Review: "Jungle-Mangal" is an intriguing story set in the jungle.

Review: ಕಾನನದ ನಡುವೆ ನಡೆಯುವ ಕುತೂಹಲದ ಕಥನದ ಚಿತ್ರ “ ಜಂಗಲ್- ಮಂಗಲ್” - CineNewsKannada.com

Review: ಕಾನನದ ನಡುವೆ ನಡೆಯುವ ಕುತೂಹಲದ ಕಥನದ ಚಿತ್ರ “ ಜಂಗಲ್- ಮಂಗಲ್”

ಚಿತ್ರ : ಜಂಗಲ್- ಮಂಗಲ್
ನಿರ್ದೇಶಕ: ರಕ್ಷಿತ್ ಕುಮಾರ್
ತಾರಾಗಣ: ಯಶ್ ಶೆಟ್ಟಿ, ಅಕ್ಷಿತಾ ರಾಮಚಂದ್ರ, ಉಗ್ರಂ ಮಂಜು, ಬಾಲರಾಜವಾಡಿ ಹಾಗು ಸ್ಥಳೀಯ ಕಲಾವಿದರು
ರೇಟಿಂಗ್; **** 4 / 5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಂಟೆಂಟುಗಳ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಕಥೆ, ನಿರೂಪಣಾ ಶೈಲಿ, ಕಲಾವಿದರ ನಟನೆ ಸೇರಿದಂತೆ ಇನ್ನಿತರೆ ವಿಷಯಗಳಿಂದ ಸಿನಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಬರ ಸೆಳೆಯುತ್ತಿವೆ, ಅಂತಹ ಚಿತ್ರಗಳ ಸಾಲಿಗೆ ನಿಲ್ಲಬಹುದಾದ ಮತ್ತೊಂದು ಸಿನಿಮಾ “ ಜಂಗಲ್ ಮಂಗಲ್”.

ಪಶ್ಚಿಮಘಟ್ಟದ ದಟ್ಟ ಕಾನನದ ನಡುವೆ ನಡುವೆ ಕುತೂಹಲ ಭರಿತ ಮತ್ತು ಥ್ರಿಲ್ಲರ್ ಚಿತ್ರ ಇದು. ಕೆಲವೇ ಕೆಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಚಿತ್ರ ಕೊನೆ ತನಕ ಕುತೂಹಲ ಮತ್ತು ಅಚ್ಚರಿಯಿಂದ ನೋಡಿಸಿಕೊಂಡು ಹೋಗುವ ಸಾಮಥ್ರ್ಯವಿದೆ. ಜೊತೆಗೆ ಅನಗತ್ಯವಾಗಿಯೂ ಚಿತ್ರವನ್ನು ವಿಸ್ತರಿಸಿದೆ ಚಿಕ್ಕದಾಗಿ ಚೊಕ್ಕವಾಗಿ ತೆರೆಗೆ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ರಕ್ಷಿತ್ ಕುಮಾರ್ ಮತ್ತವರ ತಂಡ ಮಾಡಿದೆ

ಇದುವರೆಗೂ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಭರವಸೆಯ ಕಲಾವಿದ ಯಶ್ ಶೆಟ್ಟಿ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗದಲ್ಲಿ ಮತ್ತಷ್ಟು ಭರವಸೆ ಮೂಡಿಸಿದ್ದು ವಿಭಿನ್ನ ಕಥೆಗಳು ಸಿಕ್ಕರೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಡುವ ಶಕ್ತಿ, ಸಾಮಥ್ರ್ಯ ಇದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದ ಗ್ರಾಮ ಅದು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಎಲ್ಲವೂ ಬಂದ್, ಕೆಲಸ ಮಾಡುತ್ತಿದ್ದವರಿಗೆ ಕೈಕಟ್ಟಿದ ಪರಿಸ್ಥಿತಿ, ಕಾಡಿನಲ್ಲಿ ಕಳ್ಳತನ ಮಾಡುತ್ತಿದ್ದವರಿಗೂ ಸಂಕಷ್ಠ., ಈ ನಡುವೆ ಮುದ್ದಾದ ಜೋಡಿ ಪ್ರವೀಣ (ಯಶ್ ಶೆಟ್ಟಿ) ಹಾಗು ಅಮ್ಮು – ದಿವ್ಯ ( ಹರ್ಷಿತಾ ರಾಮಚಂದ್ರ) ಪ್ರೀತಿಸಿದವರು. ಕೊರೊನಾ ನಂತರ ಎದುರದಾದ ಸಮಸ್ಯೆ ಇಬ್ಬರೂ ಒಂದಿಲ್ಲೊಂದು ಸಮಸ್ಯೆಗೆ ಸಿಕ್ಕವರು. ಶಾಲೆಯಲ್ಲಿ ಕೆಲಸ ಮಾಡುವ ದಿವ್ಯ ಮತ್ತು ಐಸ್ ಕ್ರೀಂ ಉದ್ಯಮ ನಡೆಸುವ ಪ್ರವೀಣನ ಪ್ರೀತಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎನ್ನುವರಲ್ಲಿ ಅಲ್ಲೊಂದು ತಿರುವು.

ಅಚಾನಕ್ ಆಗಿ ಕಾಡಿಗೆ ಹೋದ ಜೋಡಿ ಎದುರಿಸುವ ಸಮಸ್ಯೆ, ಸವಾಲು, ಈ ನಡುವೆ ದಿವ್ಯ ಮೇಲೆ ಕಣ್ಣು ಹಾಕಿದ ಬಾಬು (ಉಗ್ರಂ ಮಂಜು) ತನ್ನ ಕೆಲಸಕ್ಕೆ ಅಡ್ಡಿ ಆಗುತ್ತಾನೆ ಎಂದು ದಿವ್ಯ ಮಾವ ( ಬಲರಾಜವಾಡಿ) ನಡುವೆ ಕಿರಕ್, ಈ ನಡುವೆ ಆಗಬಾರದ ಅವಘಡ, ಕಾಡಿನಲ್ಲಿ ಸಿಕ್ಕಿಕೊಂಡ ಜೋಡಿ ಮಾಡುವುದೇನು, ವೈರತ್ಯ, ಹಗೆತನ ಏನೆಲ್ಲಾ ಮಾಡಿಸಲಿದೆ ಎನ್ನುವುದನ್ನು ಕುತೂಹಲ ಭರಿತವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ

ನಿರ್ದೇಶಕ ರಕ್ಷಿತ್ ಕುಮಾರ್,ಸರಳವಾದ ಕಥೆಯನ್ನು ಮುಂದಿಟ್ಟುಕೊಂಡು ಕುತೂಹಲಭರಿತವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ಧಾರೆ.

ನಟ ಯಶ್ ಶೆಟ್ಟಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಹಜ ಅಭಿನಯದಿಂದಲೇ ಗಮನ ಸೆಳೆದಿದ್ಧಾರೆ. ಹಾಗು ನಟಿ ಅಕ್ಷಿತಾ ರಾಮಚಂದ್ರ ಕೂಡ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಉಳಿದಂತೆ ಉಗ್ರಂ ಮಂಜು, ಬಾಲರಾಜವಾಡಿ ಸೇರಿದಂತೆ ಸ್ಥಳೀಯ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

ಹೊಸತನವನ್ನು ಇಷ್ಟಪಡುವ ಮಂದಿಗೆ ಜಂಗಲ್ ಮಂಗಲ್ ನಿರಾಸೆ ಮಾಡುವುದಿಲ್ಲ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin