ಮೂಡನಂಬಿಕೆಯ ಸುತ್ತಾ ಗಮನ ಸೆಳೆದ ಚಿತ್ರ “ಆಡೇ ನಮ್ ಗಾಡ್”
ಚಿತ್ರ: ಆಡೇ ನಮ್ ಗಾಡ್
ನಿರ್ದೇಶನ; ಪಿ.ಎಚ್ ವಿಶ್ವನಾಥ್,
ತಾರಾಗಣ : ನಟರಾಜ್ ಭಟ್, ಮಂಜುನಾಥ್ ಜಂಬೆ,ಅನೂಪ್ ಶೂನ್ಯ, ಅಜಿತ್ ಬೊಪ್ಪನಹಳ್ಳಿ, ಬಿ.ಸುರೇಶ್, ಸಾರಿಕಾ ರಾವ್ ಮತ್ತಿತರರು
ರೇಟಿಂಗ್ : * 3/5
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – **/ ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /
ನಂಬಿಕೆ ಅಥವಾ ಮೂಡನಂಭಿಕೆ ಅವರವರ ಅಭಿರುಚಿಗೆ ಬಿಟ್ಟದ್ದು.ಅದರಲ್ಲಿಯೂ ಮೂಡನಂಬಿಕೆ ಹೆಚ್ಚಾದರೆ ಏನೆಲ್ಲಾ ಅನಾಹುತಗಳಾಗಲಿವೆ ಎನ್ನುವುದನ್ನು “ ಆಡೇ ನಮ್ ಗಾಡ್” ಚಿತ್ರದ ಮೂಲಕ ಹಿರಿಯ ನಿರ್ದೇಶಕ ಪಿ.ಎಚ್ ವಿಶ್ವನಾಥ್ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
ನಾಲ್ಕು ಮಂದಿ ನಿರುದ್ಯೋಗಿ ಯುವಕರು ಅಚಾನಕ್ ಆಗಿ ಸಿಕ್ಕ ಆಡು –ಮೇಕೆಯನ್ನೈ ದೇವರು ಎಂದು ಜನರಲ್ಲಿ ನಂಬಿಸಿ ಯಾಮಾರಿಸುವ ವಿಷಯವೇ ಚಿತ್ರದ ಪ್ರದಾನ ತಿರುಳು.
ತಾವು ಮಾಡುವ ತಪ್ಪು, ವಂಚನೆಯನ್ನು ಸರಿ ಮಾಡಿಕೊಳ್ಳು ಹುಡುಗರು ಪರಡಾಡುವ ರೀತಿ, ಅದರಿಂದ ಎದುರಾಗುವ ಸಮಸ್ಯೆಯಿಂದ ಹೊರಬರಲು ಪಡುವ ಪಾಟು, ಪಡಿಪಾಟಲು, ಜನರಿಗೆ ಯಾವಾರಿಸಿ ತಮ್ಮದೇ ಪುಟ್ಟ ಸಾಮ್ರಾಜ್ಯ ಕಟ್ಟಿಕೊಂಡ ಹುಡುಗರಿಗೆ ಅದನ್ನು ಮತ್ಯಾರೋ ಕಿತ್ತುಕೊಳ್ಳುವುದು ಸೇರಿದಂತೆ ಹಲವು ವಿಷಯಗಳು ಚಿತ್ರದಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.
ಡಾಮು- ನಟರಾಜ್ ಭಟ್, ಶಿವಲಿಂಗು – ಮಂಜುನಾಥ್ ಜಂಬೆ, ತಿಪ್ಪೇಶಿ ಹೋಟೆಲ್ ನಡೆಸುವಾತ, ತುಕರಾಮ್ ಸೋಸಿಯಲ್ ಮೀಡಿಯಾದಲ್ಲಿ ಬ್ಯುಸಿ. ಒಬ್ಬಬ್ಬರದು ಒಂದೊಂದು ದಿಕ್ಕು, ನಿಲುವು, ಆದರ್ಶ, ಯಾಮಾರಿಸುವ ಕಲೆ. ಇಂತಹ ವಿಭಿನ್ನ ವ್ಯಕ್ವಿತ್ವದ ಹುಡುಗರ ಸುತ್ತ ನಡೆಯುವ ಕಥೆಯೇ ಆಡೇ ನಮ್ ಗಾಡ್.
ಮೇಕೆಯನ್ನು ದೇವರು ಎನ್ನುವ ರೀತಿ ಬಿಂಬಿಸಿ ಅದಕ್ಕೊಂದು ದೇವಾಲಯ ಕಟ್ಟಿಸಿ ಅದರಿಂದ ದುಡ್ಡು ಮಾಡುವ ಹುಡುಗರು ಅದರಿಂದಲೇ ಸಮಸ್ಯಗೆ ಸಿಲುಕು ತಾವೇ ಕಟ್ಟಿದ ದೇವಸ್ತಾನ ಮತ್ತು ಸಾಮ್ರಾಜ್ಯದಿಂದ ಹೊರಬರುವಂತಾಗುತ್ತದೆ. ಇಷ್ಟಕ್ಕೂ ಆಗಿದ್ದೇನು ಎನ್ನುವುದು ಚಿತ್ರದ ಕಥನ ಕುತೂಹಲ
ನಾಲ್ಕು ಹುಡುಗರ ನಡುವ ವಾಸ್ತು ಜ್ಯೋತಿಷಿ ಬಿ.ಸುರೇಶ್, ಮತ್ತು ಮಾತೆ ವೇಷದಾರಿಯಾಗಿ ಬಂದು ಸಾರಿಕಾ ರಾವ್ ಈ ಹುಡುಗರ ವಿಷಯದಲ್ಲಿ ಏನೆಲ್ಲಾ ಆಟ ಆಡ್ತಾರೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ’
ಪ್ರಾಣಿಗಳ ಸಿನಿಮಾಗಳು ಅನೇಕ ಚಿತ್ರಗಳು ಬಂದಿವೆ. ಅದರ ಸಾಲಿಗೆ ಮೇಕೆಯನ್ನು ದೇವರೆಂದು ಪೂಜಿಸಿ ದುಡ್ಡು ಮಾಡುವ ಚಿತ್ರ. ಆಡು ಗಾಡಾಗಿದ್ದ ಆಡು ಬಂದಾಗ ನಡೆಯುವ ಘಟನೆಯ ಕುತೂಹಲಕಾರಿಯಾಗಿ ತೆರೆಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪಿ.ಎಚ್ ವಿಶ್ವನಾಥ್. ಆಡನ್ನು ಬಳಸಿಕೊಂಡು ಚಿತ್ರ ಮಾಡಬಹುದು ಎನ್ನುವುದನ್ನು ನಿರೂಪಸಿದ್ಧಾರೆ
ಹಿರಿಯ ಕಲಾವಿದ ಬಿ,ಸುರೇಶ್ , ಯುವ ನಟರಾದ ನÀಟರಾಜ್ ಭಟ್, ಮಂಜುನಾಥ್ ಜಂಬೆ, ಸಾರಿಕಾ ಸೇರಿದಂತೆ ಎಲ್ಲರೂ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ