“ಕೋಟಿ” ಕಾಡುವ ಕಥನ : ಮದ್ಯಮವರ್ಗದ ಜನರ ಬದುಕಿನ ಭಾಗ
ಚಿತ್ರ; ಕೋಟಿ
ನಿರ್ದೇಶನ : ಪರಂ
ತಾರಾಗಣ: ಡಾಲಿ ಧನಂಜಯ, ಮೋಕ್ಷಾ ಕುಶಾಲ್, ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್,ಬಲ ರಾಜವಾಡಿ,, ಸರ್ದಾರ್ ಸತ್ಯ ಮತ್ತಿತರರು
ರೇಟಿಂಗ್: **** 4/5
ಮದ್ಯಮ ವರ್ಗದ ಪ್ರತಿಬಿಂಬ ಎಂದೇ ತೆರೆಯ ಮೇಲೆ ಬಿಂಬಿತವಾಗಿರುವ ಡಾಲಿ ಧನಂಜಯ ಮತ್ತೊಮ್ಮೆ “ಕೋಟಿ” ಮೂಲಕ ಕೋಟ್ಯಾಂತರ ಜನ ಸಾಮಾನ್ಯರ ಪ್ರತಿನಿಧಿಸುವ ವ್ಯಕ್ತಿ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಜೀವನದಲ್ಲಿ ಕಷ್ಟಪಟ್ಟು ದುಡಿದರೆ ಇಂದಲ್ಲಾ ನಾಳೆ ಕೋಟಿ ರೂಪಾಯಿ ದುಡಿಯಬಹುದು ಎನ್ನುವ ನಂಬಿಕೆ ಇಟ್ಟ ಕೋಟಿ, ಅದಕ್ಕಾಗಿ ಶ್ರಮಿಸಿತ್ತಿರುವ ಶ್ರಮಜೀವಿಯೂ ಹೌದು.
ಜೀವನದಲ್ಲಿ ಕಷ್ಟಪಟ್ಟು ಮೇಲೆ ಬರಬೇಕು ಎನ್ನುವ ಶಪಥ ಮಾಡಿದ ಕೋಟಿ. ವಿಚಿತ್ರ ಕಾಯಿಲೆಯಿಂದ ಬಳಲುವ ನವಮಿ, ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಅದನ್ನು ಮತ್ತಷ್ಡು ವಿಸ್ತರಿಕೊಳ್ಳುವ ಹಂಬಲ ಹೊಂದಿದ ದಿನೂ ಸಾವ್ಕಾರ್ ,ಮಗನಿಗಾಗಿ ಪ್ರಾಣಕೊಡುವ ಅಪ್ಪ ಹೀಗೆ ಹಲವು ಕಾಡುವ ,ಕನವರಿಸುವ ಕಥೆಯನ್ನು ಒಂದೆಡೆ ಸೇರಿಸಿ ಚಿತ್ರ ರೂಪ ಕೊಟ್ಟಿದ್ದಾರೆ ನಿರ್ದೇಶಕ ಪರಂ
ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಟಿಆರ್‍ಪಿ ಹಿಂದೆ ಬಿದ್ದಿದ್ದ ಪರಂ, ಕೋಟಿಯ ಕಾಡುವ ಕಥೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಸಿನಿಮಾ ನಿರ್ದೇಶನ ಮಾಡಿದ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ. ನೋವು, ಹಿಂಸೆ, ಹತಾಶೆ,ಮದ್ಯಮ ವರ್ಗದ ಬದುಕು ಬವಣೆ, ಸೇರಿದಂತೆ ಹಲವು ಅಂಶಗಳು ಚಿತ್ರದ ಪ್ರಧಾನ,ಅಣ್ಣ,ತಮ್ಮ,ತಂಗಿ ಅಮ್ಮ,ಕುಟುಂಬ ಹೀಗೆ ಹಲವು ಅಂಶಗಳು ಚಿತ್ರದಲ್ಲಿ ಗಮನ ಸೆಳೆಯ ಅಂಶಗಳು ಚಿತ್ರದಲ್ಲಿವೆ.
ಚಿತ್ರದ ಜೀವಾಳವೇ ಆಗಿರುವ ಕೋಟಿ, ಪಾತ್ರದಲ್ಲಿ ಧನಂಜಯ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ.ಪಾತ್ರ ಯಾವುದಾದರೂ ಏನು ನೀರು ಕುಡಿದಷ್ಟು ಸಲೀಲು ಎನ್ನುವುದನ್ನು ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ. ಚಿತ್ರದ ಕೆಲವೊಂದು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲು ತಾರಾ ನಟರು ಹಿಂಜರಿಯುವ ಕಾಲ ಘಟ್ಡದಲ್ಲಿ ಹಲವು ಬಾರಿ ಕಪಾಳ ನೀಡಿದ್ದಾರೆ.ಕೊನಗೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ.
ಚಿತ್ರದಲ್ಲಿ ರಮೇಶ್ ಇಂದಿರಾ ದಿನೂಸಾವ್ಕಾರ್ ಪಾತ್ರದಲ್ಲಿ ಮಿಂಚಿದ್ದಾರೆ.ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮತ್ತೊಂದು ಪ್ರಮುಖ ಪಾತ್ರ ಸಿಕ್ಕಿದೆ. ಮುಂದೆ ನಿರ್ದೇಶನಕ್ಕಿಂತ ಹೆಚ್ಚಾಗಿ ಖಳನಟನ ಪಾತ್ರಗಳೇ ಹುಡುಕಿಕೊಂಡು ಬಂದರೂ ಆಶ್ಚರ್ಯವಿಲ್ಲ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಖಾಯಂ ಖಳನಟ. ಸಿಕ್ಕಿದ್ದಾರೆ.
ಹಿರಿಯ ಕಲಾವಿದರಾದ ರಂಗಾಯಣ ರಘು ಪಾತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.ಅಮ್ಮನ ಪಾತ್ರವಾದರೂ ತಾರಾ ಸೈ ಎನಿಸಿಕೊಂಡಿದ್ದಾರೆ. ನಟಿ ಮೋಕ್ಷಾ ಕುಶಾಲ್ ,ಪೃಥ್ವಿ ಶಾಮನೂರು, ತನುಜಾ,ಸರ್ದಾರ್ ಸತ್ಯ ಬಾಲರಾಜ ವಾಡಿ,ಸೇರಿದಂತೆ ಹಲವು ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.
ವಾಸುಕಿ ವೈಭವ್ ಸಂಗೀತ, ಹಿನ್ನೆಲೆ ಸಂಗೀತ ಹಾಗು ಅರುಣ್ ಬ್ರಹ್ಮನ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಕೋಟಿಯ ಅವಧಿ 2 ಗಂಟೆ 49 ನಿಮಿಷ ಹೊಂದಿದೆ ತುಸು ಅವಧಿ ಹೆಚ್ಚಾಯಿತು ಅನ್ನಿಸದೆ ಇರದು. ಕೋಟಿಯ ಕಥೆಯನ್ನು ಇನ್ನಷ್ಟು ಚಿಕ್ಕದಾಗಿ ಚೊಕ್ಕವಾಗಿ ಹೇಳುವ ಪ್ರಯತ್ನ ಮಾಡಬಹುದಿತ್ತು.