Lovemocktile-3 Movie Review: ಅಪ್ಪ- ಮಗಳ ಬಾಂಧವ್ಯದ ಮನಮುಟ್ಟುವ ಕಥನ “ ಲವ್ ಮಾಕ್ಟೇಲ್-3”
ಚಿತ್ರ ; ಲವ್ ಮಾಕ್ಟೇಲ್ -3
ನಿರ್ದೇಶನ ; ಡಾರ್ಲಿಂಗ್ ಕೃಷ್ಣ
ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರಚೆಲ್ ಡೇವಿಡ್, ರಜನಿ ಭಾರಧ್ವಜ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಗಿರಿರಾಜ್ ಮತ್ತಿತರರು
ರೇಟಿಂಗ್ : ** 4/5
“ಪಪ್ಪ ಅಮ್ಮ ಬೇಕಾ..
ಯಾವತ್ತು ಕೇಳಿಲ್ಲ.. ಈಗ್ಯಾಕೆ ಸಡನ್ ಕೇಳ್ತಾ ಇದ್ದೀಯಾ,,:
ನಿದಿ,ü ಅಮ್ಮ ಬೇಕಾ ಅಂತ ಕೇಳಿದ್ಲು. ನಾನ್ ಕೊಡೋ ಪ್ರೀತಿ ಕಡಿಮೆ ಆಗಿದೆಯಾ.. ನನಗೆ ಅವಳನ್ನು ಬಿಟ್ಟರೆ ಯಾರಿದ್ದಾರೆ ಹೇಳು..
ಒಂದೆಡೆ ಅಪ್ಪ-ಮಗಳ ಮಾತುಕತೆ, ಇನ್ನೊಂದೆಡೆ ಮಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ಹೆಂಡತಿ ಭಾವಚಿತ್ರದ ಮುಂದೆ ಗಂಡನ ಮಾತು..
ಅಪ್ಪ-ಮಗಳ ಭಾವನಾತ್ಮಕ ಬಾಂಧವ್ಯದ ಕಥೆ, ಕರುಳ ಬಳ್ಳಿ ಇಲ್ಲವೆಂದು ತಿಳಿದ ಅಮ್ಮ, ಮಗಳು ಬದುಕಿದ್ದಾಳೆ ಎಂದು ಗೊತ್ತಾದಾಗ ಮಗಳು ಅಮ್ಮನ ಮಡಿಲು ಸೇರ್ತಾಳಾ, ಇಲ್ಲ, ಅಪ್ಪನೇ ಪ್ರಪಂಚವೇ ಆಗ್ತಾಳಾ.
ಇದು ಈ ವಾರ ತೆರೆಗೆ ಬಂದಿರುವ “ಲವ್ ಮಾಕ್ಟೇಲ್-3 ಚಿತ್ರದ ಕಥೆ,
ಸಾಮಾನ್ಯವಾಗಿ ಚಿತ್ರವೊಂದರ ಮುಂದುವರಿದ ಸರಣಿಯ ಚಿತ್ರ ಕೊಟ್ಟಿಕೊಡುವಾಗ ನಿರ್ದೇಶಕನಿಗೆ ಹಲವು ಸವಾಲುಗಳಿರುತ್ತವೆ, ಹಿಂದಿನ ಸರಣಿಯ ಚಿತ್ರಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಅದರ ಮುಂದುವರಿದ ಭಾಗವನ್ನು ಜನರಿಗೆ ಕುತೂಹಲಕಾರಿ ಕಟ್ಟಿಕೊಡುವುದು ಸುಲಭದ ಮಾತಲ್ಲ, ಆದರೆ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಹೊಡೆಸದಂತೆ, ಪ್ರತಿ ಕ್ಷಣವನ್ನು ಸೀಟಿನ ಬೆರಳತುದಿಯಲ್ಲಿ ಕುಳಿತು ನೋಡುವಂತೆ ಕಟ್ಟಿಕೊಡಲಾಗಿದೆ. ಈ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ.
ಆದಿ (ಡಾರ್ಲಿಂಗ್ ಕೃಷ್ಣ) ಮಗಳನ್ನು ತನ್ನಂತೆ ಬೆಳೆಸುತ್ತೇನೆ ಎಂದು ಹೆಂಡತಿಗೆ ಮಾತುಕೊಟ್ಟವ. ಅದಕ್ಕಾಗಿ ಮಗಳು ನಿದಿ (ಸಂಮೃತಾ)ಗೆ ಶಿಸ್ತಿನ ಪಾಠ ಹೇಳುತ್ತಾನೆ. ಅದಕ್ಕೆ ಮಗಳೂ ಹೊಂದಿಕೊಂಡವಳು. ಈ ನಡುವೆ ಪ್ರಪಂಚವೆಂದು ನಂಬಿ ಬೆಳೆಸಿದ ಮಗಳು ತನ್ನ ಮಗಳೇ ಅಲ್ಲ, ಅವಳಿಗೆ ಅಪ್ಪ-ಅಮ್ಮ ಇದ್ದಾರೆ ಎಂದು ತಿಳಿದಾಗ ಮುಂದೇನು,, ನ್ಯಾಯಾಲಯ ಮಗಳ ಜವಾಬ್ದಾರಿ ಯಾರ ಕಡೆಗೆ ವಹಿಸುತ್ತದೆ, ಅದರಲ್ಲಿ ನಿಧಿ ಪಾತ್ರ ಏನು ಎನ್ನುವುದನ್ನು ಕುತೂಹಲಕಾರಿ.
ಕರುಳಬಳ್ಳಿಯ ಕಥೆಯನ್ನು ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಯಶಸ್ಸು ಗಳಿಸಿದ್ಧಾರೆ, ಅಪ್ಪ-ಮಗಳ ಬಾಂಧವ್ಯದ ಕುತೂಹಲಕಾರಿ. ಲವ್‍ಮಾಕ್ಟೇಲ್ ಸರಣಿಯ ಮುಂದುವರಿದ ಚಿತ್ರ ಇದು. ನಿದಿಮಾ (ಮಿಲನಾ ನಾಗರಾಜ್) ಅವರ ಪಾತ್ರವನ್ನು ಅಗತ್ಯಕ್ಕೆ ತಕ್ಕಂತೆ ಮುಂದುವರಿಸಿರುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತಹುದು,
ಚಿತ್ರದ ಮೊದಲರ್ದ ಅಪ್ಪ-ಮಗಳ ಕಥೆ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟಿದೆ, ಎರಡನೇ ಭಾಗದಲ್ಲಿ ತನ್ನ ಮಗಳಲ್ಲ ಎಂದು ತಿಳಿದಾಗ ನ್ಯಾಯಾಲಯದ ಕಟಕಟೆಯಲ್ಲಿ ತೀರ್ಪು ಏನು ಬರಲಿದೆ ಎನ್ನುವುದು ಕೂಡ ಕುತೂಹಲಕಾರಿ ಸಂಗತಿ. ಎರಡೂ ಭಾಗವನ್ನು ಅಚ್ಚು ಕಟ್ಟಾಗಿ ಎಲ್ಲಿಯೂ ಅನಗತ್ಯವಾಗಿ ಎಳೆಯದೆ ಕಥೆಗೆ ಎಷ್ಟು ಬೇಕೋ ಅಷ್ಟನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾಲಿಂಗ್ ಕೃಷ್ಣ, ಜೊತೆಗೆ ನಟನಾಗಿಯೂ ಯಶಸ್ಸು ಗಳಿಸಿದ್ದಾರೆ
ಸಂಮೃತಾ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಪ್ಪ-ಮಗಳ ಪಾತ್ರಗಳೇ ಚಿತ್ರದ ಹೈಲೈಟ್. ಜೊತೆಗೆ ರಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಗಿರಿರಾಜ್. ಮಿಲನಾ ನಾಗರಾಜ್ ಸೇರಿದಂತೆ ಇನ್ನಿತರೆ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ
ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಸುಂದರ ಕೌಟಂಬಿಕ ಚಿತ್ರ ಲವ್ ಮಾಕ್ಟೇಲ್-3
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

