Sandalwood Cup: Shuttle Badminton Tournament Jersey Released by Kiccha Sudeep

ಸ್ಯಾಂಡಲ್ ವುಡ್ ಕಪ್ : ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ - CineNewsKannada.com

ಸ್ಯಾಂಡಲ್ ವುಡ್ ಕಪ್ : ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜೆರ್ಸಿ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಸ್ಯಾಂಡಲ್‍ವುಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‍ನ ಜೆರ್ಸಿ ಅನಾವರಣ ಹಾಗೂ ಆಟಗಾರರ ಆಯ್ಕೆ ನಡೆಯಿತು. ಕಿಚ್ಚ ಸುದೀಪ್ ಜೆರ್ಸಿ ಅನಾವರಣ ಮಾಡಿ ಇಡೀ ತಂಡಗಳಿಗೆ ಶುಭಕೋರಿದ್ದು ಚಿತ್ರರಂತದ ತಾರೆಯರು,ಕಿರುತೆರೆ ಕಲಾವಿದರು, ಮಾಧ್ಯಮದವರು ಹಾಗೂ ತಂತ್ರಜ್ಞರು ಭಾಗಿಯಾಗುವ ಕ್ರೀಡಾಕೂಟ ಸೆಪ್ಟೆಂಬರ್ 28-29ರಂದು ನಡೆಯಲಿದೆ.

ನಟ ಕಿಚ್ಚ ಸುದೀಪ್ ಮಾತನಾಡಿ, ಚಿತ್ರರಂಗ ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದೆ. ಓಳ್ಳೆ ಸುದ್ದಿಗಳಿಂದ ಸದ್ದು ಮಾಡುತ್ತಿಲ್ಲ. ಬರೀ ಕೆಟ್ಟ ಸುದ್ದಿಯಿಂದಲೇ ಸದ್ದು ಮಾಡುತ್ತಿದೆ. ಅಂತಹುದರಲ್ಲಿ ಸುಂದರ ಕಾರ್ಯಕ್ರಮ ಇದು. ಎಲ್ಲರೂ ಒಟ್ಟಿಗೆ ಸೇರಿದ್ದೀವಿ ಅಂದರೆ, ಚಿತ್ರರಂಗದ ಬಗ್ಗೆ ತಪ್ಪು ತಿಳಿದುಕೊಂಡವರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದೇವೆ. ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರಿಗೂ ಒಳ್ಳೆದಾಗಲಿ” ಎಂದು ತಿಳಿಸಿದ್ದಾರೆ.

ಹಿರಿಯ ನಟ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಹಮ್ಮಿಕೊಂಡಿದೆ. ಒಂದೆಡೆ ಸಹಾಯ ದೃಷ್ಟಿಯಿಂದ, ಮತ್ತೊಂದಡೆ ಇಡೀ ಚಿತ್ರರಂಗವನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದಾರೆ. ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿರುವ ಇಡೀ ತಂಡಗಳಿ ಒಳ್ಳೆಯದಾಗಲಿ” ಎಂದರು.

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಈ ಹಿಂದೆ ಅಪ್ಪು ಕಪ್ ಎಂದು ಮಾಡಿದ್ದೇವು. ಅದು ಎರಡನೇ ಭಾಗ ತುಂಬಾ ಚೆನ್ನಾಗಿ ಎರಡು ಎಡಿಷನ್ ಮುಗಿದಿದೆ. ಬರುವ ವರ್ಷ ದುಬೈನಲ್ಲಿ ಮಾಡೋಣಾ ಎಂದುಕೊಂಡಿದ್ದೇವೆ. ಅದೇ ರೀತಿ ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಬೇಕು ಎಂದು ತಿಳಿಸಿದರು.

ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಮನರಂಜನೆ ಉದ್ದೇಶದಿಂದ ಶುರು ಮಾಡಿರುವುದಲ್ಲ. ಬದಲಾಗಿ ಒಂದೊಳ್ಳೆ ಕಾರ್ಯ ಇಟ್ಟುಕೊಂಡು ಈ ಕಪ್ ಪ್ರಾರಂಭಿಸಲಾಗಿದೆ. ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು , ವಿತರಕರು, ನಿರ್ಮಾಪಕರು ಕಷ್ಟದಲ್ಲಿರುವ ಸಹಾಯ ಮಾಡುವುದು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯವಾಗಿದೆ.

ಹಿರಿಯ ನಿರ್ಮಾಪಕರಾದ ಸಾ.ರಾ ಗೋವಿಂದ್, ಭಾ.ಮಾ ಹರೀಶ್, ಭಾ.ಮಾ.ಗಿರೀಶ್ ಎನ್ ಎಂ ಸುರೇಶ್, ಎ ಗಣೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರವೀಣ್ ಕುಮಾರ್, ಜಯಸಿಂಹ ಮೂಸರಿ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ಕಪ್ 2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಸಲಾಗುತ್ತದೆ.

ತಂಡಗಳು ಹಾಗೂ ತಂಡದ ನಾಯಕರು

  • ಅಜಯ್ ರಾವ್ – ಗಂಧದಗುಡಿ ಗ್ಯಾಂಗ್
  • ಮನುರಂಜನ್– ರಣಧೀರ ರೈಡಸ್ರ್ಸ್
  • ಚೇತನ್ ಚಂದ್ರ -ಬುದ್ಧಿವಂತ ಬ್ಲಾಸ್ಟರ್ಸ್
  • ವಶಿಷ್ಠ ಸಿಂಹ– ಅಂತ ಹಂಟಸ್ರ್ಸ್
  • ವಿಕ್ರಮ್ ರವಿಚಂದ್ರನ್ – ಅಮೃತವರ್ಷಿಣಿ ಅವೆಂಜಸ್ರ್ಸ್
  • ಮಯೂರ್ ಪಟೇಲ್ -ಟೈಗರ್ ಟೈಟಾನ್ಸ್
  • ಶ್ರೀನಗರ ಕಿಟ್ಟಿ– ಸೂರ್ಯವಂಶ ಸ್ವ್ಯಾಡ್
  • ಪೃಥ್ವಿ ಅಂಬಾರ್– ಸಾಂಗ್ಲಿಯಾನ ಸ್ಮ್ಯಾಷಸ್ರ್ಸ್
  • ಪ್ರಮೋದ್ ಶೆಟ್ಟಿ – ಓಂ ವಾರಿಯಸ್ರ್ಸ್
  • ಸೃಜನ್ ಲೋಕೇಶ್ – ಅಪ್ಪು ಫ್ಯಾಂಥಸ್ರ್ಸ್

ಉಪನಾಯಕರು ಯಾರು

• ಸಿಂಧು ಲೋಕನಾಥ್- ಗಂಧದಗುಡಿ ಗ್ಯಾಂಗ್
• ಶೃತಿ ಹರಿಹರನ್– ರಣಧೀರ ರೈಡಸ್ರ್ಸ್
ಜಾಹ್ನವಿ– ಬುದ್ಧಿವಂತ ಬ್ಲಾಸ್ಟರ್ಸ್
• ದಿವ್ಯಾ ಸುರೇಶ್– ಅಂತ ಹಂಟಸ್ರ್ಸ್
• ಕರುಣ್ಯಾ ರಾಮ್-ಅಮೃತವರ್ಷಿಣಿ ಅವೆಂಜಸ್ರ್ಸ್
ಸಂಜನಾ ಗಲ್ರಾನಿ -ಟೈಗರ್ ಟೈಟಾನ್ಸ್
ತನಿಷಾ ಕುಪ್ಪಂಡ– ಸೂರ್ಯವಂಶ ಸ್ವ್ಯಾಡ್
• ಶ್ಯಾವ್ಯಾ ಶೆಟ್ಟಿ – ಸಾಂಗ್ಲಿಯಾನ ಸ್ಮ್ಯಾಷಸ್ರ್ಸ್
ಸುಕೃತಾ ವಾಗ್ಲೆ – ಓಂ ವಾರಿಯಸ್ರ್ಸ್
• ಮೇಘನಾ ರಾಜ್ – ಅಪ್ಪು ಫ್ಯಾಂಥಸ್ರ್ಸ್

ಮೆಂಟರ್ಸ್ ಪಟ್ಟಿ

  • ಜೋಗಿ– ಗಂಧದಗುಡಿ ಗ್ಯಾಂಗ್
  • ರಂಗನಾಥ್ ಭಾರದ್ವಾಜ್- ರಣಧೀರ ರೈಡಸ್ರ್ಸ್
  • ಸದಾಶಿವ ಶೆಣೈ– ಬುದ್ಧಿವಂತ ಬ್ಲಾಸ್ಟರ್ಸ್
  • ಯಮುನಾ ಶ್ರೀನಿಧಿ– ಅಂತ ಹಂಟಸ್ರ್ಸ್
  • ಕವಿತಾ ಲಂಕೇಶ್-ಅಮೃತವರ್ಷಿಣಿ ಅವೆಂಜಸ್ರ್ಸ್
  • ಆರೂರು ಜಗದೀಶ್ -ಟೈಗರ್ ಟೈಟಾನ್ಸ್
  • ಟಿ.ಪಿ.ಸಿದ್ದರಾಜು– ಸೂರ್ಯವಂಶ ಸ್ವ್ಯಾಡ್
  • ತಾರಾ ಅನುರಾಧಾ– ಸಾಂಗ್ಲಿಯಾನ ಸ್ಮ್ಯಾಷಸ್ರ್ಸ್
  • ರಾಜೇಶ್ ರಾಮನಾಥ್ – ಓಂ ವಾರಿಯಸ್ರ್ಸ್
  • ಇಂದ್ರಜಿತ್ ಲಂಕೇಶ್ – ಅಪ್ಪು ಫ್ಯಾಂಥಸ್ರ್ಸ್

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin