Aram ArvindSwamy Review: ಉಂಡಾಡಿಗುಂಡನ ತಿರುವುಗಳ ಸಂಗಮ “ಆರಾಮ್ ಅರವಿಂದ ಸ್ವಾಮಿ”

ಚಿತ್ರ: ಆರಾಮ್ ಅರವಿಂದ ಸ್ವಾಮಿ
ನಿರ್ದೇಶನ: ಅಭಿಷೇಕ್ ಶೆಟ್ಟಿ
ತಾರಾಗಣ: ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಋತಿಕಾ ಶ್ರೀನಿವಾಸ್, ಮತ್ತಿತರರು
ರೇಟಿಂಗ್: *** 3/5

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಅನೀಶ್ ತೇಜೇಶ್ವರ್ ಕೂಡ ಒಬ್ಬರು,. ಆದರೆ ಅದೃಷ್ಠ ಕೈಕೊಡುತ್ತಿರುವುದರಿಂದ ಹಾಕಿದ ಶ್ರಮ ವ್ಯರ್ಥವಾಗುತ್ತಿದೆ. ಅದೃಷ್ಠ ಆಟದ ಹಿಂದೆ ಬಿದ್ದಿರುವ ಅನೀಶ್ ಗೆಲುವಿಗಾಗಿ ಹರಸಹಾಸ ನಡೆಸಿದ್ದಾರೆ.
ನವಿರಾದ ಪ್ರೀತಿ, ಪ್ರೇಮ. ಮದ್ಯಮವರ್ಗದವನಾಗಿದ್ದರೂ ಶ್ರೀಮಂತ ಎನ್ನುವ ಬಿಲ್ಡಪ್ ಸೇರಿದಂತೆ ಹಲವು ಥ್ರಿಲ್ಲರ್ ಅಂಶಗಳನ್ನು ಮುಂದಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ ಆರಾಮ್ ಅರವಿಂದ ಸ್ವಾಮಿ”.
ನಿರ್ದೇಶಕ ಅಭಿಷೇಕ್ ಶೆಟ್ಟಿ ಜಾಲಿ ಹುಡುನ ಕತೆಯನ್ನು ಮುಂದಿಟ್ಟುಕೊಂಡು ಆರಾಮ್ ಅರವಿಂದಸ್ವಾಮಿ ಚಿತ್ರವನ್ನು ಲವಲವಿಕೆ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಪ್ರೇಕ್ಷಕರನ ಮನಗೆಲ್ಲಲು ಶತ ಪ್ರಯತ್ನ ಮಾಡಿದ್ದಾರೆ
ಉಂಡಾಡಿ ಗುಂಡನ ತಿರುವುಗಳ ಸಂಗಮ. ಕೆಲಸವಿಲ್ಲದೆ ಅಲೆಯುವ ಅರವಿಂದ ಸ್ವಾಮಿ ಆರಾಮ್ ಆಗಿರುವವನು. ಒಂದಷ್ಟು ಗೆಳೆಯರ ಬಳಗ ಕಟ್ಟಿಕೊಂಡು ಮೋಜು ಮಸ್ತಿ, ಜಾಲಿಯಲ್ಲಿ ಕಾಲ ಕಳೆದವ. ನೋಡಲು ಸುಂದರ, ಅಷ್ಟೇ ಸುಂದರ ಗೆಳತಿಗೆ ಸುಳ್ಳು ಹೇಳಿಕೊಂಡೇ ಜೀವನದೂಡಿದವ.
ಶಿಕ್ಷಕಿಯಾಗಿರುವ ಗೆಳತಿಗೆ ಒಂದರ ಹಿಂದೆ ಒಂದು ಸುಳ್ಳು ಹೇಳಿಕೊಂಡು ಬರುವ ಅರವಿಂದಸ್ವಾಮಿ, ತಂದೆಯ ಮಾತಿಗೆ ಕಟ್ಟಿಬೀಳುವ ಅನಿವಾರ್ಯತೆಗೆ ಸಿಲುಕುತ್ತಾನೆ. ಪ್ರೀತಿಸಿದ ಹುಡುಗಿಯ ಕಥೆಇಂತಹ ಸಮಯದಲ್ಲಿ ಆತನ ನಡೆ ಏನು ಎನ್ನುವುದು ತೀವ್ರ ಕುತೂಹಲ.
ಮದ್ಯಮ ವರ್ಗದ ಹುಡುಗ ಶ್ರೀಮಂತಿಕೆ ಬಿಲ್ಡಪ್ ಅನ್ನೇ ಮುಂದಿಟ್ಟುಕೊಂಡು ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅಭಿಷೇಕ್ ಶೆಟ್ಟಿ, ಮದ್ಯಮ ವರ್ಗದ ಬದುಕು ಬವಣೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ನಿರೂಪಿಸಿದ್ದಾರೆ, ಈ ಮೂಲಕ ಶತಾಯ ಗತಾಯ ಗೆಲುವು ಪಡೆಯಬೇಕು ಎನ್ನುವ ಹರಸಾಹಸ ನಡೆಸಿದ್ದಾರೆ.
ನಟ ಅನೀಶ್ ತೇಜೇಶ್ವರ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಮೂಲಕ ಯಾವುದೇ ಪಾತ್ರ ನೀಡಿದರೂ ನಿಭಾಯಿಸುತ್ತೇನೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಾಯಕಿ ಮಿಲಿನಾ ನಾಗರಾಜ್ ಕೂಡ.
ಋತಿಕಾ ಶ್ರೀನಿವಾಸ್ ಸೇರಿದಂತೆ ಹಲವು ಮಂದಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****