"Eltu Mutta" completes filming and is ready for release

ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾದ “ಎಲ್ಟು ಮುತ್ತಾ” - CineNewsKannada.com

ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾದ “ಎಲ್ಟು ಮುತ್ತಾ”

ವಿಭಿನ್ನ ಕಥಾಹಂದರದ “ಎಲ್ಟು ಮುತ್ತಾ” ಚಿತ್ರ ಶೀರ್ಷಿಕೆಯಿಂದಲೇ ಚಿತ್ರರಂಗದಲ್ಲಿ ಬಾರಿ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬಿಡುಗಡೆ ಹಂತಕ್ಕೆ ಬಂದಿದೆ

ಈ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡ ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು. ಹಾಗೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಹೈ5 ಸ್ಟುಡಿಯೋಸ್ ಪ್ರಾರಂಭಿಸಿ ಮೊದಲು “ಎಲ್ಟು ಮುತ್ತಾ” ಚಿತ್ರ ಮಾಡಿದ್ದೇವೆ. ಈ ಚಿತ್ರವನ್ನು 50 ದಿನ ಕೊಡಗು ಹಾಗೂ 2 ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣ ಪೂರ್ಣಗೊಂಡಿದ್ದ ಬಿಡುಗಡೆ ಹಂತಕ್ಕೆ ಬಂದಿದೆ ಎಂದರು

ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಎಲ್ಟು ಮುತ್ತಾ ಎರಡು ಪಾತ್ರಗಳ ಸುತ್ತ ನಡೆಯುವ ಕಥೆ ಇದಾಗಿದ್ದು, ಟೆಕ್ನಿಷನ್ ಆಗಬೇಕು ಎಂದು ಬಂದವರು ಚಿತ್ರದಲ್ಲಿ ನಟಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ನಾಯಕ ಶೌರ್ಯ ಪ್ರತಾಪ್ ಮಾತನಾಡಿ, ನಮ್ಮದು ಹೊಸತಂಡ. ಜನ ದುಡ್ಡು ಕೊಟ್ಟು ನಮ್ಮ ಚಿತ್ರವನ್ನು ಏಕೆ ನೋಡಬೇಕು ಎಂದು ನಾವೇ ಪ್ರಶ್ನೆಗಳನ್ನು ಹಾಕಿಕೊಂಡಿದ್ದೇವೆ. ನಮ್ಮನ್ನು ನೋಡಿ ಜನ ಥಿಯೇಟರ್ ಗೆ ಬರುವುದು ಬೇಡ . ಚಿತ್ರದ ಕಂಟೆಂಟ್ ನೋಡಿ ಬರಲಿ. ಒಂದೊಳ್ಳೆ ತಂಡ ಸೇರಿ ಎಲ್ಟಾ ಮುತ್ತಾ ಚಿತ್ರ ಮಾಡಿದ್ದೇವೆ ಎಂದರು.

ಹೊಸಬರೇ ಸೇರಿಕೊಂಡು ಎಲ್ಟಾ ಮುತ್ತಾ ಸಿನಿಮಾವನ್ನು ಮಾಡಿದ್ದಾರೆ. ರಾ ಸೂರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಇ ಇವರ ಮೊದಲ ಪ್ರಯತ್ನ. ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚಿದ್ದು, ನಾಯಕಿಯಾಗಿ ಪ್ರಿಯಾಂಕಾ ಮಾಲನಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ಇತರರು ತಾರಾಬಳಗದಲ್ಲಿದ್ದಾರೆ.

ನೈಜ ಘಟನೆಯಾಧಾರಿತ `ಎಲ್ಟು ಮುತ್ತಾ’ ಸಿನಿಮಾಗೆ ಸತ್ಯ ಶ್ರೀನಿವಾಸನ್, ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ನಿರ್ಮಾಣ ಮಾಡಿದ್ದಾರೆ. ಎಲ್ಟೂ ಮುತ್ತಾ ಎರಡು ಪಾತ್ರಗಳ ಹೆಸರಾಗಿವೆ.

ಚಿತ್ರದಲ್ಲಿ ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ.ಯೇಸು ಸಂಕಲನ, ಜ್ಞಾತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin