ಕಿಚ್ಚ ಸುದೀಪ್ ಅಭಿನಯದ “ಬಿಲ್ಲಾ ರಂಗ ಭಾಷಾ” ಚಿತ್ರೀಕರಣ ಆರಂಭ
ಸೂಪರ್ ಸ್ಟಾರ್ ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಚಿತ್ರ ” ಬಿಲ್ಲಾ ರಂಗ ಬಾಷಾ” ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚ ಸುದೀಪ್ ಅವರು ನಿರ್ದೇಶಕ ಅನೂಪ್ ಭಂಡಾರಿ ಜೊತೆ ಕೆಲಸ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ.
ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ಧಾರೆ. ಇದು ಅವರ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ
ಈ ಕುರಿತು ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲಾ ರಂಗ ಭಾಷಾ ಚಿತ್ರದ ಚಿತರೀಕರಣ ಆರಂಭವಾಗಿರುವುದನ್ನು ಅಧಿಕೃತವಾಗಿ ತಿಳಿಸಿದ್ಧಾರೆ
ಭಾರತೀಯ ಚಿತ್ರರಂಗದ ಅತ್ಯಂತ ಬಹುಮುಖ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಕಿಚ್ಚ ಸುದೀಪ್ ಸತತ ಮೂರು ಬಾರಿ ಫಿಲ್ಮ್‍ಫೇರ್ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಕಳೆದ ವರ್ಷ “ಮ್ಯಾಕ್ಸ್” ಚಿತ್ರದ ಯಶಸ್ಸಿನ ಬಳಿಕ ಇದು ಅವರ ಬಹು ನಿರೀಕ್ಷಿತ ಚಿತ್ರವಾಗಿದೆ
ಹನು-ಮ್ಯಾನ್‍ನ ಸೂಪರ್-ಯಶಸ್ವಿ ನಿರ್ಮಾಪಕ ಪ್ರೈಮ್‍ಶೋ ಎಂಟರ್‍ಟೈನ್‍ಮೆಂಟ್ ಈ ಚಿತ್ರ ನಿರ್ಮಾಣ ಮಾಡಿತ್ತಿದೆ. ಬಿಲ್ಲಾ ರಂಗ ಭಾಷಾ ಚಿತ್ರ ಇಂದಿನಿಂದ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು,ಅದು ದೇಶಾದ್ಯಂತ ಟ್ರಂಡ್ ಮಾಡಿತ್ತು
ಅಧಿಕೃತ ಪೋಸ್ಟರ್‍ನಲ್ಲಿ ಬಹಿರಂಗಪಡಿಸಲಾದ ನಟನ ಹೊಸ ನೋಟ ಈಗಾಗಲೇ ಅಭಿಮಾನಿಗಳ ಉತ್ಸಾಹ ಹೆಚ್ಚು ಮಾಡಿದೆ. ಬಿಲ್ಲಾ ರಂಗ ಬಾಷಾ ದುಬಾರಿ ಹೆಚ್ಚಿನ ಬಜೆಟ್, ಬಹುಭಾಷಾ ಚಿತ್ರವಾಗಿದೆ.ಪೂರ್ಣ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ

