ಆಗಸ್ಟ್ 28 ರಿಂದ ಕಾವೇರಿ ಕನ್ನಡ ಮೀಡಿಯಂ ಆರಂಭ: ಮರಳಿ ಬಂದ ಹಿರಿಯ ನಟಿ ಮಹಾಲಕ್ಷ್ಮಿ
ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಧಾರಾವಾಹಿಗಳು ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಮೂಡಿಬರುತ್ತಿವೆ. ಈ ಮೂಲಕ ಮನೆಯಲ್ಲಿಯೇ ಕುಳಿತು ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಮೇಲಿಂದ ಮೇಲೆ ಸಿಗುತ್ತಿದೆ. ಇದೀಗ ಅಂತಹುದೇ ದೃಶ್ಯ ವೈಭವದ ಜೊತೆಗೆ ಕನ್ನಡದ ಸೊಗಡು,ಅಸ್ಮಿತೆಯನ್ನು ಬಿಂಬಿಸುವ ಧಾರಾವಾಹಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಅದುವೇ “ ಕಾವೇರಿ ಕನ್ನಡ ಮೀಡಿಯಂ”. ಫ್ಯಾಮಿಲಿ ಡ್ರಾಮಗಳೇ ಹೆಚ್ಚಾಗಿರುವ ಧಾರಾವಾಹಿ ಜಗತ್ತಿನಲ್ಲಿ ಹೊಸ ಬಗೆಯ ನಾಡಿನ ಜನತೆಗೆ ಹತ್ತಿರವಾಗುವ. ಕನ್ನಡ ಮೀಡಿಯಂ ಎಂದರೆ ಅಸಡ್ಡೆ ಬೇಡ. ಕನ್ನಡ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನ-ಮಾನ ಪಡೆಯಬಹುದು ಎನ್ನುವುದನ್ನು ಹೇಳಲು ನಿರ್ದೇಶಕ, ನಿರ್ಮಾಪಕರೂ ಆಗಿರುವ ಪ್ರೀತಮ್ ಮಂದಾಗಿದ್ದಾರೆ.
ಕಾವೇರಿ ಕನ್ನಡ ಮೀಡಿಯಂ, ಧಾರಾವಾಹಿ ಇದೇ ತಿಂಗಳ 28 ರಂದು ಸ್ಟಾರ್ ಸುವರ್ಣದಲ್ಲಿ ಸಂಜೆ 7.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಮೂಲಕ ಕನ್ನಡದ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಲು “ಕಾವೇರಿ ಕನ್ನಡ ಮೀಡಿಯಂ “ ಧಾರಾವಾಹಿ ತಂಡ ಮತ್ತು ನಿರ್ದೇಶಕ, ನಿರ್ಮಾಪಕ ಪ್ರೀತಮ್ ಸಜ್ಜಾಗಿದ್ದಾರೆ.
ಧಾರಾವಾಹಿಯ ಸದ್ಯದಲ್ಲಿಯೇ ಆರಂಭವಾಲಿರುವ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡ ನಿರ್ದೇಶಕ, ನಿರ್ಮಾಪಕ ಪ್ರೀತಮ್, ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎನ್ನುವ ಮಾತ್ರಕ್ಕೆ ಇಂಗ್ಲೀಷ್ ಭಾಷೆಯನ್ನು ತಿರಸ್ಕಾರ ಅಥವಾ ಅಸಡ್ಡೆ ಇದೆ ಅಂತ ಅಲ್ಲ. ಇಂಗ್ಲೀಷ್ ಮಾದ್ಯಮದಲ್ಲಿ ಓದಿದರೆ ಮಾತ್ರ ಒಳ್ಳೆಯ ಕೆಲಸ, ಸ್ಥಾನಮಾನ ಎಂದು ನಂಬಿದ ಮನಸ್ಥಿತಿ ಇರುವ ಮಂದಿಯಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡಬಹುದು ಎನ್ನುವುದನ್ನು ನಾಡಿನ ಜನರ ಮುಂದೆ ಇಡುವ ಪ್ರಯತ್ನ ನಮ್ಮದು ಎಂದಿದ್ದಾರೆ.
ಕಥೆ ಏನು?
ಕನ್ನಡ ಭಾಷಾ ಮಾದ್ಯಮದಲ್ಲಿ ವ್ಯಾಸಂಗ ಮಾಡಿಯೂ ಸಾಧನೆ ಮಾಡಬಹುದು ಎನ್ನುವುದರ ಸುತ್ತ ಧಾರಾವಾಹಿ ಕಥೆ ಸಾಗಲಿದೆ. ವಾಹಿನಿ ಕೊಟ್ಟ ಒಂದು ಸಾಲು ಹಿಡಿದು ಇಡೀ ಕಥೆಯನ್ನು ಸಿದ್ದ ಪಡಿಸಿದ್ದೇವೆ. ಹೀಗಾಗಿ ರಿಮೇಕ್ ಅಲ್ಲ. ಇದು ಸಂಪೂರ್ಣ ಸ್ವಮೇಕ್ ಧಾರಾವಾಹಿ. ಕನ್ನಡ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಒಳ್ಳೆ ಸ್ಥಾನ ಮಾನ ಪಡೆಯುವ ಜೊತೆಗೆ ರೋಲ್ ಮಾಡಲ್ ಆಗಬಹುದು ಎನ್ನುವುದನ್ನು ಧಾರಾವಾಹಿ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಕನ್ನಡ ಭಾಷಾ ಪ್ರೇಮದ ಸುತ್ತ ಸಾಗುವ ಕನ್ನಡ ಪ್ರೀತಿಸುವ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎನ್ನುವ ಭರವಸೆ ನಿರ್ದೇಶಕ ಪ್ರೀತಮ್ ಅವರದು,
ಅಜ್ಜಿ ಪಾತ್ರದಲ್ಲಿ ಮಹಾಲಕ್ಷ್ಮಿ;
ಎಪ್ಪತ್ತು, ಎಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗುವ ಗುರುತಿಸಿಕೊಂಡು ಹಲವು ಯಶಸ್ವಿ ಚಿತ್ರಗಳ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದ ಹಿರಿಯ ನಟಿ ಮಹಾಲಕ್ಷ್ಮಿ ಬರೋಬ್ಬರಿ 30 ವರ್ಷಗಳ ಬಳಿಕ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಅದು ಧಾರಾವಾಹಿ ಮೂಲಕ ಎನ್ನುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ ನಿರ್ದೇಶಕರು.
ಇತ್ತೀಚೆಗೆ ಹಿರಿಯ ನಟಿ ಮಾಹಾಲಕ್ಷ್ಮಿ ಅವರ ಬಗ್ಗೆ ಆರ್ಟಿಕಲ್ ಬಂದಿತ್ತು. ಅದನ್ನು ಓದಿದ್ದೆ, ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಗೆ ಯಾಕೆ ಸಂಪರ್ಕಿಸಬಾರದು. ಒಪ್ಪಿಕೊಂಡರೆ ನಮ್ಮ ಅದೃಷ್ಠ ಎನ್ನುವ ಅಳುಕಿನಿಂದಲೇ ಸಂಪರ್ಕ ಮಾಡಿದೆವು. ಕಥೆ, ಪಾತ್ರ ಕೇಳಿ ಖುಷಿಯಿಂದ ನಟಿಸಲು ಒಪ್ಪಿಕೊಂಡರು. ಇದರಿಂದ ನಮ್ಮ ಧಾರಾವಾಹಿಗೂ ಇನ್ನಷ್ಟು ತೂಕ ಬಂದಿದೆ.ಒಂದು ಕಡೆ ಕನ್ನಡ ಭಾಷಾ ಮಾಧ್ಯಮದ ಕಥೆಯನ್ನು ಜನರ ಮುಂದು ಇಡುತ್ತಿದ್ದು ಇದರ ಜೊತೆಗೆ ಹಿರಿಯ ನಟಿ ಮಹಾಲಕ್ಷ್ಮಿ ಅವರು ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇಡೀ ತಂಡಕ್ಕೆ ಖುಷಿಯ ಸಂಗತಿ ಎಂದಿದ್ದಾರೆ.
ಮಹಾಲಕ್ಷ್ಮಿ ಅವರ ಪಾತ್ರ ಏನು:
ಮೂರು ದಶಕಗಳ ಬಳಿಕ ಮರಳಿ ಬಣ್ಣದ ಜಗತ್ತಿಗೆ ಅದರಲ್ಲಿಯೂ ಕಿರುತೆರೆಯ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುವ ಹಿರಿಯ ನಟಿ ಮಹಾಲಕ್ಷ್ಮಿ ಅವರು ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಹಂತದಲ್ಲಿ ನಾಯಕ -ನಾಯಕಿಯನ್ನು ಒಂದು ಮಾಡುವ ಪ್ರಮುಖ ಪಾತ್ರ ಅವರದು.
30 ವರ್ಷಗಳ ಬಳಿಕ ಹಿರಿಯ ನಟಿ ಮಹಾಲಕ್ಷ್ಮಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತನಾಡುತ್ತಾರೆ. ಅವರ ಮಾತಿನಲ್ಲಿ ತಮಿಳು ಮಿಕ್ಸ್ ಇರುವುದರಿಂದ ಅವರ ಪಾತ್ರಕ್ಕೆ ಅವರ ಬಳಿಯೇ ಧ್ವನಿ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಕಥೆ, ಪಾತ್ರ, ಧಾರಾವಾಹಿ ಎಲ್ಲರಿಗೂ ಇಷ್ಟವಾಗಲಿದೆ ಎಂದು ಭರವಸೆ ನೀಡಿದ್ಧಾರೆ ಪ್ರೀತಮ್.
ಯಾರೆಲ್ಲಾ ಕಲಾವಿದರಿದ್ದಾರೆ:
ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ರಕ್ಷಿತ್ ಮತ್ತು ಪ್ರಿಯಾ ನಾಯಕ- ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಜ್ಜಿ ಪಾತ್ರದಲ್ಲಿ ಮಹಾಲಕ್ಷ್ಮಿ, ಅಜ್ಜನ ಪಾತ್ರದಲ್ಲಿ ಹಿರಿಯ ನಟ ರಮೇಶ್ ಭಟ್, ಪ್ರಮುಖ ಪಾತ್ರಗಳಲ್ಲಿ ಲಕ್ಷ್ಮಿ ಸಿದ್ದಯ್ಯ, ಶ್ರೀನಾಥ್ ವಸಿಷ್ಠ, ರಾಜಗೋಪಾಲ್ ಜೋಷಿ, ಸಂದೀಪ್ ನೀನಾಸಂ, ರಶ್ಮಿ, ಅನು ಪೂವಮ್ಮ, ಪ್ರಸನ್ನ, ಪ್ರದೀಪ್ ಸೇರಿದಂತೆ ಕಲಾವಿದರ ದೊಡ್ಡ ಬಳಗವೇ ಧಾರಾವಾಹಿಯಲ್ಲಿದೆ ಎಂದರು ನಿರ್ದೇಶಕ ಪ್ರೀತಮ್.
ಚಿತ್ರೀಕರಣ ಎಲ್ಲಿ:
“ಮಾಲ್ಗುಡಿ ಡೇಸ್” ಧಾರಾವಾಹಿ ನಿರ್ಮಾಣ ಮಾಡಿದ್ದ ಊರಿನಲ್ಲಿ, ಅದೇ ಮನೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಇದು ಕೂಡ ಧಾರಾವಾಹಿಯ ಮತ್ತೊಂದು ವಿಶೇಷವಾಗಿದೆ.
ಮಾಲ್ಗುಡಿ ಡೇಸ್ ಧಾರಾವಾಹಿ ನೋಡಿದವರಿಗೆ ಊರು, ಮನೆ ಥಟ್ಟನೆ ನೆನಪಾಗುತ್ತದೆ. ಧಾರಾವಾಹಿಯ ಮೂಲಕ ಭಾಷೆಯ ಮಹತ್ವ ಹೇಳುವ ಜೊತೆಗೆ ಆಗುಂಬೆಯ ದೃಶ್ಯ ವೈಭವದ ರಮಣೀಯತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
• ಡಬ್ಬಿಂಗ್, ಸ್ವಮೇಕ್ ಸೀರಿಯಲ್ ಪೈಪೋಟಿಯಲ್ಲಿ ಹೇಗೆ ಗಮನ ಸೆಳೆಯುತ್ತದೆ?
ಕಾವೇರಿ ಕನ್ನಡ ಮೀಡಿಯಂ ನಲ್ಲಿ ಆಯ್ಕೆ ಮಾಡಿಕೊಂಡಿರುವ ಕಥೆ, ಧಾರಾವಾಹಿಯ ಹೈಲೈಟ್. ಜೊತೆಗೆ ಹಿರಿಯ ನಟಿ ಮಹಾಲಕ್ಷ್ಮಿ ಕನ್ನಡಕ್ಕೆ ಮರಳಿ ಬಂದಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ಇತ್ತೀಚೆಗೆ ಧಾರಾವಾಹಿಗಳು ಹೆಚ್ಚಾಗಿ ಫ್ಯಾಮಿಲಿ ಡ್ರಾಮವನ್ನೇ ಹೆಚ್ಚಾಗಿ ಅವಲಂಬಿತವಾಗಿದ್ದಾರೆ. ತುಸು ಭಿನ್ನ ಎನ್ನುವಂತೆ ಸ್ಟಾರ್ ಸುವರ್ಣ ನೀಡಿದ ಕಥೆಯ ಎಳೆ ಇಟ್ಟುಕೊಂಡು ಧಾರಾವಾಹಿ ಮಾಡುತ್ತಿದ್ದೇವೆ. ಸಂಪೂರ್ಣ ಹೊಸ ಕಥೆ. ಕಾವೇರಿ ಕನ್ನಡ ಮೀಡಿಯಂ ನಲ್ಲಿ ಫ್ಯಾಮಿಲಿ ಡ್ರಾಮ ಇಲ್ಲ ಎಂದಿಲ್ಲ. ಆದರೆ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿದ್ದೇವೆ.ಅದು ಕೈ ಹಿಡಿಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
• ನಿಮ್ಮ ಹಿನ್ನೆಲೆ ಬಗ್ಗೆ ಹೇಳುವುದಾದರೆ
ಇದುವರೆಗೂ ರಾಧಾ ಕಲ್ಯಾಣ, ಕೆಂಡ ಸಂಪಿಗೆ. ಮೀನಾಕ್ಷಿ ಮದುವೆ ಸೇರಿದಂತೆ 13 ಧಾರಾವಾಹಿ ನಿರ್ದೇಶನ ಮಾಡಿದ್ದೇನೆ. ಕೆಲವು ಧಾರಾವಾಹಿಯನ್ನು ನಿರ್ಮಾಣವನ್ನೂ ಮಾಡಿದ್ದೇನೆ. ಪ್ರೊಡಕ್ಷನ್‍ನಲ್ಲಿ ಪತ್ನಿ ಸಿಂಚನ್ ಸಾಥ್ ನೀಡಿದ್ದಾರೆ. ಹೀಗಾಗಿ ಯಾವುದು ಸಮಸ್ಯೆ ಇಲ್ಲದಂತೆ ನಡೆದುಕೊಂಡು ಬರುತ್ತಿದೆ. ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಗೆ ನಮ್ಮದೇ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದೇವೆ.
• ವಾಹಿನಿಯಿಂದ ಏನಾದರೂ ಕಟ್ಟುಪಾಡು:
ವಾಹಿನಿಯರು ಹೇಳಿದ್ದನ್ನು ಗ್ರಹಿಸಿಕೊಂಡರೆ ಯಾವುದೂ ಸಮಸ್ಯೆಯಾಗುವುದಿಲ್ಲ. ಇದುವರೆಗೆ ಮಾಡಿರುವ ಎಲ್ಲಾ ಧಾರಾವಾಹಿಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ವಾಹಿನಿ ಅವರು ಹೇಳಿದ್ದನ್ನು ಗ್ರಹಿಸಿದರೆ ಎಲ್ಲರಿಗೂ ಒಳ್ಳೆಯದು, ಧಾರಾವಾಹಿ ಮುನ್ನೆಡೆಯುವುದೇ ಜನ ನೋಡಿದಾಗ. ಜನ ನೋಡಿದರೆ ತಾನಾಗಿಯೇ ಟಿಆರ್‍ಪಿ ಬರುತ್ತೆ. ಜೊತೆಗೆ ಆದಾಯವೂ ಕೂಡ. ಕೊನೆಗೆ ಮುಖ್ಯವಾಗುವುದು ಬ್ಯುಸಿಸೆನ್ ತಾನೆ. ಹೀಗಾಗಿ ಒಳ್ಳೆಯ ಕಂಟೆಂಟ್ ಕಡೆಗೆ ಗಮನ ಹರಿಸಿದ್ದೇವೆ.
*ಎಷ್ಟು ಎಪಿಸೋಡು ಮಾಡುವ ಗುರಿಇದೆ
ನಮಗೆ ಒಂದು ಸಾವಿರ ಎಪಿಸೋಡ್ ಮಾಡಬೇಕು ಸಾಧ್ಯವಾದರೆ ಅದನ್ನೂ ಮೀರಿ ನಡೆಯಬೇಕು ಎನ್ನುವ ಕನಸಿದೆ. ಗುರಿ ಇದೆ. ಎಲ್ಲದಕ್ಕೂ ಪ್ರೇಕ್ಷಕ ಹೇಗೆ ಧಾರಾವಾಹಿಯನ್ನು ತೆಗೆದುಕೊಳ್ಳುತ್ತಾನೆ ಎನ್ನುವುದರ ಮೇಲೆ ಸಂಚಿಕೆ ನಿರ್ಧರಿತವಾಗಿದೆ. ಜೊತೆಗೆ ಟಿಆರ್‍ಪಿ ಕೂಡ.
• ಅದ್ದೂರಿ ಮೇಕಿಂಗ್:
ನಾಯಕ ಶಿಕ್ಷಣ ಸಂಸ್ಥೆ ನಡೆಸುವನು, ಹೀಗಾಗಿ ಆತನ ಇಂಟ್ರಡಕ್ಷನ್ ಅನ್ನು ಹೆಲಿಕ್ಯಾಪ್ಟರ್ ಮೂಲಕ ಪರಿಚಯ ಮಾಡಲಾಗುತ್ತಿದೆ. ಈ ಹಿಂದೆ ಗಿಣಿ ರಾಮದಲ್ಲಿ ನಾಯಕನ ಇಂಟ್ರಡಕ್ಷನ್ ಅಂಡರ್ ವಾಟರ್‍ನಲ್ಲಿ ಮಾಡಿದ್ದವೆ. ಕಾವೇರಿ ಕನ್ನಡ ಮೀಡಿಯಂನಲ್ಲಿ ಕಾಪ್ಟರ್ ಮೂಲಕ ಎಂಟ್ರಿ ಕೊಡುತ್ತಿದ್ದಾನೆ. ಜೊತೆಗೆ ಅದ್ದೂರಿ ಮೇಕಿಂಗ್ ಗಮನ ಸೆಳೆಯಲಿದೆ. ನಾಯಕಿ,ನಾಯಕ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಸನ್ನಿವೇಶವೂ ಬರಲಿದೆ ಎಂದಿದ್ಧಾರೆ ನಿರ್ದೇಶಕ, ನಿರ್ಮಾಪಕರು ಆಗಿರುವ ಪ್ರೀತಮ್.
ಒಳ್ಳೆಯ ಅಮ್ಮನ ಪಾತ್ರ
ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಪಾತ್ರದ ಹೆಸರು ಅಂಬಿಕಾ. ನಾಯಕನ ತಾಯಿ. ಒಳ್ಳೆ ಅಮ್ಮನ ಪಾತ್ರ. ಇದುವರೆಗೆ ಮಾಡಿರುವ ಅಮ್ಮನ ಪಾತ್ರಕ್ಕಿಂತ ಬೇರೆ ರೀತಿ. ಸೀದಾ ಸದಾ ಅಮ್ಮನಿಗಿಂತ ಈಗ ಮಾರ್ಡನ್ ಅಮ್ಮ. ಒಳ್ಳೆಯ ಪಾತ್ರ ಸಿಕ್ಕಿದೆ ಎಂದರು ಲಕ್ಷ್ಮಿಸಿದ್ದಯ್ಯ