Na Ninna Bidalare Film Review: ದೆವ್ವದ ಕಾಟದ ರೋಚಕ ಕಹಾನಿಯ ಚಿತ್ರ ” ನಾ ನಿನ್ನ ಬಿಡಲಾರೆ’
ಚಿತ್ರ : ನಾ ನಿನ್ನ ಬಿಡಲಾರೆ
ನಿರ್ದೇಶಕ : ನವೀನ್.ಜಿ. ಎಸ್
ತಾರಾಗಣ: ಅಂಬಲಿ ಭಾರತಿ, ಪಂಚಿ, ಕೆ.ಎಸ್. ಶ್ರೀಧರ್, ಶ್ರೀನಿವಾಸ್ ಪ್ರಭು, ಹರಿಣಿ ಶ್ರೀಕಾಂತ್, ಸೇರುಂಡೆ ರಘು, ಮಹಾಂತೇಶ್ ಮತ್ತಿತರರು
ರೇಟಿಂಗ್ : * * * 3.5 / 5
ಕನ್ನಡ ಚಿತ್ರರಂಗದಲ್ಲಿ ಆಗಾಗ ಹೊಸ ಪ್ರಯತ್ನಗಳು, ಹೊಸತನದ ಕಥೆಗಳು, ಹೊಸ ಪ್ರತಿಭೆಗಳು ತಾವು ಮಾಡಿದ ಕೆಲಸಗಳಲ್ಲಿ ಸದ್ದಿಲ್ಲದೆ ಮೋಡಿ ಮಾಡಿ ಬಿಡುತ್ತಾರೆ. ಆಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ” ನಾ ನಿನ್ನ ಬಿಡಲಾರೆ’.
1979ರಲ್ಲಿ ತೆರೆಗೆ ಬಂದು ಯಶಸ್ವಿಯಾಗಿದ್ದ ಅನಂತ್ ನಾಗ್ – ಲಕ್ಣ್ಮಿ ಜೋಡಿಯ ಚಿತ್ರದ ಶೀರ್ಷಿಕೆಯನ್ನಿಟ್ಟುಕೊಂಡು ನವೀನ್ ಜಿ.ಎಸ್ ಆತ್ಮದ ಚಲನವನಗಳ ಮಾಹಿತಿ ಸಂಗ್ರಮಾಡುವ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಸಸ್ಪೆನ್ಸ್, ಹಾರರ್ ,ಥ್ರಿಲ್ಲರ್, ಮರ್ಡರ್ ಮಿಸ್ತ್ರಿ ಕಥಾನಕ ಪ್ರೇಕ್ಷಕನನ್ನು ಸೀಟಿನ ತುದಿಗಾಲ ಮೇಲೆ ನಿಲ್ಲಿಸಿದೆ. ಜೊತೆ ಜೊತೆಗೆ ಪ್ರೀತಿ, ಸ್ನೇಹ,ಕಾಯಿಲೆ, ಸೇಡು, ಅನುಕಂಪದ ಸುತ್ತ ಕುತೂಹಲವಾಗಿ ರೋಚಕ ಕಹಾನಿ, ನಾಯಕಿಯ ಆಕ್ಷನ್ ಸನ್ನಿವೇಶ ಪೆÇೀಣಿಸಿರುವ ಚಿತ್ರ ಇದು.
ಮಡಿಕೇರಿಯ ಸಮೀಪ ದಟ್ಟ ಕಾಡಿನ ನಡುವೆ ಎಸ್ಟೇಟ್. ಆತ್ಮದ ಚಲನವಲನಗಳ ತಿಳಿದುಕೊಳ್ಳುವ ಕಥೆ ಇದು. ಇವೆಂಟ್ ಮ್ಯಾನೇಜೆಂಟ್ ನಡೆಸುವ ರಿಷಿ (ಪಚ್ಚಿ)ಗೆ ತಾನು ಒಪ್ಪಿಕೊಂಡ ಕೆಲಸ ಮುಗಿಸಿ ಮನೆಗೆ ತೆರಳುವಾಗ ಸಾವು ಬದುಕಿನ ನಡುವೆ ಸಿಕ್ಕಿ ಒದ್ದಾಡುವ ಅಂಜಲಿ (ಅಂಬಾಲಿ ಭಾರತಿ)ಗೆ ಚಿಕಿತ್ಸೆ ಕೊಡಿಸಿ ಕಾಪಾಡುತ್ತಾನೆ. ಅಂಜಲಿ ಹಿನ್ನೆಲೆಯಲ್ಲಿ ತಿಳಿದುಕೊಳ್ಳಲು ಮಂದಾದಾಗ ಅಗೋಚರ ಶಕ್ತಿಯ ರೋಚಕ ಕಹಾನಿ ಬಿಚ್ಚಿಕೊಳ್ಳುತ್ತೆ.
ಚಿಕ್ಕ ಹುಡುಗಿ, ದೆವ್ವ ಹೀಗೆ ಸತ್ಯದ ಹುಡುಕಾಟದಲ್ಲಿ ಹಲವು ತಿರುವುಗಳು.ತಂದೆ, ತಾಯಿ, ಮುದ್ದಾದ ಮಗಳೊಂದಿಗೆ ಎಸ್ಟೇಟ್ ನಲ್ಲಿ ವಾಸ. ಈ ನಡುವೆ ಅಂಜಲಿ ಮೇಲೆ ಆತ್ಮದ ಕಣ್ಣು. ಬಾಲ್ಯದ ಗೆಳೆಯ ಪ್ರವೀಣ್‍ಗೆ ಮನಸಾಗುತ್ತದೆ.ಆತನೋ ಮೊದಲೇ ವಿಭಿನ್ನ ಕಾಯಿಲೆಯಿಂದ ಬಳಲುತ್ತಿರವ ವ್ಯಕ್ತಿ. ಮಾತು ಬಾರದ ಹುಡುಗಿಯಿಂದ ಆಗುವ ಅನಾಹುತಕ್ಕೆ ಪ್ರವೀಣ್‍ನನ್ನು ಅಂಜಲಿ ಅಪ್ಪ ಜೀವಂತವಾಗಿ ಸುಟ್ಟು ಹಾಕಿ ಬಿಡುತ್ತಾನೆ. ಆ ನಂತರದ ಘಟನೆಳು ಚಿತ್ರದ ಕೌತುಕ ಹೆಚ್ಚಳ ಮಾಡಿದೆ .ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಾ ನಿನ್ನ ಬಿಡಲಾರೆ ಚಿತ್ರದ ಮೂಲಕ ನಾಯಕಿ ಅಂಬಾಲಿ ಭಾರತಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಹೊಸ ಪ್ರತಿಭೆ. ಭವಿಷ್ಯದಲ್ಲಿ ಉತ್ತಮ ನಟಿಯಾಗುವ ಎಲ್ಲಾ ಲಕ್ಷಣಗಳೂ ಇವೆ. ಅದಕ್ಕೆ ಪೂರಕವಾಗಿ ಕಥೆಗಳು ಸಿಗಬೇಕಾಗಿದೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಭರ್ಜರಿ ಆಕ್ಣನ್ ಸನ್ನಿವೇಶಗಳಲ್ಲಿಯೂ ಕೂಡ ಗಮನ ಸೆಳೆದಿದ್ದಾರೆ.
ನಿರ್ದೇಶಕ ನವೀನ್ ಉತ್ತಮ ಕಂಟೆಂಟ್ ಇರುವ ಕಥೆ ಆಯ್ಕೆ ಮಾಡಿಕೊಂಡು ಹೊಸ ರೀತಿಯ ಸಿನಿಮಾವನ್ನು ಜನರ ಮುಂದಿಡುವಲ್ಲಿ ಸಫಲರಾಗಿದ್ದಾರೆ. ಕುತೂಹಲಕಾರಿಯಾದ ಕಥೆಯ ಚಿತ್ತ ಜನರಿಗೆ ಇಷ್ಟವಾಗಲಿದೆ.ಮೊದಲರ್ದಕ್ಕಿಂತ ದ್ವಿತೀಯಾರ್ಧದಲ್ಲಿ ಚಿತ್ರ ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಚಿತ್ರಕಥೆ,ನಿರೂಪಣೆಯ ಮೇಲೆ ಇನ್ನಷ್ಟು ಹಿಡಿತ ಸಾಧಿಸಿದ್ದರೆ ಅದ್ಬುತ ಸಿನಿಮಾ ನೀಡಬಹುದಿತ್ತು. ಹಾಗಂತ ಚಿತ್ರ ಕಳಪೆಯಾಗಿಯೇನು ಇಲ್ಲ. ಕುತೂಹಲ ತುಂಬಿದ ಕೌತುಕವನ್ನು ತನ್ಮೊಡಲಲ್ಲಿಟ್ಟಿಕೊಂಡಿರುವ ವಿಭಿನ್ನ ಚಿತ್ರ ಎಂದರೆ ತಪ್ಪಾಗಲಾರದು
ಕಲಾವಿದರಾದ ಪಂಚಿ, ಕೆ. ಎಸ್. ಶ್ರೀಧರ್, ಶ್ರೀನಿವಾಸ್ ಪ್ರಭು, ಹರಿಣಿ ಶ್ರೀಕಾಂತ್, ಸೀರುಂಡೆ ರಘು, ಮಹಾಂತೇಶ್ ಸೇರಿದಂತೆ ಹಲವು ಕಲಾವಿದರು ತಮಗೆ ಸಿಕ್ಕ ಪಾತ್ರಗಳಿವೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ನಾ ನಿನ್ನ ಬಿಡಲಾರೆ ಪ್ರೇಕ್ಷಕರಿಗೆ ಇಷ್ಟವಾಗಬಹುದಾದ ಚಿತ್ರ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****