Review: "The Left Hand Caused the Accident: An intriguing film that will keep you watching until the end"

Review: “ಎಡಗೈಯೇ ಅಪಘಾತಕ್ಕೆ ಕಾರಣ: ಕುತೂಹಲ ಭರಿತ, ಕೊನೆ ತನಕ ನೋಡಿಸಿಕೊಳ್ಳುವ ಚಿತ್ರ - CineNewsKannada.com

Review:  “ಎಡಗೈಯೇ ಅಪಘಾತಕ್ಕೆ ಕಾರಣ: ಕುತೂಹಲ ಭರಿತ, ಕೊನೆ ತನಕ ನೋಡಿಸಿಕೊಳ್ಳುವ ಚಿತ್ರ

ಚಿತ್ರ: ಅಪಘಾತಕ್ಕೆ ಎಡಗೈ ಕಾರಣ
ನಿರ್ದೇಶನ: ಸಮರ್ಥ ಎಂ ಕಡಕೋಳ
ತಾರಾಗಣ: ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ರಾಧಿಕಾ ನಾರಾಯಣ್, ನಿರೂಪ್ ಭಂಡರಿ, ಕೃಷ್ಣ ಹೆಬ್ಬಾಳೆ ಮತ್ತಿತರರು
ರೇಟಿಂಗ್ : *** 3.5/5

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನವಾದ ಕಥಾಹಂದರದ ಚಿತ್ರಗಳು ತೆರೆಗೆ ಬರುತ್ತಿವೆ, ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರ. ಹೊಸತನದ ಕಂಟೆಂಟು ವಿಷಯದ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಮಾಡಿದೆ

ಆರಂಭದಿಂದ ಕೊನೆತನಕ ಕುತೂಹಲ ಕಾಪಾಡಿಕೊಂಡು ಬಂದಿರುವ ಚಿತ್ರ, ಮೊದಲರ್ದಕ್ಕಿಂತ ದ್ವೀತಾರ್ಧದಲ್ಲಿ ಗಮನ ಸೆಳೆದಿದೆ, ಪ್ರೇಕ್ಷಕರು ಊಹೆಯೂ ಮಾಡದ ರೀತಿ ಕ್ಲೈಮ್ಯಾಕ್ಸ್ ಮೂಡಿ ಬಂದಿದೆ. ಈ ನಿಟ್ಟಿನಲ್ಲಿ ನಿರ್ದೇಶಲ ಸಮರ್ಥ ಕಡಕೋಳ ತಮ್ಮ ಕೆಲಸವನ್ನು ಸಮರ್ಥವಾಗಿ ನಿಬಾಯಿಸಿ ತಾವೊಬ್ಬ ಭರವಸೆಯ ನಿರ್ದೇಶಕನಾಗಬಲ್ಲೇ ಎನ್ನುವುದನ್ನು ನಿರೂಪಿಸಿದ್ದಾರೆ.

ಜೊತೆಗೆ ಎಡಗೈಯೇ ಅಪಘಾತಕ್ಕೆ ಕಾರಣ ಎನ್ನುವ ವಿಷಯದ ಮೂಲಕ ಚಿತ್ರದುದ್ದಕ್ಕೂ ಕುತೂಹಲ ಕಾಪಾಡಿಕೊಂಡು ಬರಲಾಗಿದೆ, ನಿಜಕ್ಕೂ ಎಡಗೈಯೇ ಅಪಘಾತಕ್ಕೆ ಕಾರಣವಾ ಅಥವಾ ಇನ್ನೂ ಬೇರೆ ಏನಾದರೂ ಸಂಗತಿ ಇದೇಯೇ ಎನ್ನುವ ಸಂಗತಿ ತಿಳಿಸಯಬೇಕಾದರೆ ಚಿತ್ರವನ್ನು ನೋಡಬೇಕು.

ಎಡಗೈ ಬಳಸುವ ಮಂದಿಯ ಕಷ್ಟ, ಸಂಕಷ್ಠ ಪರಿಪಾಟಲುಗಳನ್ನು ಚಿತ್ರದ ಮೂಲಕ ತೋರಿಸುವ ಕೆಲಸ ಮಾಡಿದ್ದಾರೆ. ದೇಶ ಮತ್ತು ವಿಶ್ವದಲ್ಲಿ ಎಡಗೈ ಬಳಸುವ ಮಂದಿ ಮತ್ತು ಅವರ ಬೇಡಿಕೆ ಈಡೇರಿಸುವ ಕಡೆಗೆ ಗಮನ ಹರಸುವ ಸಂಗತಿಗಳನ್ನು ಚಿತ್ರದ ಮೂಲಕ ಅನಾವರಣ ಮಾಡಿದ್ದಾರೆ

ಲೋಹಿತ್- ದಿಗಂತ್ ಎಡಗೈ ಬಳಸುವಾತ, ಆತನ ಸ್ನೇಹಿತೆ ಪೂಜಾ- ನಿಧಿ ಸುಬ್ಬಯ್ಯ ಪ್ಲಾಟ್‍ಗೆ ಎಲ್ಲರ ಕಣ್ಣ ತಪ್ಪಿಸಿ ಹೋಗುತ್ತಾನೆ, ಇನ್ನೂ ಎಲ್ಲವೂ ಸಲೀಲು ಎನ್ನುವಾಗಲೇ ಪೂಜಾ ಮೇಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪುತ್ತಾಳೆ, ಇದನ್ನು ಪಕ್ಕದ ಪ್ಲಾಟ್‍ನ ರಾಧಿಕ _ ಧನು ಹರ್ಷ ನೋಡಿ ಬಿಡ್ತಾಳೆ. ಇದರಿಂದ ಮತ್ತಷ್ಟು ಹೆದರಿಕೊಂಡ ಲೋಹಿತ್ ಆಕೆಯ ಫ್ಲಾಟ್‍ಗೆ ಹೋಗ್ತಾನೆ.

ಆ ಫ್ಲಾಟ್‍ನಲ್ಲೀ ಈಗಾಗಲೇ ಒಂದು ಕೊಲೆಯಾಗಿರುತ್ತದೆ, ಜೊತೆಗೆ ಮತ್ತೊಂದು ಕೊಲೆ, ಕೊಲೆಯ ಬಗ್ಗೆ ತನಿಖೆ ನಡೆಸಲು ಬಂದ ಪೊಲೀಸ್ ಅಧಿಕಾರಿಗಳೂ ಸಾವನ್ನಪ್ಪುತ್ತಾನೆ, ಈ ನಡುವೆ ಮತ್ತೊಂದು ಸಾವು, ಸಾವಿನ ಸುತ್ತ ಸಾಗುವ ಕಥೆ. ಇದು. ಕುತೂಹಲ ಭರತ ಕಥೆಯಲ್ಲಿ ಯಾರು ಯಾರನ್ನು ಸಾಯಿಸಿದರು, ಅದಕ್ಕೆ ಕಾರಣ ಏನು ಎನ್ನುವುದು ಕುತೂಹಲದ ಸಂಗತಿ

ನಟ ದಿಗಂತ್, ಇದುವರೆಗೆ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ನಟಿ ನಿಧಿ ಸುಬ್ಬಯ್ಯ, ಧನು ಹರ್ಷ, ಕೃಷ್ಣ ಹೆಬ್ಬಾಳೆ ಪಾತ್ರಗಳು ಗಮನ ಸೆಳೆದಿದೆ, ಈ ನಡುವೆ ನಿರೂಪ್ ಭಂಡಾರಿ, ರಾಧಿಕಾ ಪಾತ್ರಗಳ ಕುತೂಹಲ ಮೂಡಿಸಿವೆ.ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin