Rakkasapuradhol Movie Review : ವಿಜ್ಞಾನ, ಮೂಡನಂಬಿಕೆಯ ಸುತ್ತ ಕೌತುಕದ ಆಗರ “ರಕ್ಕಸಪುರದೊಳ್”
ಚಿತ್ರ : ರಕ್ಕಸಪುರದೊಳ್
ನಿರ್ದೇಶನ: ರವಿ ಸಾರಂಗ
ತಾರಾಗಣ: ರಾಜ್ ಬಿ ಶೆಟ್ಟಿ, ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಗೋಪಾಲ ದೇಶಪಾಂಡೆ, ಬಿ.ಸುರೇಶ್, ಜಹಂಗೀರ್ ಮತ್ತಿತರರು
ರೇಟಿಂಗ್ : * 3.5 / 5
ಪ್ರತಿ ಬಾರಿಯೂ ಒಂದಿಲ್ಲೊಂದು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುವ ಕಲೆ ಕರಗತ ಮಾಡಿಕೊಂಡಿರುವ ರಾಜ್ ಬಿ ಶೆಟ್ಟಿ ಈ ಬಾರಿ ಮತ್ತೊಂದು ವಿಭಿನ್ನ ಕಥೆಯ ಮೂಲಕ ಕೌತುಕ ಹುಟ್ಟಿಸಿದ್ದಾರೆ.
ಪ್ರತಿ ಸಿನಿಮಾದಲ್ಲಿ ವಿಶೇಷತೆಗಳಿಗೆ ಮತ್ತು ಕಥೆಗೆ ಒತ್ತು ನೀಡುವ ರಾಜ್ ಬಿ ಶೆಟ್ಟಿ ಇತರರಿಗಿಂತ ತಾವೊಬ್ಬ ವಿಭೀನ್ನ ನಾಯಕ ನಟ ಎನ್ನುವುದನ್ನು ಸಿನಿಮಾದಿಂದ ಸಿನಿಮಾದಲ್ಲಿ ತೋರಿಸುತ್ತಲೇ ಇದ್ದಾರೆ. ಅದಕ್ಕೆ ಮತ್ತೊಂದು ಸಿನಿಮಾ ರಕ್ಕಸಪುರದೊಳ್ ಚಿತ್ರ.
ಪತ್ನಿ ಕಳೆದುಕೊಂಡು ಕುಡಿತದ ಚಟಕ್ಕೆ ದಾಸನಾಗಿರುವ ಪೆÇಲೀಸ್ ಅಧಿಕಾರಿ ಶಿವ (ರಾಜ್ ಬಿ ಶೆಟ್ಟಿ) ಅಪರಾಧವೇ ನಡೆಯದ ಊರಿಗೆ ವರ್ಗವಾಗಿ ಬರುತ್ತಾನೆ. ಮೂಢನಂಬಿಕೆಯಿಂದ ಕೂಡಿದ ಅ ಹಳ್ಳಿಯಲ್ಲಿ ಒಂದೊಂದೇ ವಿಚಿತ್ರಗಳು ನಡೆಯಲಿವೆ.ಈತನ ವರ್ತನೆಗೆ ಪೆÇಲೀಸ್ ವೇಷದಲ್ಲಿರುವ ರಾಕ್ಷಸ ಎಂದೇ ಬ್ರಾಂಡ್ ಆದವ.
ಒಂದೆಡೆ ಭಯ ಮತ್ತು ಮುಂದೇನು ಎನ್ನುವ ಸೆಳೆಯದ ಮಡುವೆ. ಒಂದೊಂದೇ ರಹಸ್ಯಗಳ ಅನಾವರಣ ಮಾಡುವ ಕಥೆಯನ್ನು ನಿರ್ದೇಶಕ ರವಿ ಸಾರಂಗ ಕುತೂಲಕಾರಿಯಾಗಿ ಚಿತ್ರದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ನಿರ್ದೇಶಕ ರವಿ ಸಾರಂಗ ಮೊದಲ ನಿರ್ದೇಶನದ ಚಿತ್ರದಲ್ಲಿಯೇ ಅಪರಾಧ ಮತ್ತು ಥ್ರಿಲ್ಲರ್ ಕಥೆಯನ್ನು ಮನ ಮುಟ್ಟುವಂತೆ ತೆರೆಗೆ ತಂದಿದ್ದಾರೆ. ಕಲ್ಪನೆಗೂ ಮೀರಿದ ತಿರುವುಗಳ ಮೂಲಕ ಮತ್ತಷ್ಡು ಕುತೂಹಲ ಹೆಚ್ಚಿಸಿದೆ.ನಿರೂಪಣೆ ಮತ್ತು ಚಿತ್ರಕಥೆಯ ಕಡೆಗೆ ಗಮನ ಹರಿಸಿಸ್ದರೆ ಇನ್ನಷ್ಟು ಉತ್ತಮ ಸಿನಿಮಾ ನೀಡಬಹುದಿತ್ತು. ಹಾಗಂತ ಕೆಟ್ಟ ಚಿತ್ರವಂತೂ ಮಾಡಿಲ್ಲ..ಕುತೂಹಲ ಹುಟ್ಟಿಸುವ ಕಥೆ ಕೌತುಕ ಹೆಚ್ಚಿಸಿದೆ.
ಮೊದಲರ್ಧ ಹಾರರ್ ಅಂಶಗಳಿಂದ ತುಂಬಿದ್ದರೆ ದ್ವಿತೀಯಾರ್ಧಲ್ಲಿ ಕೊಳ್ಳಿ ದೆವ್ವದ ಕಥೆ ಹೇಳಲಾಗಿದೆ. ಜೊತೆಗೆ ಸರಣಿ ಕೊಲೆಗಳು ಚಿತ್ರದಲ್ಲಿ ಕುತೂಹಲಕ್ಕೆ ಕಾರಣವಾಗಿವೆ. ಆ ಕೊಲೆಗಳನ್ನು ಮಾಡಿದವರು ಯಾರು ಅದರ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ಕಥನ ಕುತೂಹಲಕಾರಿ ಸಂಗತಿ
ನಟ ರಾಜ್ ಬಿ ಶೆಟ್ಟಿ ಇಡೀ ಚಿತ್ರವನ್ನು ಆವರಿಕೊಂಡಿದ್ಸಾರೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಚಿತ್ರದ ಪ್ರತಿಯೊಂದು ದೃಶ್ಯದಲ್ಲಿಯೂ ಗಮನ ಸೆಳೆದಿದ್ದಾರೆ.
ಕಲಾವಿದರಾದಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಗೋಪಾಲ ದೇಶಪಾಂಡೆ, ಬಿ.ಸುರೇಶ್, ಜಹಂಗೀರ್ ಮತ್ತಿತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ಧಾರೆ. ಸಾಹಸ ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಕೆ ರವಿವರ್ಮಾ ಅವರ ಚೊಚ್ಚಲ ನಿರ್ಮಾಣದ ಚಿತ್ರ ಪ್ರೇಕ್ಷಕರ ಮನಮಟ್ಟಿದೆ.,
ಸಿದ್ದಯ್ಯ ಸ್ವಾಮಿ ಹಾಡಿನಲ್ಲಿ ಅರ್ಜುನ್ ಜನ್ಯ ಕಾಣಿಸಿಕೊಂಡಿದ್ದಾರೆ. ಹಾಡಿನ ಬಳಿಕ ಕುತೂಹಲ ಹೆಚ್ಚುತ್ತದೆ. ವಿಲಿಯಂ ಡೇವಿಡ್ ಕ್ಯಾಮರಾ,ಅರ್ಜುನ್ ಜನ್ಯ ಸಂಗೀತ ಗಮನ ಸೆಳೆದಿದೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

