"Ritu" is a touching short film about menstruation

“ಋತು” ಮುಟ್ಟಿನ ಬಗ್ಗೆ ಒಂದು ಮನಮುಟ್ಟುವ ಕಿರುಚಿತ್ರ - CineNewsKannada.com

“ಋತು” ಮುಟ್ಟಿನ ಬಗ್ಗೆ ಒಂದು ಮನಮುಟ್ಟುವ ಕಿರುಚಿತ್ರ

ಕಾಲ ಎಷ್ಟೇ ಮುಂದುವರೆದರೂ ಇನ್ನೂ ಕೆಲವು ಆಚರಣೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ಅದರಲ್ಲಿ ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟು ಕೂಡ ಒಂದು.

ಈ ಮುಟ್ಟಿನ ಸಮಸ್ಯೆ ಬಗ್ಗೆ ಟೆಂಟ್ ಸಿನಿಮಾದ ಸಮರ್ಥ್ ನಾಗರಾಜ್ ಮನಮುಟ್ಟುವ “ಖುತು” ಎಂಬ 22 ನಿಮಿಷಗಳ ಕಿರುಚಿತ್ರ ಮಾಡಿದ್ದಾರೆ. “” ಋತು” ವಿಗೆ ಬದಲಾಗಬೇಕು ಎಂಬ ಅಡಿಬರಹ ಕೂಡಯಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಮಯೂರಿ ಖ್ಯಾತರಿ ಹಾಗೂ ನಿರ್ದೇಶಕ ಶೂನ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮೊದಲು “ಋತು” ಕಿರುಚಿತ್ರದ ಬಗ್ಗೆ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ನಾವು ಒಂದು ಕಡೆ ಚಂದ್ರಯಾನಕ್ಕೆ ಸಜ್ಜಾಗಿದ್ದೇವೆ. ಮತ್ತೊಂದು ಕಡೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ‌. ಹೆಚ್ಚಾಗಿ ಹಳ್ಳಿ ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಇದರ ಬಗ್ಗೆ ಅರಿವಿಲ್ಲದ ಜನ ಹೆಚ್ಚಿದ್ದಾರೆ. ಇಂದು ಹಳ್ಳಿಗಳಲ್ಲಿ ಮೂರು ವೈನ್ ಸ್ಟೋರ್ ಗಳಿರುತ್ತದೆ. ಅಜ್ಜ ಅಜ್ಜಿಯರ ಕೈಯಲ್ಲೂ ಮೊಬೈಲ್ ಇರುತ್ತದೆ. ಆದರೆ ಸರಿಯಾದ ಶೌಚಾಲಯ ಇರುವುದಿಲ್ಲ. ನಾವು ಇನ್ನೂ ಸಾಕಷ್ಟು ಬದಲಾಗಬೇಕು ಎಂಬುದನ್ನು ಸಮರ್ಥ್ ಈ ಕಿರುಚಿತ್ರದ ಮೂಲಕ ಸಮರ್ಥವಾಗಿ ತೋರಿಸಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದರು.

ನಿರ್ದೇಶಕ ಸಮರ್ಥ್ ನಾಗರಾಜ್ ಮಾತನಾಡಿ, ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ಸಾಕಷ್ಟು ಕಲಿತಿದ್ದೇನೆ.‌ ಆ ಕಲಿಕೆಯೆ ಈ ಕಿರುಚಿತ್ರ ಮಾಡಲು ಕಾರಣ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯಿದು. ಪಿರಿಯಡ್ಸ್ ಎಂದರೆ ಒಂದು ಸಮಸ್ಯೆ ಅಂದುಕೊಂಡಿರುವವರು ಬಹಳ ಜನರಿದ್ದಾರೆ. ನಮ್ಮ ಈ ಪ್ರಯತ್ನದಿಂದ ಇದು ಸಮಸ್ಯೆಯಲ್ಲ .”ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ ಮುಟ್ಟಲ್ಲವೆ ಸೃಷ್ಟಿಯಾ ಹುಟ್ಟು,,


ಮುಟ್ಟು ಮುಟ್ಟೆಂದೇಕೆ ಮುಟ್ಟಾಳರಂತೆ ಆಡುವಿರಿ ಮುಟ್ಟಲವೆ ನಮ್ಮೆಲರ ಹುಟ್ಟಿನ ಗುಟ್ಟು” ಎಂಬ ಉತ್ತಮ ಸಂದೇಶವನ್ನು ಸಾರುದ್ದೇವೆ. ಕಿರುಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ, ನಿರ್ಮಾಣ ಮಾಡಿದ ನನ್ನ ತಂದೆ ನಾಗರಾಜ್ ಅವರಿಗೆ ಹಾಗೂ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಧನ್ಯವಾದ ಎಂದರು

ಹಿರಿಯ ನಟಿ ಅಪೂರ್ವ ಮಾತನಾಡಿ, ಟೀಮ್ ಅಂದುಕೊಂಡರೆ ಕೆಲಸ ಮಾಡುವುದು ಖುಷಿಯಾಗಲಿದೆ. ತಂಡದಲ್ಲಿ ಉತ್ತಮ ಭಾವನೆ ಕಥೆ, ಚೆನ್ನಾಗಿತ್ತು. ಎಲ್ಲಾ ಕಡೆ ಸರಿಯಾಗಿ ನೊಡಿಕೊಳ್ಳುವುದು. ಆದರೂ ನಮ್ಮ ತನ ಯಾವುದು ಬಿಡಬಾರದು. ಹತ್ತು ಜನಕ್ಕೆ ಒಳ್ಳೆಯ ವಿಷಯ ಒಳ್ಳೆಯದಾಗಲಿ ಎಂದರು.
ಕಿರುಚಿತ್ರಕ್ಕೆ ನಿರ್ಮಾಪಕ ನಾಗರಾಜ್ ಬಂಡವಾಳ ಹೂಡಿದ್ದಾರೆ. ಹನುಮಂತೇಗೌಡ, ಆದರ್ಶ್ ಈಶ್ವರಪ್ಪ ಸಂಕಲನ ಮಾಡಿದ್ದಾರೆ. ಮುಖ್ಯಪಾತ್ರ ಗಗನ ಹಂಚಿಕೊಂಡರು.

ಕಿರುಚಿತ್ರದಲ್ಲಿ ನಟಿಸಿರುವ “ಸಿಂಚನ ಶಿವಣ್ಣ ಮುಂತಾದವರು “ಖುತು”ವಿನ ಬಗ್ಗೆ ಮಾಹಿತಿ ನೀಡಿದರು. ನಟಿ ಮಯೂರಿ ಹಾಗೂ ನಿರ್ದೇಶಕ ಶೂನ್ಯ ಸಹ ಕಿರುಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು.

ಈ ಕಿರುಚಿತ್ರ ಎನ್ ಆರ್ ಎಸ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ನೋಡಲು ಲಭ್ಯವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin