“ಹೆಜ್ಜಾರು” ಚಿತ್ರದ ಸಕ್ಸಸ್: ಮೊದಲ ಪ್ರಯತ್ನದಲ್ಲಿ ನಿರ್ದೇಶಕ, ನಿರ್ಮಾಪಕ. ನಟ, ನಟಿ ಸೇರಿ ತಂಡಕ್ಕೆ ಗೆಲುವು
ಕಿರುತೆರೆಯ ಮಾಂತ್ರಿಕ, ಯಶಸ್ವಿ ಧಾರಾವಾಹಿಗಳ ನಿರ್ದೇಶಕ,ನಿರ್ಮಾಪಕ ಕೆ.ಎಸ್ ರಾಮ್ ಜೀ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ವಿಭಿನ್ನ ಕಥಾ ಹಂದರದ “ ಹೆಜ್ಜಾರು” ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. ಜೊತೆಗೆ ಪ್ರೇಕ್ಷಕರಿಂದ ಸಿಗುತ್ತಿರುವ ನಿರೀಕ್ಷೆಗೂ ಮೀರಿದ ಉತ್ತಮ ಸ್ಪಂದನೆಗ ರಾಮ್ ಜೀ ಮತ್ತವರ ತಂಡದ ಮುಖದಲ್ಲಿ ನಗುವಿನ ಮಂದಹಾಸ ಮನೆ ಮಾಡಿದೆ.
ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಹರ್ಷ ಪ್ರಿಯಾ ಆಕ್ಷನ್ ಕಟ್ ಹೇಳಿದ ಚಿತ್ರದಲ್ಲಿ ಯಶಸ್ಸು ಅವರಲ್ಲಿ ಮತ್ತಷ್ಟು ಉತ್ತಮ ಪ್ರಯತ್ನಗಳಿಗೆ ಹುರುದುಂಬಿಸಿದೆ. ಜೊತೆಗೆ ಯುವ ನಟ ಭಗತ್ ಆಳ್ವ, ನಟಿ ಶ್ವೇತಾ ಲಿಯೋ ನಿಲ್ಲಾ ಡಿಸೋಜಾ ಅವರ ಪಾದಾರ್ಪಣೆ ಚಿತ್ರ ಗೆಲುವು ಕಂಡಿರುವುದು ಪ್ರತಿಭಾವಂತ ಜೋಡಿ ಹಿರಿ ಹಿರಿ ಹಿಗ್ಗುವಂತೆ ಮಾಡಿದೆ.
ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟು ಸಲೀಸಾಗಿ ಮಾಡಬಲ್ಲೆ ಎನ್ನುವುದನ್ನು ತಮಗೆ ಸಿಕ್ಕ ಪಾತ್ರಗಳ ಮೂಲಕ ನಿರೂಪಿಸಿಕೊಂಡು ಬರುತ್ತಿರುವ ನಟ ನವೀನ್ ಕೃಷ್ಣ ಅವರಿಗೆ ನಟಿಸಿದ ಚಿತ್ರ ಮೊದಲ ಯಶಸ್ಸು ಗಳಿಸಿರುವುದು ಅವರಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿ ಅವರನ್ನು ಇಂತಹ ಪ್ರಯತ್ನಗಳಿಗೆ ಮತ್ತಷ್ಟು ಉತ್ಸಾಹ ತುಂಬಿದರೆ ಆಶ್ಚರ್ಯವಿಲ್ಲ.
ನಿರ್ದೇಶಕ ಹರ್ಷ ಪ್ರಿಯಾ ಮಾತನಾಡಿ, ವಾಹಿನಿಯಲ್ಲಿದ್ದವನ್ನು ಚಿತ್ರರಂಗಕ್ಕೆ ಕರೆತಂದು ನಿರ್ದೇಶನದ ಅವಕಾಶ ನೀಡಿದ ನಿರ್ಮಾಪಕ ಕೆ.ಎಸ್ ರಾಮ್ ಜಿ ಗೆ ಜೀವನ ಪೂರ ಅಬಾರಿ, ಹೆಜ್ಜಾರು ಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಂಡಿದೆ. ಮೊದಲ ಬಾರಿಗೆ ಮೊದಲ ಪ್ರಯತ್ನದಲ್ಲಿ ಗೆಲುವು ಕಂಡಿದ್ದೇನೆ. ಇದು ಖುಷಿಯ ಸಂಗತಿ. ಇದಕ್ಕೆ ಇಡೀ ತಂಡ ಕಾರಣ ಅವರನ್ನು ನೆನೆಯುವುದು ಮತ್ತು ಕೃತಜ್ಞತೆ ಸಲ್ಲಿಸುವುದು ನಮ್ಮ ಕೆಲಸ, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿಕೊಂಡರು.
ನಟ ಭರತ್ ಆಳ್ವ ಮಾತನಾಡಿ, ಹೆಜ್ಜಾರು ಚಿತ್ರದ ಯಶಸ್ಸು ತುಂಬಾ ಎಮೋಷನಲ್ ಸನ್ನಿವೇಶ. ಹಾಗಿದ್ದರೂ ಎಮೋಷನ್ ಆಗುವುದಿಲ್ಲ. ಎಮೋಷನ್ ಆಗಿ ಆಗಿ ಸಾಕಾಗಿದೆ. ಖುಷಿಯಲ್ಲಿ ಇರೋಣ ಅಂದುಕೊಂಡಿದ್ದೇನೆ. ಮಾದ್ಯಮದ ಮಂದಿಯ ಬೆಂಬಲ ಇಲ್ಲದೆ ಈ ಯಶಸ್ಸು ಸಾಧ್ಯವಿಲ್ಲ. ಎಲ್ಲಾ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಮೊದಲ ಸಿನಿಮಾ , ಮೊದಲ ಗೆಲುವು, ನನ್ನನ್ನು ಯಾಕೆ ನಾಯಕನನ್ನಾಗಿ ಮಾಡಿದ್ದಾರೆ ನಿರ್ಮಾಪಕ ರಾಮ್ ಜಿ ಮತ್ತು ನಿರ್ದೇಶಕ ಹರ್ಷಪ್ರಿಯಾ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ನಮ್ಮ ಬಾಂಡಿಂಗ್ ಹೀಗೆ ಇರಲಿ ಯಾರ ಕಣ್ಣು ಬೀಳದಿರಲಿ, ನನ್ನ ಮತ್ತು ಹರ್ಷಪ್ರಿಯಾ ಅವರ ಬಾಂಡಿಂಗ್ ನಿಂದ ನನ್ನನ್ನು ನಾಯಕನ್ನಾಗಿ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ ಗೆಲುವು ನೀಡಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ ನಾಯಕನ್ನಾಗಿ ಮಾಡಿದ್ದಾರೆ. ಬೆಂಬಲ ಇದ್ದರೆ ನನ್ನಂತಹ ಮದ್ಯಮ ವರ್ಗದ ಹುಡುಗ ನಾಯಕನಾರುವುದು ದೊಡ್ಡ ವಿಷಯ. ಹೆಜ್ಜಾರು ಕನ್ನಡದ ಅತ್ಯುತ್ತಮ ಚಿತ್ರ ಎಂದರು.
ನಟಿ ಶ್ವೇತಾ ಲಿಯೋನಿಲ್ಲಾ ಡಿಸೋಜಾ ಮಾತನಾಡಿ, ಚಿತ್ರ ನೋಡಿದ ಎಲ್ಲರೂ ಚಿತ್ರ ಮತ್ತು ಪಾತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನಟಿಯಾಗಿ ನನಗೆ ಹೆಮ್ಮೆಯ ಭಾವ ಮೂಡಿದೆ. ಅದಕ್ಕೆ ಕಾರಣರಾದ ನಿರ್ದೇಶಕ ಹರ್ಷಪ್ರಿಯ, ನಿರ್ಮಾಪಕ ರಾಮ್ ಜಿ ಸೇರಿ ಇಡೀ ತಂಡಕ್ಕೆ ಅಬಾರಿ .ಎಲ್ಲಾ ಚಿತ್ರಗಳ ನಡುವೆ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮನೆ ಮಂದಿ ಸಿನಿಮಾ ನೋಡಿ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ ಎಂದರು
ಪೊಲೀಸ್ ಪಾತ್ರದಲ್ಲಿಯೇ ಹೆಚ್ಚಾಗಿ ಗಮನ ಸೆಳೆದಿರುವ ಮುನಿ, ಚಿತ್ರದಲ್ಲಿ ನಟಿಸಿರುವ ವಿನೋದ್ ಭಾರತಿ ಸೇರಿದಂತೆ ಕಲಾವಿದರು, ತಂತ್ರಜ್ಞರು ಸೇರಿ ತಂಡದ ಪ್ರಮುಖರು ತಮ್ಮ ತಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಂಡರು