ನಟ ವಿಜಯಕುಮಾರ್ ನಿರ್ದೇಶನದ ” ಭೀಮ”. ಚಿತ್ರ ಆಗಸ್ಟ್ 9 ರಂದು ತೆರೆಗೆ ಬರಲು ಸಜ್ಜು

ಸ್ಯಾಂಡಲ್‍ವುಡ್ ಸಲಗ ವಿಜಯಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ” ಭೀಮ” ಆಗಸ್ಟ್ 9 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಧೂಳ್ ಎಬ್ಬಿಸಲು ಸಜ್ಜಾಗಿದೆ.

ಸಲಗ ಚಿತ್ರದ ಬಳಿಕ ವಿಜಯ ಕುಮಾರ್ ನಟಿಸಿ, ನಿರ್ದೇಶಿಸಿರುವ ” ಭೀಮ” ಹೀಗಾಗಲೇ ರಾಪ್ ಶೈಲಿಯ ಹಾಡು ಸೇರಿದಂತೆ ನೈಜ ಘಟನೆಗಳ ಚಿತ್ರರೂಪಕ್ಕೆ ತರುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದೆ.
ಡೋಂಟ್ ವರಿ ಬೇಬಿ ಚಿನ್ನಮ್ಮ, ಬ್ಯಾಡ್ ಬ್ಯಾಯ್ಸ್ ,ಬೂಮ್ ಬೂಮ್ ಬೆಂಗಳೂರು, ಸೇರಿದಂತೆ ಚಿತ್ರದ ಪತ್ರಿಯೊಂದು ಹಾಡು ಟಪ್ಪಾನುಗುಚ್ಚಿ ಶೈಲಿಯ ಹಾಡು ಅಭಿಮಾನಿಗಳನ್ನು ಹುಚ್ಚೆದ್ದುಬಕುಣಿಯುವಂತೆ ಮಾಡಿದೆ. ಇದೇ ಖುಷಿಯಲ್ಲಿ ನಟ, ನಿರ್ದೇಶಕ ವಿಜಯ ಕುಮಾರ್ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ.
ಚರಣ್ ರಾಜ್ ಸಂಗೀತ, ಎಂ.ಸಿ ಬಿಜ್ಜು ರಾಪ್ ಹಾಡು, ಎಲ್ಲಾದಕ್ಕಿಂತ ಮಿಗಿಲಾಗಿ ವಿಜಯ ಕುಮಾರ ಅವರ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಮೋಡಿ ಮೋಡಿದ್ದು ಚಿತ್ರ ಬಿಡುಗಡೆಗೆ ಕನ್ನಡ ಚಿತ್ರರಸಿಕರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ.

ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು .ಈ ವೇಳೆ ಮಾತಿಗಿಳಿದ ನಟ, ನಿರ್ದೇಶಕ ವಿಜಯ ಕುಮಾರ್ , ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ , ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಈಗ ಚಿತ್ರ ಸೆನ್ಸಾರ್‍ನಿಂದ ಹೊರ ಬಂದಿದೆ, ನಾನು ಶಾಲಾ ದಿನಗಳಿಂದಲೂ ಬಿ ಪ್ಲಸ್ , ಸಿ ಪ್ಲಸ್ , ಪಡೆಯುತ್ತಿದೆ. ಈಗ ನನ್ನ ಸಿನಿಮಾ ಮೂಲಕ ಸೆನ್ಸರ್ನಿಂದ ಎ ಪ್ಲಸ್ ಸಿಕ್ಕಂತಾಗಿದೆ ಎನ್ನುತ್ತಾ ಎ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಸಮರ್ಥಿಸಿಕೊಂಡರು.
ಚಿತ್ರದ ಸಂಭಾಷಣೆ ವಿಚಾರವಾಗಿ ಒಂದಷ್ಟು ಕಟ್ಸ್ , ಮ್ಯೂಟ್ಸ್ ಮಾಡಲು ಹೇಳಿದ್ದಾರೆ, ಅದರಂತೆ ಎಲ್ಲವನ್ನ ಮಾಡುತ್ತೇವೆ. ವಿದ್ಯಾರ್ಥಿಗಳು , ಹರಿಹರಿಯದವರ ಬದುಕಿನ ದು ಸ್ಥಿತಿಯ ವಿಚಾರವು ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ. ಹಾಗೂ ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ತುಂಬಾ ಸಾತ್ ನೀಡಿದ್ದಾರೆ. ನನ್ನ ಎಲ್ಲಾ ವಿಚಾರಕ್ಕೂ ಸೈ ಎಂದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈಗಾಗಲೇ ಹಾಡುಗಳ ಮೂಲಕ ಸಕ್ಸಸ್ ತಂದು ಕೊಟ್ಟಿದ್ದಾರೆ.

ರೀ-ರೆಕಾರ್ಡಿಂಗ್ ಕೂಡ ಅದ್ಭುತವಾಗಿ ಮಾಡಿದ್ದಾರೆ. ಇನ್ನು ಛಾಯಾಗ್ರಹಕ ಶಿವಸೇನಾ, ಸಂಕಲನ ದೀಪು. ಎಸ್. ಕುಮಾರ್ , ಸಂಭಾಷಣೆ ಮಾಸ್ತಿ , ಫೈಟ್ಸ್ಗಳನ್ನ ವಿನೋದ್ , ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ , ರಾಜು ಸೇರಿದಂತೆ ಇಡೀ ನಮ್ಮ ಚಿತ್ರಕ್ಕೆ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಬಹಳಷ್ಟು ಶ್ರಮವಿಸಿ ಕೆಲಸ ಮಾಡಿದ್ದೇವೆ. ಬುಡಕಟ್ಟು ಜನಾಂಗದವರು ಸೇರಿದಂತೆ ಒಂದಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನೀವೆಲ್ಲರೂ ಆಗಸ್ಟ್ 9ಕ್ಕೆ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.

ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮಾತನಾಡಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಸೆನ್ಸರ್ ಹಂತದಲ್ಲಿ ಹೋದಾಗ ಕೊಂಚ ಭಯ ಇತ್ತು, ಆದರೆ ನಿರ್ದೇಶಕ ವಿಜಯ್ ಸರ್ ಸೆನ್ಸರ್ ಅಧಿಕಾರಿಗಳಿಗೆ ನಮ್ಮ ಸಿನಿಮಾದ ಕಂಟೆಂಟ್ ಬಗ್ಗೆ ಕನ್ವಿನ್ಸ್ ಮಾಡಿದ ರೀತಿ ಅದ್ಭುತ. ಈಗಾಗಲೇ ಸಿನಿಮಾದ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.
ನಿರ್ಮಾಪಕ ಜಗದೀಶ್ ಗೌಡ ಮಾತನಾಡಿ ಒಬ್ಬ ವಿತರಕ , ಈ ಚಿತ್ರವನ್ನು ನಿರ್ಮಿಸಿದಾಗ ಒಂದಷ್ಟು ವಿಚಾರ ನನಗೂ ತಿಳಿಯಿತು. ಬಹಳ ಶ್ರಮವಹಿಸಿ ಒಂದು ಉತ್ತಮ ಸಂದೇಶವಿರುವ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸದ್ಯ ಚಿತ್ರಮಂದಿರಗಳ ಪರಿಸ್ಥಿತಿ ನಮಗೂ ತಿಳಿದಿದೆ.

ಮುಚ್ಚು ಹೋಗುತ್ತಿರುವ 18 ಚಿತ್ರಮಂದಿರಗಳು ನಮ್ಮ ಭೀಮ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಲ್ಲಿ ನಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಮ್ಮ ಚಿತ್ರ ನೇರವಾಗಿ ರಿಲೀಸ್ ಆಗುತ್ತಿದ್ದು, ವಿದೇಶದಲ್ಲಿ ಕೂಡ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಏರಿಯ ಸೋಲ್ಡ್ ಔಟ್ ಆಗಿದ್ದು , ಬಿಕೆಟಿಯನ್ನು ನಾನೇ ಉಳಿಸಿಕೊಂಡಿದ್ದೇನೆ. ಸದ್ಯ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಚಿತ್ರದ ಮೂಲಕ ಒಂದಷ್ಟು ಚೈತನ್ಯ ಸಿಗುವಂತಾಗಲಿ, ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಬಂದು ನೋಡಿ ಎಂದು ಕೇಳಿಕೊಂಡರು.

ಚಿತ್ರದಲ್ಲಿ ಅಭಿನಯಿಸಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಈ ಭೀಮ ಚಿತ್ರದಲ್ಲಿ ಸಮಾಜಿ ಕಳಕಳಿ ಸಂದೇಶ ಒಳಗೊಂಡಿದ್ದು ಆಗಸ್ಟ್ 9ಕ್ಕೆ ಬಂದು ಚಿತ್ರ ತೆರೆಗೆ ಬರಲಿದೆ.

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ ಕಲಿಯಲು ಸಿಕ್ಕಿತು. 6 ಹಾಡು 2 ಬಿಟ್ ಇವೆ. ಸೆನ್ಸಾರ್ ಸಾಮಾಜಿಕ ಜವಾಬ್ದಾರಿ ಸಿನಿಮಾ, ಮನರಂಜನಾ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಆಲ್ಬಂ ನಲ್ಲಿ ಹಾಡಿರುವ ಎಲ್ಲರಿಗೂ ಧನ್ಯವಾದ ಎಂದರು.