Review : ಮದ್ಯಪಾನ, ಮಾದಕವಸ್ತುವಿನ ಅಮಲಿನ ಸುತ್ತಾ ಸಾಗುವ ಚಿತ್ರ “ತಪಸ್ಸಿ”
ಚಿತ್ರ : ತಪ್ಪಸ್ಸಿ
ನಿರ್ದೇಶನ: ಸ್ಪೆನ್ಸರ್ ಮ್ಯಾಥ್ಯೂ
ತಾರಾಗಣ: ರವಿಚಂದ್ರನ್, ಅಮ್ರೇಯಾ ಗೋಸ್ವಾಮಿ,ಭಾಸ್ಕರ್, ಅನುಶಾ ಕಿಣಿ, ಸಚ್ಚಿನ್, ಗುಬ್ಬಿ ನಟರಾಜ್, ರಥರ್ವ ಮತ್ತಿತರರು
ರೇಟಿಂಗ್ : ** 2/5
ಮದ್ಯಪಾನ, ಮಾದಕ ವಸ್ತು, ಫ್ಯಾಶನ್ ಸುತ್ತ ಸಾಗುವ ಅಮಲಿನ ಕಥೆಹೊಂದಿರುವ ಚಿತ್ರ “ ತಪ್ಪಸ್ಸಿ”.
ಹಿರಿಯ ನಟ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಪ್ಪಸ್ಸಿ ಚಿತ್ರ, ಸಂಪೂರ್ಣವಾಗಿ ಅಮಲಿನ ಸುತ್ತ ಸುತ್ತುವರಿದಿದೆ, ಹೀಗಾಗಿ ಚಿತ್ರವನ್ನು ಕೊನೆತನಕ ಹಿಡಿದಿಡುವ ಪ್ರಯತ್ನ ಮಾಡುವಲ್ಲಿ ನಿರ್ದೇಶಕರಿಗೆ ಸಾಧ್ಯವಾಗಿಲ್ಲ, ಸಂತೆಗೆ ಮೂರು ಮೊಳ ಎನ್ನುವಂತೆ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ರವಿಚಂದ್ರನ್ ಇದ್ದಾರೆ ಎನ್ನುವುದು ಸಮಾಧಾನದ ಸಂಗತಿಯಾದರೂ ಬಿಗಿಯಾದ ಕಥೆ, ಚಿತ್ರಕಥೆ ನಿರೂಪಣೆ ಇಲ್ಲದೆ ಚಿತ್ರದ ಕಥೆ ಜಾಳು ಜಾಳಾಗಿ ಸಾಗಿದೆ, ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ನೈಜಘಟನೆಯನ್ನು ತೆರೆಗೆ ಕಟ್ಟಿಕೊಡು ಪ್ರಯತ್ನ ಮಾಡಿದ್ದಾರೆ. ಚಿತ್ರದುದಕ್ಕೂ ಮಾದಕ ವಸ್ತು, ಮದ್ಯ, ಧೂಮಪಾನ, ಮೋಜು ಮಸ್ತಿಯದ್ದೇ ಕಾರುಬಾರು.
ಆಕೆ ತಪ್ಪಸ್ಸಿ (ಅಮ್ರೇಯಾ ಗೋಸ್ವಾಮಿ) ಫ್ಯಾಶನ್ ಲೋಕದಲ್ಲಿ ಹೆಸರು ಮಾಡುವ ಹಂಬಲ, ಅಲ್ಲಿನ ಕೀಚಕರು ಈಕೆಗೆ ಇಷ್ಟವಿಲ್ಲದಿದ್ದರೂ ಅವರ ಪಾಪ ಕೂಪಕ್ಕೆ ಆಕರ್ಷಿತರಾಗುವಂತೆ ಮಾಡುತ್ತಾರೆ, ಒಮ್ಮೆ ಅದರ ಬಲೆಗೆ ಬಿದ್ದ ತಪ್ಪಸ್ಸಿ ಐಶಾರಾಮಿ ಜೀವನಕ್ಕೆ ಮಾಡಬದರು ಕೆಲಸ ಮಾಡುತ್ತಾಳೆ,ಮಾದಕ ವಸ್ತು,ಮ ಮದ್ಯಪಾನದ ಚಟಕ್ಕೆ ದಾಸಳಾಗುತ್ತಾಳೆ.
ಇದರಿಂದ ಆಕೆಯನ್ನು ಮುಕ್ತಗೊಳಿಸಲು ಆಕೆಯ ಸ್ನೇಹಿತರು ಮನಶಾಸ್ತಜ್ಞರಾದ ಪ್ರೋಫೆಸರ್ ವೈದ್ಯನಾಥನ್( ರವಿಂಚಂದ್ರನ್) ಬಳಿಕ ಕರೆದುಕೊಂಡು ಬಿಡ್ತಾರೆ. ಅಲ್ಲಿ ಆಕೆ ಸರಿ ಹೋಗ್ತಾಳಾ, ಇಲ್ಲ ಆಕೆಯ ಕೆಲಸ ಮುಂದುವರಿಸುತ್ತಾಳಾ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ಅಮ್ರೇಯಾ ಗೋಸ್ವಾಮಿ ನಟನೆಗಿಂತ ಹೆಚ್ಚಾಗಿ ಪಾರ್ಟಿ ಮೂಡ್‍ನಲ್ಲಿ ಸುಂದರವಾಗಿ ಕಾಣಿಸಿದ್ಧಾರೆ, ನಟ ರವಿಚಂದ್ರನ್ ತಮಗೆ ಸಿಕ್ಕ ಪಾತ್ರವನ್ನು ಮಾಡಿ ಮುಗಿಸಿಕೊಟ್ಟಿದ್ದಾರೆ.
,ಭಾಸ್ಕರ್, ಅನುಶಾ ಕಿಣಿ, ಸಚ್ಚಿನ್, ಗುಬ್ಬಿ ನಟರಾಜ್, ರಥರ್ವ ಮತ್ತಿತರರು ತಮಗೆ ದೊರೆತ ಪಾತ್ರಕ್ಕೆ ಸಾಧ್ಯವಾದ ಮಟ್ಟಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.ಇಡೀ ಚಿತ್ರದುದ್ದಕ್ಕೂ ಮಾದಕ ವಸ್ತು, ಮದ್ಯ, ಅತ್ಯಾಚಾರದಂತೆ ವಿಷಯಗಳ ಸುತ್ತಲೇ ಚಿತ್ರ ಸುತ್ತಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

