Actor Shivanna is my god, Manjunathaswamy of Dharamsthala - villain Chaluvaraj speak clearly.

Exclusive Interview : ಶಿವಣ್ಣ ನನ್ನ ಪಾಲಿಗೆ ಧರ್ಮಸ್ಥಳದ ಮಂಜುನಾಥಸ್ವಾಮಿ: ಭರವಸೆಯ ಖಳನಟ ಚಲುವರಾಜ್ ಸ್ಪಷ್ಟ ನುಡಿ - CineNewsKannada.com

Exclusive Interview : ಶಿವಣ್ಣ ನನ್ನ ಪಾಲಿಗೆ ಧರ್ಮಸ್ಥಳದ ಮಂಜುನಾಥಸ್ವಾಮಿ: ಭರವಸೆಯ ಖಳನಟ ಚಲುವರಾಜ್ ಸ್ಪಷ್ಟ ನುಡಿ

ಧಾರಾವಾಹಿಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರತಿ ಚಿತ್ರದಿಂದ ಚಿತ್ರಕ್ಕೆ ಗಮನ ಸೆಳೆಯುತ್ತಾ ಉತ್ತಮ ಕಲಾವಿದನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. “ಭಜರಂಗಿ-2”, “ವೇದ” ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಖಳನಟ ಚಲುವರಾಜ್. ಇದೀಗ ತೆಲುಗಿನ “ಭೀಮ” ಚಿತ್ರದ ಮೂಲಕ ತೆಲುಗು ಮಂದಿಯ ಮನ ಗೆಲ್ಲಲು ಮುಂದಾಗಿದ್ದಾರೆ.

ಮಹಾಭಾರತ ಧಾರಾವಾಹಿಯಲ್ಲಿ ದುರ್ಯೋಧನ ಪಾತ್ರದಾರಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡು ಸರಿ ಸುಮಾರು ಒಂದು ಸಾವಿರ ಎಪಿಸೋಡ್‍ಗಳಲ್ಲಿ ಕಾಣಿಸಿಕೊಂದು ಗಮನ ಸೆಳೆದ ಬಳಿಕ ಚಿತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಸುಂದರ ಮೈಕಟ್ಟು ಜೊತೆಗೆ ಅಷ್ಟೇ ಸೊಗಸಾದ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ.


ಹೈದರಾಬಾದ್‍ನ ಹೋಟೆಲ್‍ವೊಂದರಲ್ಲಿ ಅಚಾನಕ್ ಆಗಿ ಸಿಕ್ಕ ಭರವಸೆಯ ಖಳನಟ ಚಲುವರಾಜ್ ಅವರು ತಮ್ಮ ಚಿತ್ರ ಜೀವನದ ಬಗ್ಗೆ ಮುಕ್ತವಾಗಿ ಮಾತು ಹಂಚಿಕೊಂಡಿದ್ದಾರೆ.


• ಹೈದರಾಬಾದ್‍ನಲ್ಲಿ ಇದ್ದೀರಾ ಏನು ವಿಶೇಷ ? ಚಲುವರಾಜ್ ಅವರೆ..


ತೆಲುಗು ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ಗೆ ಬಂದಿದ್ದೇನೆ. ಚಿತ್ರದ ಹೆಸರು “ಭೀಮ” . ಈ ಚಿತ್ರದಲ್ಲಿ ನನ್ನದು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬಸವ ಮನ್ನಯ್ಯ ಎನ್ನುವ ಹೋರಾಟಗಾರನ ಕುರಿತ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದೇನೆ. ನಮ್ಮಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ರೀತಿ ಹೋರಾಟ ಮಾಡಿದವರು. ಹಾಗೆ ನೋಡಿದರೆ ಇದು ನನ್ನ ಮೂರನೇ ತೆಲುಗು ಚಿತ್ರ. ಇಲ್ಲಿಯ ಜನರು ಚಿತ್ರತಂಡ ಪ್ರೀತಿ ಅಭಿಮಾನದಿಂದ ಕಾಣ್ತಾರೆ. ಅದನ್ನು ಉಳಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿ. ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಅನುಭವ. ನಿರ್ದೇಶಕರಿಂದ ಹಿಡಿದು ಚಿತ್ರತಂಡ ತೋರುವ ಪ್ರೀತಿಗೆ ಅಬಾರಿ ಮತ್ತು ಋಣಿ.


• ಶಿವಣ್ಣ ಜೊತೆ ಒಂದರ ಹಿಂದೆ ಒಂದು ಚಿತ್ರಗಳಲ್ಲಿ ನಟಿಸ್ತಿದ್ದೀರಾ,ಅವರೊಂದಿಗೆ ಅನುಭವ ಹೇಗಿತ್ತು


ಶಿವಣ್ಣ ಜೊತೆ ನಟನೆಯ ಅನುಭವ ಹೇಳತೀರದು, ಅದಕ್ಕೆ ಹೇಳುವುದು ಅವರೊಬ್ಬ ಕರುನಾಡು ಕಂಡ ಅಪರೂಪದ ಕಲಾವಿದೆ. ಅವರ ಜೊತೆ ಕೆಲಸ ಮಾಡಿದ ಅನುಭವಕ್ಕಿಂತ ಅವರು ತಮ್ಮೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ನೋಡ್ತಾರೆ. ಗೀತಾ ಪ್ರೊಡಕ್ಷನ್ಸ್ ಅನೇಕ ಕಲಾವಿದರಿಗೆ ಬದುಕು ನೀಡುತ್ತಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಇನ್ನು ಶಿವಣ್ಣ ಅವರ ಜೊತೆ ಭಜರಂಗಿ-2 ಮತ್ತು ವೇದ ಚಿತ್ರದಲ್ಲಿ ಜೊತೆ ನಟಿಸಿದ್ದೇನೆ. ಅವರು ತೋರುವ ಪ್ರೀತಿಗೆ ಫಿದಾ ಆಗಿದ್ದೇನೆ.


ಶಿವಣ್ಣ ಮತ್ತು ನಿರ್ದೇಶಕ ಎ. ಹರ್ಷ ಮಾಸ್ಟರ್ ಸಹಕಾರಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನನ್ನ ಪಾಲಿಗೆ ಇವರಿಬ್ಬರು ಸಾಕ್ಷಾತ್ ಮಂಜುನಾಥ್ ಸ್ವಾಮಿ ಇದ್ದಂತೆ. ನಾನು ಮಂಜುನಾಥ್ ಸ್ವಾಮಿಯ ಬಗ್ಗೆ ಅಪಾರ ನಂಬಿಕೆ ಹೊಂದಿದವನು. ವೇದ ಚಿತ್ರದ ಪ್ರಚಾರಕ್ಕೆ ತೆರಳಿದ ಸಮಯದಲ್ಲಿ ಶಿವಣ್ಣ ಅವರ ಬೆಂಬಲ ಸಹಕಾರ ಮರೆಯಲಾಗದ್ದು ಎಂದರು.

• ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರರಂಗ ಅನುಭವ ಹೇಗಿತ್ತು

ಕನ್ನಡ ಮತ್ತು ತೆಲುಗು ಭಾಷೆಯ ನಡುವೆ ಹೊಂದಾಣಿಕೆ ಮಾಡುವುದೇ ಕಷ್ಟ. ಎರಡೂ ಉದ್ಯಮದಲ್ಲಿ ಕೆಲಸ ಮಾಡುವ ಅನುಭವವೇ ಬೇರೆ ಬೇರೆ. ಕನ್ನಡದಲ್ಲಾದರೆ ಎಲ್ಲರೂ ನಮ್ಮವರೇ ತಪ್ಪು ಮಾಡಿದರೆ ತಿದ್ದುತ್ತಾರೆ. ಎಚ್ಚರಿಸುತ್ತಾರೆ. ಇದು ನಮ್ಮ ಮನೆ, ತೆಲುಗು ಉದ್ಯಮ ನೆಂಟರ ಮನೆ ಇದ್ದಂತೆ ತಪ್ಪು ಅಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ತಪ್ಪಾದರೆ ಎಚ್ಚರಿಸುವ ಸಸರಿ ಮಾಡಲು ಯಾರೂ ಇಲ್ಲ, ಹೀಗಾಗಿ ಭಯ ಭಕ್ತಿಯಿಂದ ಕೆಲಸ ಮಾಡುತ್ತಿರುವೆ

• ಬೇರೆ ಭಾಷೆಯಿಂದ ಅವಕಾಶ ಬಂದಿದೆಯಾ?

ಖಂಡಿತಾ ಬಂದಿವೆ. ಕನ್ನಡ, ತೆಲುಗು ಅಲ್ಲದೆ. ತಮಿಳು ಚಿತ್ರರಂಗದಿಂದ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಬಂದಿತ್ತು. ದರಲ್ಲಿ ಖಳನಟನ ಪಾತ್ರ. ನಾಯಕನಾಗುವ ಹಂಬಲದಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಆ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರೂ ಸಾಕಗಿತ್ತು ನಾನೇ ಪುಣ್ಯವಂತ ಎನ್ನುವ ಫೀಲ್ ಆಗುತ್ತಿತ್ತು

  • ನಿಮ್ಮ ನಟನೆಯ ಬಗ್ಗೆ ತೃಪ್ತಿ ಇದೆಯಾ

ಈಗಷ್ಟೇ ಒಂದರ ಹಿಂದೆ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲಸದಲ್ಲಿ ಇನ್ನೂ ತೃಪ್ತಿ ಇಲ್ಲ. ಅಷ್ಟು ಬೇಗ ನಟನೆಯಲ್ಲಿ ತೃಪ್ತಿ ಪಡೆಯುವ ಮಾತೇ ಇಲ್ಲ. ಇನ್ನಷ್ಟು ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುವ ಉದ್ದೇಶವಿದೆ.

• ಯಾವ ಯಾವ ಕಲಾವಿದರ ಜೊತೆ ನಟಿಸುವ ಆಸೆ ಇದೆ.

ಈಗಾಗಲೇ ಶಿವಣ್ಣ ಜೊತೆ ನಟಿಸಿದ್ದೇನೆ. ಅವರ ಜೊತೆ ಎಷ್ಟೇ ಚಿತ್ರಗಳು ಬಂದರೂ ನಟಿಸುತ್ತೇನೆ. ಶಿವಣ್ಣ ಅವರಲ್ಲದೆ ಸುದೀಪ್, ದರ್ಶನ್ , ಯಶ್ ಅವರ ಸಿನಿಮಾ ಗಳಲ್ಲಿ ನಟಿಸುವ ಉದ್ದೇಶವಿದೆ. ಮುಂದೆ ಸಿಗಬಹುದು ನೋಡೋಣ, ನನಗಂತು ಆಸೆ ಇದೆ ಎಂದರು.

  • ಧಾರಾವಾಹಿಯಿಂದ ಬಂದವರು ಮತ್ತೆ ಅವಕಾಶ ಬಂದಿದೆಯಾ

ಧಾರಾವಾಹಿಯಿಂದಲೂ ಸಾಕಷ್ಟು ಅವಕಾಶ ಬರುತ್ತಿವೆ. ನಾನು ಬಂದಿರುವುದು ಧಾರಾವಾಹಿಯಿಂದಲೇ ಆದರೆ ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರ ಜೊತೆ ಕೆಲಸ ಮಾಡುವ ಗುರಿ ಮತ್ತು ಉದ್ದೇಶ ಇರುವ ಹಿನ್ನೆಲೆಯಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಿಲ್ಲ. ಹಾಗಂತ ಧಾರಾವಾಹಿ ಬಗ್ಗೆ ಯಾವುದೇ ಅಪನಂಬಿಕೆ ಇಲ್ಲ. ಅಲ್ಲಿಯೇ ಹಣ,ಖ್ಯಾತಿ ಗಳಿಸಬಹುದು, ಸದ್ಯಕ್ಕೆ ಸಿನಿಮಾಕ್ಕೆ ಆದ್ಯತೆ

• ಚಿತ್ರರಂಗಕ್ಕೆ ಬರುವ ಮುನ್ನ ತರಬೇತಿ ಪಡೆದಿದ್ದರಾ ಅಥವಾ ಹೇಗೆ?

ಹೌದು ಚಿತ್ರರಂಗಕ್ಕೆ ಬರುವ ಮುನ್ನ ಆದರ್ಶ ಫಿಲ್ಮ್ ಇನ್ಸಿಟಿಟೂಟ್‍ನಲ್ಲಿ ತರಬೇತಿ ಪಡೆದೆ. ಆ ನಂತರ “ಮಹಾಭಾರತ” ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದೆ ರಮೇಶ್ ಪಂಡಿತ್, ಜಯಣ್ಣ ಸೇರಿದಂತೆ ಅನೇಕ ಕಲಾವಿದರು ನನ್ನನ್ನು ಗುರುತಿಸಿ ಪ್ರೋತ್ಸಾಹ ನೀಡಿದರು ಅವರ ಪ್ರೋತ್ಸಾಹವೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕಾರಣ ಎಂದರೆ ತಪ್ಪಲ್ಲ.

• ನೋಡಲು ಸುಂದರವಾಗಿದ್ದೀರಿ, ಉತ್ತಮ ಮೈಕಟ್ಟು ಇದೆ, ನಾಯಕನಾಗುವ ಅವಕಾಶ ಬಂದಿತ್ತಾ ? ಅಥವಾ ನಿಮಗೆ ಆಸೆ ಇದೆಯಾ

ನನಗೂ ಆಸೆ ಇದೆ. ಜೊತೆಗೆ ನಾಯಕನಾಗುವ ಅವಕಾಶವೂ ಬಂದಿತ್ತು. ಕೆಲ ಕಾರಣದಿಂದ ಇನ್ನೂ ಸಾಧ್ಯವಾಗಿಲ್ಲ. ಮುಂದೆ ಅವಕಾಶ ಬರಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. ನಾಯಕನಾಗಬೇಕು ಎನ್ನುವ ಕಾರಣಕ್ಕಾಗಿಯೇ ತಮಿಳಿನಲ್ಲಿ ಖ್ಯಾತ ನಟರೊಬ್ಬರ ಚಿತ್ರದಲ್ಲಿ ಖಳನಾಯಕನಾಗುವ ಅವಕಾಶ ತಪ್ಪಿತು. ಆ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರೆ ಸಾಕಾಗಿತ್ತು. ಈಗ ನಾವೇ ಸ್ನೇಹಿತರೆಲ್ಲಾ ಸೇರಿಕೊಂಡು” ಗರುಡ ಪುರಾಣ” ಚಿತ್ರ ಮಾಡಿದ್ದೇವೆ.

• ಗರುಡ ಪುರಾಣ ಚಿತ್ರ ಯಾವ ಹಂತದಲ್ಲಿದೆ. ಯಾವ ಜಾನರ್ ಕಥೆ,


ಮೊದಲೇ ಹೇಳಿದ ಹಾಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮರ್ಡರ್ ಮಿಸ್ಟ್ತ್ರಿಯೂ ಚಿತ್ರದಲ್ಲಿ ಚಿತ್ರದ ಅಂತಿಮ ಕೆಲಸ ನಡೆಯುತ್ತಿದೆ. ವಿಭಿನ್ನವಾದ ಕಥೆಯನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಕಥೆ ಮತ್ತು ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ಅವರದು.

• ನಿಮ್ಮ ಗುರಿ ಏನು?

ನಾನು ಕಲಾವಿದನಾಗಿ ಚಿತ್ರರಂಗಕ್ಕೆ ಬಂದಿದ್ದೇನೆ, ಕಲಾವಿದನಾಗಿ ಸೇವೆ ಸಲ್ಲಿಸಬೇಕು ಮತ್ತು ಕಲಾವಿದನಾಗಿ ಸಾಯಬೇಕು ಎನ್ನುವುದು ನನ್ನ ಮಹಾದಾಸೆ. ಈಗ ಸತ್ತರೂ ಬೇಜಾರಿಲ್ಲ. ಕಲಾವಿದನಾಗಿಯೇ ಇರಬೇಕು ದಾರಿ ತೋರಿಸಿದಂತೆ ನಡೆಯುತ್ತೇನೆ, ಮಾಡುವ ಪ್ರತಿ ಪಾತ್ರದ ಮೂಲಕ ಗುರುತಿಸಿಕೊಳ್ಳುವ ಆಸೆ ಮತ್ತು ಕನಸು ನನ್ನದು ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin