ಮಿಸ್ಟರ್ ಬ್ಯಾಚುಲರ್ : ಗಮನ ಸೆಳೆದ ನಟಿ ನಿಮಿಕಾ ರತ್ನಾಕರ್
ಚಿತ್ರ: ಮಿಸ್ಟರ್ ಬ್ಯಾಚುಲರ್
ನಿರ್ದೇಶನ: ನಾಯ್ಡು ಬಂಡಾರು
ತಾರಾಗಣ: ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್, ಮಿಲನ ನಾಗರಾಜ್, ಸಾಧುಕೋಕಿಲ, ಚಿಕ್ಕಣ್ಣ, ಗಿರೀಶ್ ಶಿವಣ್ಣ, ರಾಜೇಶ್ವರಿ ಮತ್ತಿತರರು
ರೇಟಿಂಗ್: ** 2/5
ಬಾಲ್ಯದಿಂದಲೇ ಮದುವೆ ಎಂದರೆ ಹಬ್ಬ ಎಂದು ತಿಳಿದುಕೊಂಡ ಹುಡುಗ ವಯಸ್ಸಿಗೆ ಬಂದ ನಂತರ ಮದುವೆಯಾಗಲು ನಡೆಸುವ ಹರಸಾಹಸ ತೆರೆದಿಟ್ಟಿರುವ ಚಿತ್ರ ” ಮಿಸ್ಟರ್ ಬ್ಯಾಚುಲರ್”
ನಿರ್ದೇಶಕ ನಾಯ್ಡು ಬಂಡಾರು, ಜನರೇಟರ್, ಸಲಿಂಗ ಕಾಮ,ವೇಶ್ಯಾವಾಟಿಕೆ ದಂಧೆ, ಕಾಂಡೋಮ್, ವೇಶ್ಯೆಯ ಸಂಗ,ಸೇರಿದಂತೆ ಒಂದಷ್ಟು ಪೆÇಲಿ ಸನ್ನಿವೇಶಗಳನ್ನು ಇಟ್ಟು ರಂಜಿಸಲು ಮುಂದಾಗಿದ್ದಾರೆ.
ದ್ವಂದ್ವಾರ್ಥಗಳು ಹುಡಗರಿಗೆ ರುಚಿಸಿದರೂ ಮನೆ ಮಂದಿ ಜೊತೆಯಾಗಿ ಚಿತ್ರ ನೋಡುವವುದು ತೀರಾ ಕಡಿಮೆ.ಅಷ್ಟರ ಮಟ್ಟಿಗೆ ಮೊದಲರ್ಧ ಚಿತ್ರ ಮೂಡಿಬಂದಿದೆ.
ಹುಡುಗನ ವರ್ಜಿನಿಟಿ ಕಳೆದುಕೊಳ್ಳಲು ವೈಶ್ಯೆಯ ಸಂಗ ಅದರಿಂದಾಗುವ ಕಿರಿಕಿರಿ ಸೇರಿದಂತೆ ಅದರ ಸುತ್ತ ಗಿರಕಿಹೊಡೆಸಿದ್ದಾರೆ.
ತಂದ -ತಾಯಿ , ಮಂಜುನಾಥ್ ಹೆಗಡೆ, ಸ್ವಾತಿಗೆ ಮಗಕಾರ್ತಿಕ್ (ಡಾರ್ಲಿಂಗ್ ಕೃಷ್ಣ) ನ ಆಸೆ ಈಡೇರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಹುಡುಗ ತಾತ ಮಾಡಿದ ಕರ್ಮದ ಫಲ ನಾಯಕ ಅನುಭವಿಸುವಂತಾಗಿದೆ.31 ನೇ ಹುಡುಗಿಯೊಂದಿಗೆ ಕಂಕಣ ಭಾಗ್ಯ ಎನ್ನುವ ಜ್ಯೋತಿಷಿಯ ಮಾತು ಕೇಳಿ ಆಕೆಯನ್ನು ಮದುವೆಯಾಗಲು ಯತ್ನ ಮಾಡುತ್ತಾನೆ.
ಪಲ್ಲವಿ ( ಮಿಲನಾ ನಾಗರಾಜ್) ಕಾರ್ತಿಕ್ ಗೆ ಎಕ್ಸ್ ಪೀರಿಯೆನ್ಸ್ ಬೇಕು.ಹೀಗಾಗಿ ವರ್ಜಿನಿಟಿ ಕಳೆದುಕೊಂಡು ಬಂದರೆ ಮದುವೆಯಾಗುವುದಾಗಿ ಸವಾಲು ಹಾಕುತ್ತಾಳೆ. ಅದಕ್ಕಾಗಿ ಆತ ವೇಶ್ಯೆಯರ ಸಂಗ ಮಾಡ್ತಾನೆ.
ಅಚಾನಕ್ ಆಗಿ ಪರಿಚಯವಾದ ಸ್ನೇಹಿತೆ ಪಲ್ಲವಿ ( ನಿಮಿಕಾ ರತ್ನಾಕರ್) ಜೊತೆ ವರ್ಜಿನಿಟಿ ಕಳೆದುಕೊಳ್ಳಲು ಪ್ರಯತ್ನ. ಆಕೆಗೆ. ಚೆಲ್ಲಾಟ ಆಡುವ ಹುಡುಗರು ಇಷ್ಟವಿಲ್ಲ. ಒಂದು ಕಡೆ ಎಕ್ಸ್ ಪೀರಿಯೆನ್ಸ್, ಮತ್ತು ಪ್ರೆಶ್ ಹುಡುಗನ ಬೇಡಿಕೆ ಇಕ್ಕಟ್ಟಿಗೆ ಸಿಲುಕಿಸುತ್ತದೆ..
ಏಕ ಕಾಲಕ್ಕೆ ಎರಡು ಹುಡುಗಿಯರು ಸಿಕ್ಕಿ,ಕೊನೆಗೆ ಒಬ್ಬಳನ್ನು ಮದುವೆಯಾದ ಮೇಲೂ ಆತ ವರ್ಜಿನಿಟಿ ಕಳೆದುಕೊಳ್ತಾನಾ ಎನ್ನುವುದು ಚಿತ್ರದ ತಿರುಳು..ಚಿತ್ರದ ಮೊದಲರ್ದ ಪೋಲಿತನದ ಸನ್ನಿವೇಶದ ಸುತ್ತಾ ಸಾಗಿದರೆ ದ್ವಿತೀಯಾರ್ಧದಲ್ಲಿ ಗಂಭಿರತೆಗೆ ಒತ್ತು ನೀಡಲಾಗಿದೆ.
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಪಾಲಿಗೆ ಬಂದಿದ್ದು ಮಾಡಿದ್ದಾರೆ.ಮತ್ತೊಬ್ಬ ನಾಯಕಿ ನಿಮಿಕಾ ರತ್ನಾರ್ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ.ಹೊಸ ವರ್ಷದಲ್ಲಿ ಉತ್ತಮ ಪಾತ್ರದ ಮೂಲಕ ಆರಂಭಿಸಿದ್ದು ಇದುವರೆಗಿನ ಚಿತ್ರಗಳಲ್ಲಿ ವಿಭಿನ್ನವಾಗಿದೆ.ಅದೇ ರೀತಿ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ.
ಮಂಜುನಾಥ್ ಹೆಗಡೆ, ಸ್ವಾತಿ, ಸಾಧುಕೋಕಿಲ, ಚಿಕ್ಕಣ್ಣ, ಗಿರೀಶ್ ಶಿವಣ್ಣ, ಅಯ್ಯಪ್ಪ ಶರ್ಮಾ, ಪವಿತ್ರ ಲೋಕೇಶ್ ಮತ್ತಿತರ ತಾರಾಬಳವಿದೆ.