂತೆ ಮತ್ತಿತರು ಚಿತ್ರದಲ್ಲಿ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.
ಲವ್ ರೆಡ್ಡಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಿತ್ರ. ನಾಯಕ,ನಾಯಕಿ ಸೇರಿದಂತೆ ಬಹುತೇಕ ಕಲಾವಿದರು ಹೊಸಬರಿದ್ದರೂ ಅನುಭವಿ ಕಲಾವಿದರಂತೆ ನಟಿಸಿರುವುದು ಚಿತ್ರದ ಫ್ಲಸ್ ಪಾಯಿಂಟ್.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****