ಹೆಜ್ಜಾರು ಚಿತ್ರದ ಯಶಸ್ಸು: ನಟ ನವೀನ್ ಕೃಷ್ಣ ಮುಖದಲ್ಲಿ ಸಂತಸದ ಹೊನಲು

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ,ನಿರ್ದೇಶಕ ನವೀನ್ ಕೃಷ್ಣ ಅವರಿಗೆ “ಹೆಜ್ಜಾರು” ಚಿತ್ರದ ಮೂಲಕ ಗೆಲುವಿನ ಸಿಹಿ ಸಿಕ್ಕಿದೆ. ಇದು ಅವರಲ್ಲಿ ಮತ್ತಷ್ಟು ಈ ಮಾದರಿ ಚಿತ್ರಗಳಲ್ಲಿ ನಟಿಸಬೇಕು ಎನ್ನುವ ಉತ್ಸಾಹ ಹುಮ್ಮಸ್ಸು ಮೂಡಿಸಿದ್ದರೆ ಅತಿಶಯೋಕ್ತಿ ಎನಿಸಿರಲಾರದು.
ಸಿನಿಮಾ, ಸೀರಿಯಲ್ ನಟನೆ, ನಿರ್ದೇಶನ,ಬರವಣಿಗೆ ಯಾವುದೇ ವಿಭಾಗದಲ್ಲಿ ಕೆಲಸ ಸಿಕ್ಕರೂ ಅದಕ್ಕೆ ನ್ಯಾಯ ಒದಗಿಸುವ ಪ್ರತಿಭಾವಂತ. ಇಷ್ಟು ವರ್ಷ ನಟಿಸಿದ್ದರೂ ಯಶಸ್ಸು ತಮ್ಮ ಹೆಸರಿನ ಮುಂದೆ ಇಲ್ಲವಲ್ಲ ಎನ್ನುವ ಕೊರಗು ಅವರಲಿತ್ತು. ಅದಕ್ಕೆ ಹೆಜ್ಜಾರು ಚಿತ್ರದ ಯಶಸ್ಸಿನ ಮೂಲಕ ನವೀನ ಕೃಷ್ಣ ಚಿತ್ರ ಬದುಕಿನಲ್ಲಿ ಹೊಸ ಅಲೆ ಆರಂಭವಾಗಿದೆ.

“ಹೆಜ್ಜಾರು” ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಭಾಗಿಯಾಗಿದ್ದ ನಟ ನವೀನ್ ಕೃಷ್ಣ ಮಾತನಾಡಿ ಹಗ್ಗದ ಕೊನೆ, ಆಕ್ಟರ್, ಯೋಗರಾಜ ಇವೆಲ್ಲವೂ ಮನಸ್ಸಿಗೆ ತೃಪ್ತಿಕೊಟ್ಟ ಚಿತ್ರಗಳು, ಜೊತೆಗೆ ಪ್ರೋತ್ಸಾಹ ಮುಂದುವರಿದೆ. ಆದರೆ ಯಶಸ್ಸು ಅನ್ನುವುದು ನನ್ನ ಜೊತೆ ಇರಲಿಲ್ಲ. ಅದು ಹೆಜ್ಜಾರು ಚಿತ್ರದ ಮೂಲಕ ಸಿಕ್ಕಿದೆ. ಇಂತಹ ಚಿತ್ರ ಮಾಡಿದ್ದು ಕನಸು ಕಂಡ ಹರ್ಷ ಪ್ರಿಯ ಮತ್ತು ತಂಡಕ್ಕೆ ಅಬಾರಿ ಎಂದರು
ಎಲ್ಲದಕ್ಕಿಂತ ಮಿಗಿಲಾಗಿ ಹೆಜ್ಜಾರು ನಂತಹ ಸಿನಿಮಾಗಳನ್ನು ಜನರಿಗೆ ತಲುಪಿಸಲು ಹೊಸ ದಾರಿ ಕಂಡುಕೊಂಡಿದ್ದೇನೆ ಎನ್ನುವ ರಾಮ್ ಜಿ ಅವರಂತ ನಿರ್ಮಾಪಕರ ಧೈರ್ಯ ಬೆನ್ನಿಗಿದ್ದರೆ ನಿಜವಾದ ಪ್ರತಿಭಾವಂತರೂ ಕಂಡಿತಾವಾಗಿಯೂ ಬೆಳಿತಾರೆ. ರಾಮ್ ಜಿ ಅಂತವರು ಒಂದು ಸಾವಿರ ಮಂದಿ ಕನ್ನಡ ಚಿತ್ರರಂಗಕ್ಕೆ ಬರಬೇಕು. ಯಾಕೆಂದ್ರೆ. ಹೀಗಾಗಲೇ ಕನ್ನಡ ಚಿತ್ರ ರಂಗದ ಬಗ್ಗೆ ನೆಗಟೀವ್ ಆಗಿಯೇ ಮಾತುಗಳು ಕೇಳಿ ಬರುತ್ತಿವೆ. ಇಂತಹ ಕಾಲ ಘಟ್ಟದಲ್ಲಿ ಅದನ್ನೆಲ್ಲ ಹೊರತು ಪಡಿಸಿ ನಾವು ಗೆದ್ದಿದ್ದೇವೆ. ಗೆಲ್ಲುವ ಮಾರ್ಗ ನಮಗೆ ಗೊತ್ತಿದೆ. ಸಕಾರಾತ್ಮಕ ಮನೋಭಾವವನ್ನು ನಮ್ಮ ಚಿತ್ರಕಲ್ಲದೆ ಬೇರೆ ಚಿತ್ರಗಳಿಗೂ ತುಂಬುವ ಪ್ರಯತ್ನ ನಿಜಕ್ಕೈ ಶ್ಲಾಘನೀಯ ಮತ್ತು ಮಾದರಿ ಎಂದಿದ್ದಾರೆ.

ಸಹೃದಯ ಮದ್ಯೆ ಜೊತೆ ಇರುವುದು ಖುಷಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಯಾಕೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ಪ್ರಶ್ನೆ. ಇದಕ್ಕೆ ಬೇರೆ ಭಾಷೆ ಮೇಲೆ ದೂರುವುದಕ್ಕೆ ಬದಲಾಗಿ ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಮ್ ಜೀ ಅವರು ಹೊಸ ಪ್ರಯತ್ನ ಮಾಡಿದ್ದಾರೆ.ಇವರ ಜೊತೆಗೆ ನಿಜವಾದ ಪ್ರೀತಿ, ತಿಳುವಳಿಕೆ, ಚಾಕಚಕ್ಯತೆ ಇರುವ ಮಂದಿ ಜೊತೆ ಆಗಬೇಕಾಗಿದೆ. ಎಲ್ಲರೂ ಕೂಡಿದರೆ ಚಿತ್ರರಂದಲ್ಲಿ ಹೊಸ ದಾರಿ ಹಾಕಿದರೆ ಪ್ರೇಕ್ಷಕ ನಮ್ಮನ್ನು ಬಿಟ್ಟು ಹೋಗಿಲ್ಲ, ನಮ್ಮ ಪ್ರೇಕ್ಷಕರು ಸಣ್ಣ ಬ್ರೇಕ್ ತೆಗೆದುಕೊಂಡಿರಬೇಕು. ಇಂತಹ ಚಿತ್ರಗಳ ಮೂಲಕ ಮರಳಿ ಬರುತ್ತಾರೆ , ಇನ್ನಷ್ಟು ಒಳ್ಳೆಯ ಚಿತ್ರ ಬರಲಿದೆ. ಪ್ರೋತ್ಸಾಹ ಸಿಗಲಿದೆ. ಕನ್ನಡ ಚಿತ್ರರಂಗ ಹಿಂದಿನ ದಿನಗಳಲ್ಲಿ ಹೇಗೆ ಪ್ರಜ್ವಲಿಸಲಿದೆಯೋ ಹಾಗೆ ಆ ರೀತಿ ಪ್ರಜ್ವಲಿಸಿದೆ ಎನ್ನುವ ನಂಬಿಕೆ ಇದೆ. ಚಿತ್ರದಲ್ಲಿ ನಟನೆಗೆ ಅವಕಾಶ ಮಾಡಿಕೊಟ್ಟ ಇಡೀ ತಂಡಕ್ಕೆ ಅಬಾರಿ ಎಂದರು ನಟ ನವೀನ್ ಕೃಷ್ಣ,