Ishaana makes entry to sandalwood

ಕನ್ನಡಕ್ಕೆ ಹೊಸ ಹುಡುಗಿ ಆಗಮನ: ಇಶಾನ ಎಂಬ ಕನಸು ಕಂಗಳ ಚೆಲುವೆ - CineNewsKannada.com

ಕನ್ನಡಕ್ಕೆ ಹೊಸ ಹುಡುಗಿ ಆಗಮನ: ಇಶಾನ ಎಂಬ ಕನಸು ಕಂಗಳ ಚೆಲುವೆ

ಕನ್ನಡ ಸಿನಿಮಾರಂಗ ಈಗ ಎಲ್ಲೆಡೆ ಶೈನ್ ಆಗಿದೆ. ಹಾಗೆಯೇ ದಿನ ಕಳೆದಂತೆ ಕನ್ನಡ ಸಿನಿಮಾರಂಗಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಕನಸು ಕಂಗಳ ಚೆಲುವೆ ಇಶಾನ ಎಂಬ ಅಪ್ಪಟ ಕನ್ನಡತಿ ಕೂಡ ಸೇರಿದ್ದಾಳೆ.

ಹೌದು, ಇಶಾನ ಈಗಷ್ಟೇ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸುತ್ತಿರುವ ಚೆಲುವೆ. ಸದ್ಯ ಇನ್ನೂ ಹೆಸರಿಡದ ಕನ್ನಡ ಸಿನಿಮಾಗೆ ಇಶಾನ ನಾಯಕಿ ಆಗುತ್ತಿದ್ದಾರೆ. ಗೀತ ಸಾಹಿತಿ ಹಾಗು ನಿರ್ದೇಶಕ ಗೌಸ್ ಪೀರ್ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಇಶಾನ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಗೌಸ್ ಪೀರ್ ಅವರು ತಮ್ಮ ವಿ ಕ್ಯಾನ್ ಎಂಟರ್ಟೈನ್ ಬ್ಯಾನರ್ ನಲ್ಲಿ ಥ್ರಿಲ್ಲರ್ ಕಥೆ ಇರುವ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಚಿತ್ರಕ್ಕೆ ಇಶಾನ ನಾಯಕಿ.

ಇನ್ನು, ಇಶಾನ, ಕನ್ನಡ ಸಿನಿಮಾ ಮಾಡುವ‌ ಮೊದಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೂ ನಾಯಕಿಯಾಗಿದ್ದಾರೆ. ತಮಿಳಿನ ‘ರೇಟ್ಲ’ ಎಂಬ ಸಿನಿಮಾದ ಇಬ್ಬರು ನಾಯಕಿಯರ ಪೈಕಿ ಇಶಾನ ಕೂಡ ಒಬ್ಬರು. ವಿಶೇಷವೆಂದರೆ, ಈ ಸಿನಿಮಾಗೆ ಪ್ರಭುದೇವ ಹೀರೋ. ಅವರೊಂದಿಗೆ ನಟಿಸುತ್ತಿರುವ ಇಶಾನಗೆ ಇನ್ನಿಲ್ಲದ ಖುಷಿ. ಉಳಿದಂತೆ ತೆಲುಗಿನ ‘ ಕರ್ಮ’ ಎಂಬ ಸಿನಿಮಾದಲ್ಲೂ ಇಶಾನ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಕಾರ್ತಿಕ್ ದಿಬಕಿಲ್ಲರ್ ಸಿನಿಮಾದ ಹೀರೋ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರಭುದೇವ ಅವರ ಪ್ಯಾನ್ ಇಂಡಿಯಾ ಸಿನಿಮಾ ಇಷ್ಟರಲ್ಲೇ ಶುರುವಾಗಬೇಕಿದೆ. ಅದರ ಜೊತೆಯಲ್ಲೇ ಇಶಾನ, ಕನ್ನಡದ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇಶಾನ ಮೂಲತಃ ಉತ್ತರ ಕರ್ನಾಟಕದ ಹುಡುಗಿ. ತಂದೆ ಡಾಕ್ಟರ್. ಬೆಂಗಳೂರಲ್ಲೇ ನೆಲೆಸಿರುವ ಇಶಾನ, ಬಿ ಕಾಂ, ಎಂಬಿಎ ಮುಗಿಸಿದ್ದಾರೆ. ಕಾಲೇಜ್ ದಿನಗಳಲ್ಲೇ ಸಿನಿಮಾ ಅವಕಾಶ ಬಂದರೂ, ಎಜುಕೇಷನ್ ಮುಗಿಸುವ ಹಂಬಲ ಇಶಾನ ಅವರಿಗಿತ್ತು. ಕಾಲೇಜು ಮುಗಿದ ಕೂಡಲೇ ಇಶಾನಗೆ ಸಿನಿ ಜಗತ್ತು ಕೈ ಬೀಸಿ ಕರೆದಿದ್ದೇ ತಡ, ನಾಯಕಿ ಆಗುವ ಮೊದಲು ನಟನೆ ಅರ್ಹತೆ ಪಡೆದುಕೊಳ್ಳಬೇಕೆಂದು ಚಾಮರಾಜ್ ಮಾಸ್ಟರ್ ಬಳಿ ನಟನೆ ತರಬೇತಿ ಕೂಡ ಪಡೆದುಕೊಂಡಿದ್ದಾರೆ. ಮೊದಲ ಬಾಲ್ ನಲ್ಲೇ ಸಿಕ್ಸರ್ ಹೊಡೆದಂತೆ, ಮೊದಲ ಎಂಟ್ರಿಯಲ್ಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ. ಒಬ್ಬ ನಾಯಕಿಗೆ ಏನೆಲ್ಲಾ ಅರ್ಹತೆ ಇರಬೇಕು ಅದೆಲ್ಲವನ್ನೂ ಅರಿತು, ಡ್ಯಾನ್ಸ್ , ನಟನೆಯಲ್ಲಿ ಪಕ್ವಗೊಂಡು ಈಗಷ್ಟೇ ಸಿನಿ ಫೀಲ್ಡ್ ಗೆ ಎಂಟ್ರಿಯಾಗುತ್ತಿದ್ದಾರೆ. ಒಳ್ಳೆಯ ಕಥೆ ಹಾಗು ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಇಲ್ಲೇ ಗಟ್ಟಿ ನೆಲೆ ಕಾಣುವ ಆಸೆ ಈ ಹುಡುಗಿಯದ್ದು.

admin

One thought on “ಕನ್ನಡಕ್ಕೆ ಹೊಸ ಹುಡುಗಿ ಆಗಮನ: ಇಶಾನ ಎಂಬ ಕನಸು ಕಂಗಳ ಚೆಲುವೆ

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin