ಹೊಸತನದ ಪ್ರೇಮಕಥೆಯ ಚಿತ್ರ : ಅಭಿರಾಮಚಂದ್ರ

ಚಿತ್ರ: ಅಭಿರಾಮಚಂದ್ರ
ನಿರ್ದೇಶನ: ನಾಗೇಂದ್ರ ಗಾಣಿಗ
ತಾರಾಗಣ: ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ, ಶಿವಾನಿ ರೈ, ನಾಗೇಂದ್ರ ಗಾಣಿಗ,ಪ್ರಕಾಶ್ ತುಮ್ಮಿನಾಡು ಮತ್ತಿತರರು
ರೇಟಿಂಗ್ : * 3/5
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – **/ ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /
ಬಾಲ್ಯದ ಪ್ರೀತಿ, ಪ್ರೇಮ ವಯಸ್ಸಿಗ ಬಂದ ನಂತರವೂ ಮುಂದುವರಿಸಿಕೊಂಡು ಹೋಗುವ ಕಥನ ಹೊಂದಿರುವ ಚಿತ್ರ `ಅಭಿ ರಾಮ ಚಂದ್ರ”.
ನಿರ್ದೇಶಕ ನಾಗೇಂದ್ರ ಗಾಣಿಗ, ಪ್ರೇಮಕಥೆಯನ್ನು ಹೊಸತನದ ಮೂಲಕ ತೆರೆಗೆ ತರುವ ಕೆಲಸ ಮಾಡಿದ್ದಾರೆ. ಮೂರು ಮಂದಿ ಹುಡುಗರು ಬೇರೆ ಬೇರೆ ಊರಿನಿಂದ ಬಂದು ಬದುಕು ಕಟ್ಟಿಕೊಳ್ಳಲು ನಡೆಸುವ ತಿರುಳೂ ಚಿತ್ರದ ಕುತೂಹಲಕಾರಿ ಸಂಗತಿಯೂ ಹೌದು.
ಅಭಿರಾಮಚಂದ್ರ, ಮೂರು ಹುಡುಗರ ಕಥ ವ್ಯಥೆ, ಅದರಲ್ಲಿ ಅಭಿ (ರಥ ಕಿರಣ) ರಂಗಭೂಮಿಯಲ್ಲಿ ತೊಡಗಿಸಿಕೊಂಡ, ರಾಮ ( ಸಿದ್ದು ಮೂಲಿಮನಿ) ಕ್ಯಾಬ್ ಚಾಲಕ. ಚಂದ್ರ (ನಾಟ್ಯ ರಂಗ) ಹೋಟೆಲ್ ಕ್ಯಾಶಿಯರ್,.
ಅಭಿಗೆ ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯ ಪ್ರೀತಿ ದೊಡ್ಡವನಾದರೂ ಆತನನ್ನು ಆಗಾಗ ಕಾಡುತ್ತದೆ. ರಾಮ ಮಂಡ್ಯದವ. ಅಲ್ಲಿ ಕಂಡ ಹುಡುಗಿ -ಶಿವಾನಿ ರೈ ಮೇಲೆ ಪ್ರೀತಿ ಹುಟ್ಟುತ್ತದೆ. ಇತ್ತ ಚಂದ್ರ ಪಬ್ ಜಿ ಆಡಿಕೊಂಡೇ ಹುಡುಗಿಯ ಜೊತೆ ಗೆಳೆತನ ಬೆಳೆಸಿಕೊಂಡವರು ಒಂದೇ ಕೊಠಡಿಯಲ್ಲಿದ್ದರೂ ಒಬ್ಬೊಬ್ಬರ ಆಲೋಚನೆ ಕೆಲಸ ಬೇರೆ ಬೇರೆ.
ಅಚಾನಕ್ ಆಗಿ ಮೂರು ಮಂದಿ ಗೆಳಯನ ಬ್ಯಾಚುಲರ್ ಪಾರ್ಟಿಗೆ ಹೋದವರಿಗೆ ಆಶ್ಚರ್ಯ .ಪ್ರೀತಿ ಮಾಡುತ್ತಿರುವುದು ಒಂದೇ ಹುಡುಗಿ ಎನ್ನುವ ಸಂಗತಿ ತಿಳಿದು ದಂಗಾಗುತ್ತಾರೆ. ಮೂರು ಹುಡುಗರು ಪ್ರೀತಿ ಮಾಡಿದ್ದು ಒಬ್ಬಳೆನಾ ಅಥವಾ ಬೇರೆ ಬೇರೆ ಹುಡುಗಿಯರಾ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ರಥಕಿರಣ ಮುಗ್ದತೆಯಿಂದಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ ಮತ್ತೊಬ್ಬ ನಟ ಸಿದ್ದು ಮೂಲಿಮನಿ ಮಂಡ್ಯ ಹುಡುಗನಾಗಿ ಅಲ್ಲಿಯ ಭಾಷೆಯನ್ನು ಸಮರ್ಥವಾಗಿ ಬಳಿಸಿದ್ದಾರೆ. ಇನ್ನೊಬ್ಬ ನಟ ನಾಟ್ಯರಂಗ ತಮ್ಮ ಮಾತಿನಿಂದಲೇ ನಗಿಸಿದ್ದಾರೆ. ನಾಯಕಿ ಶಿವಾನಿ ರೈ ಲವಲವಿಕೆ ನಟನೆ ಮಾಡಿದ್ದಾರೆ. ನಿರ್ದೇಶಕ ನಾಗೇಂದ್ರ ಗಾಣಿಗ ನಟನಾಗಿಯೂ ಸೈ ಎನ್ನುವುದನ್ನು ತೋರಿಸಿದ್ದಾರೆ.